Monday, Oct 26 2020 | Time 04:22 Hrs(IST)
Health -Lifestyle Share

ಕೋವಿಡ್ 19 : ದೇಶದ ಸೋಂಕಿನ ಹೆಚ್ಚಳ 73,70,469 ; ಚೇತರಿಕೆ ದರ ಶೇ 87.56

ಕೋವಿಡ್ 19 : ದೇಶದ ಸೋಂಕಿನ ಹೆಚ್ಚಳ 73,70,469 ; ಚೇತರಿಕೆ ದರ ಶೇ 87.56
ಕೋವಿಡ್ 19 : ದೇಶದ ಸೋಂಕಿನ ಹೆಚ್ಚಳ 73,70,469 ; ಚೇತರಿಕೆ ದರ ಶೇ 87.56

ನವದೆಹಲಿ, ಅ 16 (ಯುಎನ್‍ಐ) ಕಳೆದ 24 ಗಂಟೆಯಲ್ಲಿ 63,371 ಪ್ರಕರಣಗಳು ಹೊಸದಾಗಿ ದಾಖಲಾದ ನಂತರ ಭಾರತದ ಕೋವಿಡ್ 19 ಮೊತ್ತವು 73,70,469 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ದೈನಂದಿನ ನವೀಕರಣದಲ್ಲಿ ತಿಳಿಸಿದೆ.

ಇದೇ ಅವಧಿಯಲ್ಲಿ 70,338 ಕೊರೋನಾ ವೈರಸ್ ಸೋಂಕಿತರು ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 64,53,780 ಕ್ಕೆ ತಲುಪಿದೆ. ಕಳೆದ ಒಂದು ದಿನದಲ್ಲಿ 895 ಸಾವುನೋವುಗಳೊಂದಿಗೆ, ಸಾವಿನ ಸಂಖ್ಯೆ ಕೂಡ 1,12,161 ಕ್ಕೆ ಏರಿದೆ,

ಶೇಕಡಾವಾರು ಪ್ರಕಾರ, ಸಕ್ರಿಯ ಪ್ರಕರಣಗಳು ಶೇಕಡ 10.92 ಆಗಿದೆ. ಚೇತರಿಕೆ ಪ್ರಮಾಣವು ಶೇಕಡ 87.56 ರಷ್ಟಿದ್ದರೆ, ಸಾವಿನ ಪ್ರಮಾಣವು ಶೇಕಡ 1.52 ರಷ್ಟಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಕಳೆದ 24 ಗಂಟೆಗಳಲ್ಲಿ 10,28,622 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಗುರುವಾರದವರೆಗೆ ಪರೀಕ್ಷಿಸಿದ ಒಟ್ಟು ಸಂಚಿತ ಮಾದರಿಗಳನ್ನು 9,22,54,927 ಕ್ಕೆ ತೆಗೆದುಕೊಳ್ಳಲಾಗಿದೆ.

ಏತನ್ಮಧ್ಯೆ, ಮಹಾರಾಷ್ಟ್ರವು ಗರಿಷ್ಠ ಪ್ರಕರಣ ಹೊಂದಿರುವ ರಾಜ್ಯವಾಗಿ ಮುಂದುವರೆದಿದೆ. ಜಾಗತಿಕವಾಗಿ, ಅಮೆರಿಕ ಹೆಚ್ಚು ಸೋಂಕಿಗೆ ಒಳಗಾಗಿದೆ, ನಂತರದ ಸ್ಥಾನದಲ್ಲಿ ಭಾರತ ಮತ್ತು ಬ್ರೆಜಿಲ್ ದೇಶಗಳಿವೆ.

ಯುಎನ್‍ಐ ಎಸ್‍ಎ 1207

More News

ಕೋವಿಡ್ 19 : ಪೋಲಿಷ್ ಅಧ್ಯಕ್ಷರಿಗೆ ಸೋಂಕು ದೃಢ

24 Oct 2020 | 3:39 PM

 Sharesee more..
ಕೋವಿಡ್ 19: ದೇಶಾದ್ಯಂತ ಒಂದೇ ದಿನ 54,366 ಪ್ರಕರಣ, 690 ಸಾವು

ಕೋವಿಡ್ 19: ದೇಶಾದ್ಯಂತ ಒಂದೇ ದಿನ 54,366 ಪ್ರಕರಣ, 690 ಸಾವು

23 Oct 2020 | 3:11 PM

ನವದೆಹಲಿ, ಅ 22 (ಯುಎನ್ಐ) ಕಳೆದ 24 ಗಂಟೆಗಳಲ್ಲಿ ಭಾರತವು 54,366 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ದೇಶದ ಒಟ್ಟಾರೆ ಸೋಂಕಿನ ಸಂಖ್ಯೆ 77.61 ಲಕ್ಷಕ್ಕೆ ಏರಿಕೆಯಾಗಿದೆ. ಮತ್ತು 690 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 1,17,306 ಕ್ಕೆ ಹೆಚ್ಚಳವಾಗಿದೆ.

 Sharesee more..
ಕೊರೋನಾ: ಒಂದೇ ದಿನ 55, 722 ಸೋಂಕು ಪ್ರಕರಣ, 75 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಕೊರೋನಾ: ಒಂದೇ ದಿನ 55, 722 ಸೋಂಕು ಪ್ರಕರಣ, 75 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

19 Oct 2020 | 2:38 PM

ನವದೆಹಲಿ, ಅ 19 (ಯುಎನ್‍ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 55,722 ಕೊವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 75 ಲಕ್ಷ ದಾಟಿದೆ.

 Sharesee more..