Friday, Sep 18 2020 | Time 15:33 Hrs(IST)
  • ಐಪಿಎಲ್‌ 2020: ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್‌ ಕಿಂಗ್ಸ್ ನಡುವೆ ಆರಂಭಿಕ ಪಂದ್ಯ ನಾಳೆ
  • ಕೃಷಿ ವಿಧೇಯಕಗಳಿಗೆ ಲೋಕಸಭೆ ಅಂಗೀಕಾರ ಐತಿಹಾಸಿಕ :ಪ್ರಧಾನಿ ಮೋದಿ
  • ಐಪಿಎಲ್ 2020: ರಾಯಲ್‌ ಚಾಲೆಂಜರ್ಸ್‌ ನೂತನ ಹಾಡು ಬಿಡುಗಡೆ
  • ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ : ವಿವಿಧ ಯೋಜನೆಗಳಿಗೆ ಅನುಮೋದನೆ ಕೋರಿ ಮನವಿ
  • ಗೋಂದಿ ಯೋಜನೆ ಅಡಿ ಕೆರೆಗಳಿಗೆ ನೀರು: ಸಚಿವ ಸಿ ಟಿ ರವಿ
  • ರೈತರು ಪಂಜಾಬ್ ನ ಆತ್ಮ, ಅದರ ಮೇಲಿನ ದಾಳಿ ಸಹಿಸಲು ಸಾಧ್ಯವಿಲ್ಲ; ನವಜ್ಯೋತ್ ಸಿಂಗ್ ಸಿಧು
  • ಈ ವರ್ಷದ ಐಪಿಎಲ್‌ ಟೂರ್ನಿ ತುಂಬಾ ವಿಶೇಷತೆಯಿಂದ ಕೂಡಿದೆ: ವಿರೇಂದ್ರ ಸೆಹ್ವಾಗ್‌
  • ಮುಂಬೈ ಇಂಡಿಯನ್ಸ್‌ ತಂಡದ ಓಪನರ್ಸ್‌ ಯಾರೆಂದು ಬಹಿರಂಗ ಪಡಿಸಿದ ಜಯವರ್ಧನೆ
  • ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್
  • ನೆರೆ ಪರಿಹಾರ ಕೈಗೊಳ್ಳಲು ಹೆಚ್ಚಿನ ನೆರವು ನೀಡಿ: ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಮನವಿ
  • ರೈಲ್ವೆ ಖಾಸಗೀಕರಣ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ: ಪಿಯೂಷ್ ಗೋಯಲ್
  • ಅಶೋಕ್ ಗಸ್ತಿ ಬದುಕಿದ್ದಾಗಲೇ ಸಂತಾಪ ಸೂಚಿಸಿದ್ದೆ: ರಾಜ್ಯಸಭೆಯಲ್ಲಿ ಎಂ ವೆಂಕಯ್ಯ ನಾಯ್ಡು
  • ಕೆಆರ್ ಎಸ್ ಪಕ್ಷದ ‘ಚಲಿಸು ಕರ್ನಾಟಕ’ ಸೈಕಲ್ ಯಾತ್ರೆ ತಾತ್ಕಾಲಿಕ ಸ್ಥಗಿತ
  • ರೈತರನ್ನು ತಪ್ಪು ದಾರಿಗೆಎಳೆಯುತ್ತಿರುವ ವಿಪಕ್ಷಗಳು: ಪ್ರಧಾನಿ ಕಿಡಿ
  • ಸೆ‌ 21ರಿಂದ ಶಾಲೆ ತೆರೆಯಲಿದೆ; ತರಗತಿ ಪ್ರಾರಂಭ ಇಲ್ಲ; ಸಚಿವ ಎಸ್ ಸುರೇಶ್ ಕುಮಾರ್
International Share

ಕೋವಿಡ್‍ ಸಾಂಕ್ರಾಮಿಕ ರೋಗ ಅಧ್ಯಕ್ಷೀಯ ಅವಧಿಯ ದೊಡ್ಡ ಸವಾಲು: ಒಪ್ಪಿಕೊಂಡ ಟ್ರಂಪ್

ವಾಷಿಂಗ್ಟನ್, ಸೆ 16 (ಸ್ಪುಟ್ನಿಕ್) ಕರೋನವೈರಸ್ ಸಾಂಕ್ರಾಮಿಕ ರೋಗ ದೇಶದ ಅಧ್ಯಕ್ಷರಾಗಿ ತಮ್ಮ ಮೊದಲ ಅವಧಿಯ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ.
‘ನಿಸ್ಸಂಶಯವಾಗಿ ಎಲ್ಲವೂ ಸರಿಯಾಗಿ ನಡೆಯುತ್ತಿದೆ. ಕೋವಿಡ್‍ ಅನ್ನು 'ಚೀನಾ ವೈರಸ್' ಎಂದೇ ಹೇಳಲು ಬಯಸುತ್ತೇನೆ. ಏಕೆಂದರೆ ಅದು ಚೀನಾದಿಂದ ಬಂದಿದೆ. ಕೊವಿಡ್‍ಗೆ ಅದೇ ಸೂಕ್ತ ಪದ ಎಂದು ಭಾವಿಸಿದ್ದೇನೆ.’ ಎಂದು ಟ್ರಂಪ್ ಮಂಗಳವಾರ ಎಬಿಸಿ ನ್ಯೂಸ್ ಮಾಧ್ಯಮ ಆಯೋಜಿಸಿದ್ದ ಟೌನ್ ಹಾಲ್ ಸಭೆಯಲ್ಲಿ ಅಧ್ಯಕ್ಷೀಯ ಅವಧಿಯ ಕಠಿಣ ಭಾಗ ಯಾವುದು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿ ಹೇಳಿದ್ದಾರೆ.
ಜೀವನ ತುಂಬಾ ದುರ್ಬಲ ಎಂಬುದನ್ನು ಸಾಂಕ್ರಾಮಿಕ ರೋಗದಿಂದ ತಾವು ಕಲಿತಿರುವುದಾಗಿ ಟ್ರಂಪ್‍ ಹೇಳಿದ್ದಾರೆ.
‘ಜೀವನವು ತುಂಬಾ ದುರ್ಬಲ ಎಂಬುದನ್ನು ಕಲಿತಿದ್ದೇನೆ. ಏಕೆಂದರೆ ಆರೋಗ್ಯವಂತ ಜನರು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ. ಅದು ಅವರ ತಪ್ಪಲ್ಲ. ಇದು ಒಂದು ದೇಶದ ತಪ್ಪು. ಅದನ್ನು ತಡೆಯಬಹುದಿತ್ತು.’ ಎಂದು ಟ್ರಂಪ್‍ ಕರೋನವೈರಸ್ ಹರಡಲು ಚೀನಾವನ್ನು ಪರೋಕ್ಷವಾಗಿ ದೂಷಿಸಿದ್ದಾರೆ.
ಕಳೆದ ಜನವರಿಯಲ್ಲಿ ಎರಡೂ ದೇಶಗಳ ನಾಯಕರ ಒಪ್ಪಿದ್ದ ಅಮೆರಿಕ-ಚೀನಾ ವ್ಯಾಪಾರ ಒಪ್ಪಂದದ ಬಗ್ಗೆ ತಮ್ಮ ಮನೋಭಾವವನ್ನು ಬದಲಾಯಿಸಿಕೊಂಡಿರುವುದಾಗಿ ಟ್ರಂಪ್ ಹೇಳಿದ್ದಾರೆ. ಭಯಾನಕ ರೋಗವನ್ನು ಗಡಿಯಲ್ಲೇ ತಡೆಯಬಹುದಾಗಿದ್ದರಿಂದ ಒಪ್ಪಂದವನ್ನು ಇನ್ನು ಮುಂದೆ ಅದೇ ಹೆಮ್ಮೆಯಿಂದ ನೋಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಯುಎನ್ಐ ಎಸ್ಎಲ್ಎಸ್ 1203