Saturday, Dec 5 2020 | Time 01:46 Hrs(IST)
Health -Lifestyle Share

ಕೋವಿಡ್ 19 : ಸೋಂಕಿನ ಸಂಖ್ಯೆ 90 ಲಕ್ಷಕ್ಕೆ ಏರಿಕೆ

ಕೋವಿಡ್ 19 : ಸೋಂಕಿನ ಸಂಖ್ಯೆ 90 ಲಕ್ಷಕ್ಕೆ ಏರಿಕೆ
ಕೋವಿಡ್ 19 : ಸೋಂಕಿನ ಸಂಖ್ಯೆ 90 ಲಕ್ಷಕ್ಕೆ ಏರಿಕೆ

ನವದೆಹಲಿ, ನ 20 (ಯುಎನ್‍ಐ) ಕಳೆದ 24 ಗಂಟೆಗಳಲ್ಲಿ 45,882 ಹೊಸ ಪ್ರಕರಣಗಳ ಬಳಿಕ ನ್ನು ಹೆಚ್ಚಿಸಿದ ನಂತರ ಭಾರತದ ಕೋವಿಡ್ -19 ಮೊತ್ತವು 90 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಈಗ 90,04,366 ಕ್ಕೆ ತಲುಪಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಗುರುವಾರ ಕೊರೋನಾ ಸೋಂಕಿಗೆ 584 ಜೀವಗಳು ಬಲಿಯಾದ ಬಳಿಕ ಸಾವಿನ ಒಟ್ಟು ಸಂಖ್ಯೆ 1,32,162 ಕ್ಕೆ ತಲುಪಿದೆ. ಪ್ರತಿದಿನ ನಿರಂತರವಾಗಿ ಇಳಿಮುಖವಾಗುತ್ತಿರುವ ಸಕ್ರಿಯ ಪ್ರಕರಣಗಳು, ಶುಕ್ರವಾರ 491 ರಷ್ಟು ಹೆಚ್ಚಳವಾಗಿದ್ದು, ಪ್ರಸ್ತುತ 4,43,794 ರಷ್ಟಿದೆ.

ಒಂದೇ ದಿನ 44,807 ಜನರು ಸೋಂಕಿನಿಂದ ಗುಣಮುಖರಾಗಿದ್ದು, ದೇಶಾದ್ಯಂತ ಇದುವರೆಗೆ 84,28,410 ಮಂದಿ ಚೇತರಿಸಿಕೊಂಡಿದ್ದಾರೆ. ಶೇಕಡಾವಾರು ಪ್ರಮಾಣದಲ್ಲಿ, ಸಕ್ರಿಯ ಪ್ರಕರಣಗಳು ಶೇ. 4.93, ಬಿಡುಗಡೆಯಾದವರು ಶೇ. 93.60 ಮತ್ತು ಸಾಂಕ್ರಾಮಿಕ ರೋಗದಿಂದ ಸಾವುಗಳು ದೇಶದ ಒಟ್ಟು ಪ್ರಕರಣಗಳ ಲೆಕ್ಕದಲ್ಲಿ ಶೇಕಡಾ 1.47 ರಷ್ಟಿದೆ. ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ಎದುರಿಸುತ್ತಿರುವ ಮತ್ತು ಪ್ರಕರಣಗಳಲ್ಲಿ ತೀವ್ರ ಏರಿಕೆಗೆ ಸಾಕ್ಷಿಯಾಗುತ್ತಿರುವ ರಾಷ್ಟ್ರ ರಾಜಧಾನಿಯಲ್ಲಿ, ಸೋಂಕು ತಡೆಗೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸದಿರುವ ಜನರಿಗೆ ದಂಡದ ಪ್ರಮಾಣವನ್ನು ಸರ್ಕಾರ 2 ಸಾವಿರ ರೂಗಳಿಗೆ ಹೆಚ್ಚಿಸಿದೆ. ನಗರದಾದ್ಯಂತ ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯವು ಸಮನ್ವಯ ಸಾಧಿಸುತ್ತಿದ್ದು, ಶೀಘ್ರದಲ್ಲೇ 1300 ಕ್ಕೂ ಹೆಚ್ಚು ಐಸಿಯು ಹಾಸಿಗೆಗಳ ಸೌಲಭ್ಯ ಸಿಗಲಿದೆ.

ಯುಎನ್‍ಐ ಎಸ್‍ಎ 1407

More News
ಕೋವಿಡ್: ದೇಶದ ಸೋಂಕು ಪ್ರಕರಣ 24 ಗಂಟೆಯಲ್ಲಿ 35,551, ಚೇತರಿಕೆ ದರ ಶೇ 94 11

ಕೋವಿಡ್: ದೇಶದ ಸೋಂಕು ಪ್ರಕರಣ 24 ಗಂಟೆಯಲ್ಲಿ 35,551, ಚೇತರಿಕೆ ದರ ಶೇ 94 11

03 Dec 2020 | 4:49 PM

ನವದೆಹಲಿ, ಡಿ 03 (ಯುಎನ್ಐ) ಕಳೆದ 24 ಗಂಟೆಗಳಲ್ಲಿ ಭಾರತವು 35,551 ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಣ ತಿಳಿಸಿದೆ.

 Sharesee more..