ನವದೆಹಲಿ, ಫೆ 20 (ಯುಎನ್ಐ) ಕಳೆದ 24 ಗಂಟೆಗಳಲ್ಲಿ ಭಾರತವು 13,993 ಹೊಸ ಕೋವಿಡ್ 19 ಸೋಂಕುಗಳನ್ನು ದಾಖಲಿಸಿದ್ದು, ಪ್ರಕರಣಗಳ ಒಟ್ಟು ಸಂಖ್ಯೆ 1,09,77,387 ಕ್ಕೆ ಏರಿಕೆಯಾಗಿದೆ. 101 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 1,56,212 ರಷ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಸಕ್ರಿಯ ಪ್ರಕರಣಗಳು 1,43,127 ಆಗಿದೆ. ಇದು ಒಟ್ಟು ಪ್ರಕರಣದ ಶೇಕಡಾ 1.30 ರಷ್ಟಿದೆ. ಹೊಸ ಸಾವು ನೋವುಗಳಲ್ಲಿ ಮಹಾರಾಷ್ಟ್ರ 44, ಕೇರಳ 15, ಪಂಜಾಬ್ 8, ತಮಿಳುನಾಡು 7, ಕರ್ನಾಟಕ 5 ಮತ್ತು ಛತ್ತೀಸ್ ಗಡದಲ್ಲಿ 3 ಮಂದಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ, 10,307 ಜನರು ಮಾರಣಾಂತಿಕ ವೈರಸ್ನಿಂದ ಗುಣಮುಖರಾಗಿದ್ದು, ಚೇತರಿಕೆಯ ಒಟ್ಟು ಸಂಖ್ಯೆ 1,06,78,048 ಕ್ಕೆ ಹೆಚ್ಚಳವಾಗಿದ್ದು, ಇದು ಪ್ರಕರಣದ 97.27 ಪ್ರತಿಶತದಷ್ಟಿದೆ. ಸಾವಿನ ಪ್ರಮಾಣ ಶೇಕಡಾ 1.42 ರಷ್ಟಿದೆ. ಕೇರಳದಲ್ಲಿ ಗರಿಷ್ಠ 4,854 ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 2,159 ಚೇತರಿಸಿಕೊಂಡಿವೆ.
ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಜನವರಿ 16 ರಂದು ಪ್ರಾರಂಭವಾದ ರಾಷ್ಟ್ರದ ಲಸಿಕಾ ಅಭಿಯಾನದ ಅಡಿಯಲ್ಲಿ ಲಸಿಕೆ ಪಡೆದವರ ಸಂಖ್ಯೆ 1,07,15,204 ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 5,27,197 ಜನರು ಲಸಿಕೆ ಪಡೆದಿದ್ದಾರೆ.
ಯುಎನ್ಐ ಎಸ್ಎ 1114