Sunday, Jul 12 2020 | Time 23:53 Hrs(IST)
 • ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ 4 ವಿಕೆಟ್ ಜಯ
 • ಕೃಷಿ ಸಚಿವ ಬಿ ಸಿ ಪಾಟೀಲ್ ಒಂದು ವಾರ ಕ್ವಾರಂಟೈನ್ : ಸೋಂಕಿತರ ಸಂಪರ್ಕ ಹಿನ್ನಲೆ
 • ರಾಮನಗರ ಲಾಕ್‌ಡೌನ್‌ಗೆ ಎಚ್ ಡಿ ಕುಮಾರಸ್ವಾಮಿ ಸಲಹೆ
 • ಸೋಂಕಿತರಿಗೆ ಸೂಕ್ತ ಚಿಕಿತ್ಸೆ,ರೋಗ ಲಕ್ಷಣ ಪತ್ತೆಗಾಗಿ ತುರ್ತು ಸಹಾಯವಾಣಿ ಆರಂಭಿಸಲು ಸೂಚನೆ : ಡಾ ಸುಧಾಕರ್
 • ಕಾಂಗ್ರೆಸ್ ನಾಯಕತ್ವವನ್ನು ಭೇಟಿ ಮಾಡಲು ದೆಹಲಿಯಲ್ಲಿರುವ ಸಚಿನ್ ಪೈಲಟ್
 • 'ಕುವೆಂಪು ಹನುಮದ್ದರ್ಶನ' ಕೃತಿ ಲೋಕಾರ್ಪಣೆ ಮಾಡಿದ ಡಿಸಿಎಂ ಡಾ ಅಶ್ವಥ್ ನಾರಾಯಣ್
 • ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ
 • ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಕೊಲೆ
 • ಮಗಳಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಮಲತಂದೆ: ಪರಾರಿಯಾಗಿರುವ ಆರೋಪಿಗಾಗಿ ಶೋಧ
 • ಪೊಲೀಸರಿಗೆ ಕರೋನಾ ಸೋಂಕು ಹೆಚ್ಚಳ ತಡವಾಗಿ ಎಚ್ಚತ್ತ ಗೃಹ ಇಲಾಖೆ : ಸಿಬ್ಬಂದಿಗಳ ಕಾರ್ಯವಿಧಾನದಲ್ಲಿ ಬದಲಾವಣೆ
 • ರಾಜ್ಯದಲ್ಲಿ 2627 ಹೊಸ ಕೋವಿಡ್ ಪ್ರಕರಣಗಳು ವರದಿ, 71 ಸಾವು; ಸೋಂಕಿತರ ಸಖ್ಯೆ 38843ಕ್ಕೇರಿಕೆ
 • ರಾಜಕಾಲುವೆಗೆ ಬಿದ್ದ ಬಾಲಕಿಗಾಗಿ ಮುಂದುವರಿದ ಕಾರ್ಯಾಚರಣೆ: ಎರಡು ದಿನವಾದರೂ ಪತ್ತೆಯಿಲ್ಲ
 • ಕೊವಿಡ್‍: ಪರಪ್ಪನ ಅಗ್ರಹಾರ ಜೈಲಿನಲ್ಲಿ 56 ಕೈದಿಗಳಿಗೆ ಸೋಂಕು ದೃಢ
 • ಕೋವಿಡ್ ನಿಭಾಯಿಸಲು ಸರ್ಕಾರಕ್ಕೆ ಬೆಂಬಲ ನೀಡೋಣ, ಆದರೆ ಕೋವಿಡ್ ಕಾಲದ ಲೂಟಿಗಲ್ಲ; ಎಚ್‌ಡಿಕೆ
 • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಐವರು ಕೊರೊನಾದಿಂದ ಸಾವು: 46ಕ್ಕೇರಿದ ಸಾವಿನ ಸಂಖ್ಯೆ
Health -Lifestyle Share

ಕೋವಿಡ್ 19 : ದೇಶಾದ್ಯಂತ 5.5 ಲಕ್ಷ ಪ್ರಕರಣ, 16,475 ಸಾವು

ಕೋವಿಡ್ 19 : ದೇಶಾದ್ಯಂತ 5.5 ಲಕ್ಷ ಪ್ರಕರಣ, 16,475 ಸಾವು
ಕೋವಿಡ್ 19 : ದೇಶಾದ್ಯಂತ 5.5 ಲಕ್ಷ ಪ್ರಕರಣ, 16,475 ಸಾವು

ನವದೆಹಲಿ, ಜೂನ್ 29 (ಯುಎನ್‍ಐ) ದೇಶಾದ್ಯಂತ ಮಾರಕ ಕೋವಿಡ್ 19 ಸೋಂಕು ಪ್ರಕರಣ 5.5 ಲಕ್ಷಕ್ಕೇರಿದ್ದು, ಮೃತರ ಸಂಖ್ಯೆ 16,475ಕ್ಕೆ ತಲುಪಿದೆ.

ಕಳೆದ 24 ಗಂಟೆಗಳಲ್ಲಿ 19,459 ಪ್ರಕರಣಗಳ ತೀವ್ರ ಏರಿಕೆ ಕಂಡ ನಂತರ, ಭಾರತದ ಕೋವಿಡ್ -19 ಸಂಖ್ಯೆ 5.5 ಲಕ್ಷಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಭಾನುವಾರದಿಂದ 380 ಸಾವುಗಳು ದಾಖಲಾದ ನಂತರ ದೇಶಾದ್ಯಂತ ಒಟ್ಟು ದೃಢಪಡಿಸಿದ ಪ್ರಕರಣಗಳ ಸಂಖ್ಯೆ 5,48,318 ಆಗಿದ್ದು, 16,475 ರೋಗಿಗಳು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ.

ಇದುವರೆಗೆ 3,21,723 ಕೋವಿಡ್ 19 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ವಿರುದ್ಧ ದಿನದಿಂದ ದಿನಕ್ಕೆ ಸುಧಾರಿಸುತ್ತಿರುವ ಚೇತರಿಕೆ ದರವು ಪ್ರಸ್ತುತ ಶೇಕಡ 58.67 ರಷ್ಟಿದೆ.

ಭಾನುವಾರದವರೆಗೆ ದೇಶಾದ್ಯಂತ 82,98,362 ಮಾದರಿಗಳನ್ನು ವೈರಸ್‌ಗಾಗಿ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ನೀಡಿದೆ.

ಯುಎನ್‍ಐ ಎಸ್‍ಎ ವಿಎನ್ 1121