Saturday, Jul 11 2020 | Time 09:31 Hrs(IST)
Health -Lifestyle Share

ಕೋವಿಡ್ ವರ್ಧನೆ : ಮಂಗಳೂರು ನಗರ ಕಾರ್ಪೊರೇಷನ್ ಗೆ ಬೀಗ

ಮಂಗಳೂರು, ಜೂನ್ 29 (ಯುಎನ್ಐ) ವೇಗವಾಗಿ ಹರಡುತ್ತಿರುವ ಕೊರೋನಾ ವೈರಸ್ ನಿಯಂತ್ರಿಸುವ ಪ್ರಯತ್ನದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರ ಕಾರ್ಪೊರೇಷನ್ ಕಚೇರಿಗೆ ಒಂದು ವಾರದಮಟ್ಟಿಗೆ ಬೀಗ ಹಾಕಲಾಗಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಸಾರ್ವಜನಿಕರಲ್ಲಿ ಶಿಸ್ತು ತರುವ ನಿಟ್ಟಿನಲ್ಲಿ ಮತ್ತು ಸಂದರ್ಶಕರನ್ನು ನಿಯಂತ್ರಿಸಲು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಸಿಟಿ ಕಾರ್ಪೊರೇಷನ್ ಮೇಯರ್ ದಿವಾಕರ್ ಅವರು ಸೋಮವಾರದಿಂದ ಒಂದು ವಾರ ಕಚೇರಿಯನ್ನು ಮುಚ್ಚಲು ಆದೇಶಿಸಿದ್ದಾರೆ.
ಈ ಸಂದರ್ಭದಲ್ಲಿ ಸಹಕಾರ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿರುವ ಮೇಯರ್, ವೈರಸ್ ನಿಯಂತ್ರಿಸಲು ಹರಡಲು ಆಡಳಿತದೊಂದಿಗೆ ಕೈಜೋಡಿಸುವಂತೆ ಕೋರಿದ್ದಾರೆ. ಯುಎನ್‍ಐ ಎಸ್‍ಎ ವಿಎನ್ 1414