Sunday, Apr 5 2020 | Time 14:40 Hrs(IST)
 • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
 • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
 • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
 • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
 • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
 • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
 • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
 • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
 • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
 • ಕೊರೊನಾ - ಸಾವಿನ ಸಂಖ್ಯೆ ಹೆಚ್ಚಳ : ಟ್ರಂಪ್
 • ತಮಿಳುನಾಡಿನಲ್ಲಿ ಕರೋನವೈರಸ್‍ಗೆ ಇನ್ನೂ ಇಬ್ಬರು ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
 • ಕೊರೊನಾ ಅಲರ್ಟ್; ಮಹಾರಾಷ್ಟ್ರದಲ್ಲಿ ಭಾನುವಾರ ಒಂದೇ ದಿನ ೨೬ ಹೊಸ ಪ್ರಕರಣ
 • ಬಾಬು ಜಗಜೀವನ್‌ ರಾಮ್‌ ಜಯಂತಿ: ಪ್ರಧಾನಿ ಗೌರವ ಸಲ್ಲಿಕೆ
 • ಕೋವಿಡ್‌-19: ಸೋಂಕು ಪ್ರಕರಣಗಳ ಸಂಖ್ಯೆ 3374ಕ್ಕೇರಿಕೆ: 77 ಸಾವು, 266 ಮಂದಿ ಗುಣಮುಖ
 • ಬಾಬು ಜಗಜೀವನ್‌ ರಾಮ್‌ ಜಯಂತಿ: ಗಣ್ಯರಿಂದ ಗೌರವ ಸಲ್ಲಿಕೆ
National Share

ಕೋವಿಡ್ 19 ಸಹಾಯವಾಣಿ ಘೋಷಣೆ

ನವದೆಹಲಿ, ಮಾರ್ಚ್ 25 (ಯುಎನ್ಐ) ಕೊರೊನಾ ವೈರಾಣು ಸೋಂಕಿಗೆ ಬಗ್ಗೆ ಸರಿಯಾದ ಮಾಹಿತಿ ಪ್ರಚುರಪಡಿಸಲು ವಾಟ್ಸ್ ಅಪ್ ನೊಂದಿಗೆ ಸರ್ಕಾರ ಸಹಯೋಗ ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಘೋಷಿಸಿದ್ದಾರೆ .

ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯ ಜನತೆಯೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಅವರು, ಜನರು ಅಂಕಿಅಂಶ ಮತ್ತು ವಾಸ್ತವಗಳನ್ನು ತಿಳಿಯಬೇಕು, ವದಂತಿಗಳಿಗೆ ಕಿವಿಗೊಡಬಾರದು ಎಂದು ಕಿವಿಮಾತು ಹೇಳಿದರು. ವೈರಾಣುವಿಗೆ ಬಡವ ಬಲ್ಲಿದ ಎಂಬ ಭೇದವಿಲ್ಲ ಎಂದೂ ಹೇಳಿದರು. ಕೆಲವೊಮ್ಮೆ ಜನರು ಮುಖ್ಯ ವಿಚಾರಗಳಿಗೆ ಗಮನಹರಿಸುವುದಿಲ್ಲ, ಪ್ರಸ್ತುತ ಭಾರತದಲ್ಲಿ ಅದೇ ಪರಿಸ್ಥಿತಿ ಇದೆ ಎಂದರು.

ವಾಟ್ಸ್ ಅಪ್ ಸಂಖ್ಯೆ 9013151515 ರ ಮೂಲಕ ಸಹಾಯ ಕೇಂದ್ರ ಸಂಪರ್ಕಿಸಬಹುದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಈ ಸಂಖ್ಯೆಗೆ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ‘ನಮಸ್ತೆ’ ಎಂದು ಸಂದೇಶ ಕಳುಹಿಸುವ ಮೂಲಕ ನೆರವು ಪಡೆಯಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.
ಮಹಾಭಾರತ ಯುದ್ಧ ಜಯಿಸಲು 18 ದಿನ ಬೇಕಾಯಿತು, ಅದೇ ರೀತಿ ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ 21 ದಿನಗಳಾಗಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ತುರ್ತು ಸಂದರ್ಭದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಶುಶ್ರೂಶಕಿಯರು ಮತ್ತು ಇತರ ವೃತ್ತಿಪರರಿಗೆ ಸಹಕರಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಗೃಹ ಸಚಿವಾಲಯಕ್ಕೆ ಸೂಚಿಸಿರುವುದಾಗಿಯೂ ತಿಳಿಸಿದ್ದಾರೆ. ತಮ್ಮ ಕ್ಷೇತ್ರದ ಜನರ ಪ್ರಶ್ನೆಗಳಿಗೆ ಮತ್ತು ಸಂದೇಹಗಳಿಗೂ ಪ್ರಧಾನಿ ಮೋದಿ ಇದೇ ವೇಳೆ ಉತ್ತರಿಸಿದ್ದಾರೆ. ಇಂತಹ ಕಷ್ಟಕರ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಜನತೆಯೊಂದಿಗೆ ಇರಬೇಕಿತ್ತಾದರೂ ದೆಹಲಿಯಲ್ಲಿನ ಪರಿಸ್ಥಿತಿಯ ಕಾರಣ ಸಾಧ್ಯವಾಗಿಲ್ಲ, ಆದಾಗ್ಯೂ ವಾರಾಣಸಿ ಕ್ಷೇತ್ರದ ಬಗ್ಗೆ ಕ್ಷಣಕ್ಷಣದ ಮಾಹಿತಿ ಕಲೆಹಾಕುತ್ತಿರುವುದಾಗಿಯೂ ಅವರು ಹೇಳಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕೆ ಶಕ್ತಿ ಕೊಡುವೆ ಮಾತೆ ಶೈಲಪುತ್ರಿಗೆ ಪ್ರಾರ್ಥನೆ ಸಲ್ಲಿಸಿದ ವಾರಾಣಸಿ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.
ಯುಎನ್ಐ ಜಿಎಸ್ಆರ್ 2226