Monday, Oct 26 2020 | Time 03:11 Hrs(IST)
Health -Lifestyle Share

ಕೋವಿಡ್ : ವಿದ್ಯಾಗಮ ಶಿಕ್ಷಕಿ ಸಾವು, ಪತಿ ಚೇತರಿಕೆ

ಮೂಡಬಿದಿರೆ, ಅ 16 (ಯುಎನ್‍ಐ) ರಾಜ್ಯ ಸರ್ಕಾರದ ವಿದ್ಯಾಗಮ ಯೋಜನೆಯಡಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

ವಿದ್ಯಾಗಮ ಯೋಜನೆಯಡಿ ವಠಾರಗಳಿಗೆ ತೆರಳಿ ಬೋಧಿಸುತ್ತಿದ್ದ ಶಿಕ್ಷಕಿ ಪದ್ಮಶ್ರೀ ಯವರು ಸೋಂಕಿನಿಂದಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಶಿಕ್ಷಕಿಯ ಪತಿ ಹಾಗೂ ಮಗನಲ್ಲಿಯೂ ಸೋಂಕು ಧನಾತ್ಮಕವಾಗಿತ್ತಾದರೂ, ಚೇತರಿಸಿಕೊಂಡಿದ್ದಾರೆ.

ಶಿಕ್ಷಕಿಯ ಶ್ವಾಸಕೋಶದಲ್ಲಿ ಗಂಭೀರ ಸಮಸ್ಯೆ ಇದೆ ಎಂದು ವೈದ್ಯರು ತಿಳಿಸಿದ್ದರು. ಗುರುವಾರ ಆಕೆಯ ಸ್ಥಿತಿ ಗಂಭೀರವಾದ ಕಾರಣ, ಚಿಕಿತ್ಸೆಗಾಗಿ ವಿಮಾನದ ಮೂಲಕ ಶುಕ್ರವಾರ ಬೆಂಗಳೂರಿಗೆ ಸಾಗಿಸಲು ನಿರ್ಧರಿಸಲಾಗಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಪದ್ಮಾಕ್ಷಿ ಅವರಿಗೆ ಕೊರೋನಾ ಸೋಂಕಿರುವ ಕುರಿತು ಮಾಹಿತಿ ಪಡೆದಿದ್ದ ಮುಖ್ಯಮಂತ್ರಿ ಬಿ.ಎಸ್‍. ಯಡಿಯೂರಪ್ಪ, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದರು. ಆದರೆ ಶಿಕ್ಷಕಿ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ.

ಯುಎನ್‍ಐ ಎಸ್‍ಎ 1452
More News

ಕೋವಿಡ್ 19 : ಪೋಲಿಷ್ ಅಧ್ಯಕ್ಷರಿಗೆ ಸೋಂಕು ದೃಢ

24 Oct 2020 | 3:39 PM

 Sharesee more..
ಕೋವಿಡ್ 19: ದೇಶಾದ್ಯಂತ ಒಂದೇ ದಿನ 54,366 ಪ್ರಕರಣ, 690 ಸಾವು

ಕೋವಿಡ್ 19: ದೇಶಾದ್ಯಂತ ಒಂದೇ ದಿನ 54,366 ಪ್ರಕರಣ, 690 ಸಾವು

23 Oct 2020 | 3:11 PM

ನವದೆಹಲಿ, ಅ 22 (ಯುಎನ್ಐ) ಕಳೆದ 24 ಗಂಟೆಗಳಲ್ಲಿ ಭಾರತವು 54,366 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ದೇಶದ ಒಟ್ಟಾರೆ ಸೋಂಕಿನ ಸಂಖ್ಯೆ 77.61 ಲಕ್ಷಕ್ಕೆ ಏರಿಕೆಯಾಗಿದೆ. ಮತ್ತು 690 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 1,17,306 ಕ್ಕೆ ಹೆಚ್ಚಳವಾಗಿದೆ.

 Sharesee more..
ಕೊರೋನಾ: ಒಂದೇ ದಿನ 55, 722 ಸೋಂಕು ಪ್ರಕರಣ, 75 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಕೊರೋನಾ: ಒಂದೇ ದಿನ 55, 722 ಸೋಂಕು ಪ್ರಕರಣ, 75 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

19 Oct 2020 | 2:38 PM

ನವದೆಹಲಿ, ಅ 19 (ಯುಎನ್‍ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 55,722 ಕೊವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 75 ಲಕ್ಷ ದಾಟಿದೆ.

 Sharesee more..