Tuesday, Sep 29 2020 | Time 12:12 Hrs(IST)
 • ಸೂಪರ್‌ ಓವರ್‌ನಲ್ಲಿ ಯಾರ್ಕರ್‌, ನಿಧಾನಗತಿಯ ಎಸೆತಗಳು ನನ್ನ ತಂತ್ರವಾಗಿತ್ತು: ನವದೀಪ್‌ ಸೈನಿ
 • ಪೂಂಚ್‌ನಲ್ಲಿ ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ
 • ಇಶಾನ್‌ ಕಿಶಾನ್‌ ಸೂಪರ್‌ ಓವರ್‌ನಲ್ಲಿ ಫ್ರೆಶ್‌ ಆಗಿ ಕಾಣಿಸಲಿಲ್ಲ: ರೋಹಿತ್‌ ಶರ್ಮಾ
 • ಸುಶಾಂತ್ ಸಾವಿನ ಕುರಿತು ಏಮ್ಸ್ ಮಹತ್ವದ ವರದಿ
 • ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ಸುಖಬೀರ್
 • ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಯುವತಿ ಸಾವು
 • ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್
 • ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ
 • ವಿಶ್ವ ಹೃದಯ ದಿನ: ಹೃದಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದ ಸಲಹೆ
 • ಜಾಗತಿಕ ಕೋವಿಡ್ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು 'ಸಂಕಟ ಮೈಲಿಗಲ್ಲು'- ವಿಶ್ವಸಂಸ್ಥೆ ಮುಖ್ಯಸ್ಥ ಗುಟೇರಸ್
 • ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಉಮಾ ಭಾರತಿ
 • ನಮಾಮಿ ಗಂಗೆ : 6 ಬೃಹತ್ ಯೋಜನೆಗಳಿಗೆ ಮೋದಿ ಚಾಲನೆ
Health -Lifestyle Share

ಕೋವಿಡ್ 19 : ದೇಶಾದ್ಯಂತ ಒಂದೇ ದಿನ 92071 ಪ್ರಕರಣ, 1,136 ಸಾವು

ಕೋವಿಡ್ 19 : ದೇಶಾದ್ಯಂತ ಒಂದೇ ದಿನ 92071 ಪ್ರಕರಣ, 1,136 ಸಾವು
ಕೋವಿಡ್ 19 : ದೇಶಾದ್ಯಂತ ಒಂದೇ ದಿನ 92071 ಪ್ರಕರಣ, 1,136 ಸಾವು

ನವದೆಹಲಿ, ಸೆ 14 (ಯುಎನ್‍ಐ) ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 92,071 ಹೊಸ ಕೋವಿಡ್ 19 ಪ್ರಕರಣಗಳು ಮತ್ತು 1,136 ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಸೋಮವಾರ ತಿಳಿಸಿದೆ.

ಹೊಸ ಸೇರ್ಪಡೆಗಳೊಂದಿಗೆ, ಎರಡನೇ ಅತಿ ಹೆಚ್ಚು ಸೋಂಕು ಹೊಂದಿರುವ ದೇಶದಲ್ಲಿ ಪ್ರಕರಣದ ಒಟ್ಟು ಸಂಖ್ಯೆ 48,46,428 ಕ್ಕೆ ಏರಿಕೆಯಾಗಿದ್ದರೆ, ಸಾವಿನ ಸಂಖ್ಯೆ 79,722 ಕ್ಕೆ ಏರಿದೆ.

ಭಾನುವಾರದಿಂದ ಗುಣಮುಖರಾಗಿ, ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 77,512 ಎಂದು ಸರ್ಕಾರದ ದತ್ತಾಂಶ ನವೀಕರಣ ತಿಳಿಸಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಚೇತರಿಸಿಕೊಂಡ ಒಟ್ಟು ಸಂಖ್ಯೆ 37,80,108 ಸಂಖ್ಯೆಯಲ್ಲಿ ಮತ್ತು ಶೇಕಡಾ 78.00 ಕ್ಕೆ ತಲುಪಿದೆ. ಸಾವಿನ ಪ್ರಮಾಣವು ಶೇಕಡಾ 1.64 ರಷ್ಟಿದೆ.

ಮಹಾರಾಷ್ಟ್ರವು ದೇಶದ ಅತಿ ಹೆಚ್ಚು ಸೋಂಕುಪೀಡಿತ ರಾಜ್ಯವಾಗಿ ಉಳಿದಿದೆ, ಆಂಧ್ರಪ್ರದೇಶ ಮತ್ತು ತಮಿಳುನಾಡು ನಂತರದ ಸ್ಥಾನದಲ್ಲಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಲಿಯ (ಐಸಿಎಂಆರ್) ಪ್ರಕಾರ, ಕಳೆದ 24 ಗಂಟೆಗಳಲ್ಲಿ 9,78,500 ಮಾದರಿಗಳನ್ನು ಪರೀಕ್ಷಿಸಲಾಯಿತು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಭಾನುವಾರದವರೆಗೆ 5,72,39,428 ಮಾದರಿಗಳನ್ನು ಸೋಂಕು ಪತ್ತೆಗಾಗಿ ಪರೀಕ್ಷಿಸಲಾಗಿದೆ.

ಜಾಗತಿಕವಾಗಿ, ಅಮರಿಕ ಅತಿಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿರುವ ಮೊದಲ ದೇಶವಾಗಿದ್ದರೆ, ಎರಡನೇ ಸ್ಥಾನದಲ್ಲಿ ಭಾರತ ಹಾಗೂ ಮೂರನೆಯ ಸ್ಥಾನದಲ್ಲಿ ಬ್ರೆಜಿಲ್ ದೇಶಗಳಿವೆ.

ಯುಎನ್‍ಐ ಎಸ್‍ಎ 1237

More News
ಮಧುಮೇಹ : ವಿಶ್ವದಲ್ಲೇ 2ನೇ ಸ್ಥಾನದಲ್ಲಿ ಭಾರತ

ಮಧುಮೇಹ : ವಿಶ್ವದಲ್ಲೇ 2ನೇ ಸ್ಥಾನದಲ್ಲಿ ಭಾರತ

24 Sep 2020 | 8:43 PM

ಕೋಲ್ಕತಾ, ಸೆ 24 (ಯುಎನ್‌ಐ) ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿದ್ದು, 77 ದಶಲಕ್ಷ ಪ್ರಕರಣಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.

 Sharesee more..
ಕೋವಿಡ್ 19 : ದೇಶಾದ್ಯಂತ ಒಂದೇ ದಿನ 86,508 ಸೋಂಕು ಪ್ರಕರಣ, 1,129 ಸಾವು

ಕೋವಿಡ್ 19 : ದೇಶಾದ್ಯಂತ ಒಂದೇ ದಿನ 86,508 ಸೋಂಕು ಪ್ರಕರಣ, 1,129 ಸಾವು

24 Sep 2020 | 3:55 PM

ನವದೆಹಲಿ, ಸೆ 24 (ಯುಎನ್‍ಐ) ಕಳೆದ 24 ಗಂಟೆಗಳಲ್ಲಿ ಭಾರತವು 86,508 ಕೋವಿಡ್ 19 ಪ್ರಕರಣದ ದಾಖಲಿಸಿದ್ದು, ಸೋಂಕಿತರ ಒಟ್ಟು ಸಂಖ್ಯೆ 57,32,519 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಗುರುವಾರ ತಿಳಿಸಿವೆ.

 Sharesee more..