InternationalPosted at: Jan 13 2021 5:30PM Shareಕೋವಿಡ್-19: ಜಪಾನ್ ನಲ್ಲಿ ತುರ್ತು ಪರಿಸ್ಥಿತಿ ವಿಸ್ತರಣೆಟೋಕಿಯೊ, ಜ 13 (ಯುಎನ್ಐ) ಜಪಾನ್ ನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಯೊಶಿಹಿಡೆ ಸುಗಾ ಅವರು ದೇಶದ ಇನ್ನೂ ಏಳು ಪ್ರಾಂತಗಳಲ್ಲಿ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಿದ್ದಾರೆ. ಫೆಬ್ರವರಿ 7 ರವರೆಗೆ ತುರ್ತು ಪರಿಸ್ಥಿತಿ ಜಾರಿಯಲ್ಲಿರುವ ಹೊಸ ಪ್ರಾಂತಗಳೆಂದರೆ, ಟೋಕಿಯೊದ ಉತ್ತರದ ಒಸಾಕಾ, ಐಚಿ, ತೋಚಿಗಿ, ಮಧ್ಯ ಜಪಾನ್ನ ಗಿಫು, ಪಶ್ಚಿಮದ ಹ್ಯೋಗೊ ಮತ್ತು ಕ್ಯೋಟೋ ಮತ್ತು ನೈರುತ್ಯ ಭಾಗದ ಫುಕುಯೋಕಾ ಆಗಿವೆ. ‘ಎಲ್ಲರೂ ಒಟ್ಟಿಗೆ ಕೆಲಸ ಮಾಡಿದರೆ, ಖಂಡಿತ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಾಣಬಹುದಾಗಿದೆ.’ ಎಂದು ಕರೋನವೈರಸ್ ನಿರ್ವಹಣೆ ಉಸ್ತುವಾರಿ ಸಚಿವ ಯಸುತೋಶಿ ನಿಶಿಮುರಾ ಹೇಳಿಕೆಯನ್ನು ಉಲ್ಲೇಖಿಸಿ ಕ್ಯೋಡೋ ಸುದ್ದಿಸಂಸ್ಥೆ ವರದಿ ಮಾಡಿದೆ. ಜಪಾನ್ನಲ್ಲಿ ಈವರೆಗೆ 2,98,172 ಮಂದಿ ಸೋಂಕಿಗೆ ಒಳಗಾಗಿದ್ದು, ಮಂಗಳವಾರ 4,539 ಹೊಸ ಪ್ರಕರಣಗಳು ವರದಿಯಾಗಿವೆ. ಯುಎನ್ಐ ಎಸ್ಎಲ್ಎಸ್ 1730