InternationalPosted at: Jan 13 2021 4:21PM
Shareಕುವೈತ್ ಪ್ರಧಾನಿ ರಾಜೀನಾಮೆ
ಕುವೈತ್ ಪ್ರಧಾನಿ ರಾಜೀನಾಮೆಕುವೈತ್ ಸಿಟಿ, ಜ 13(ಯುಎನ್ಐ)- ಕುವೈತ್ ಪ್ರಧಾನಿ ಶೇಖ್ ಸಬಹ್ ಖಾಲಿದ್ ಅಲ್-ಹಮದ್-ಅಲ್ ಸಬಹ್ ಅವರು ತಮ್ಮ ಸರ್ಕಾರದ ರಾಜೀನಾಮೆಯನ್ನು ಎಮಿರ್ ಶೇಖ್ ನವಾಜ್ ಅಲ್-ಅಹ್ಮದ್ ಅಲ್-ಜಬೆರ್ ಅಲ್ ಸಬಹ್ ಅವರಿಗೆ ಸಲ್ಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ಬುಧವಾರ ವರದಿ ಮಾಡಿದೆ.
ಕುವೈತ್ ಸುದ್ದಿ ಸಂಸ್ಥೆ (ಕುನಾ) ವರದಿಯಂತೆ ಪ್ರಧಾನಿ ಮಂಗಳವಾರ ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವ ಶೇಖ್ ಹಮದ್ ಜಬೆರ್ ಅಲ್-ಅಲಿ ಅಲ್-ಸಬಹ್ ಮತ್ತು ಸಚಿವರನ್ನು ಭೇಟಿಯಾಗಿ ರಾಜೀನಾಮೆ ಕುರಿತಂತೆ ಚರ್ಚಿಸಿದ್ದರು.
ರಾಷ್ಟ್ರೀಯ ಸಂಸತ್ ಮತ್ತು ಸರ್ಕಾರದ ನಡುವಿನ ಸಂಬಂಧ ಕುರಿತ ಸದ್ಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶೇಖ್ ಹಮದ್ ಜಬೆರ್ ಅಲ್-ಅಲಿ ತಮ್ಮ ಸಚಿವ ಸಂಪುಟದ ಎಲ್ಲ ಸಹೋದ್ಯಗಿಗಳ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಸುದ್ದಿ ಸಂಸ್ಥೆ ತಿಳಿಸಿದೆ.
ಕುವೈತ್ ನಲ್ಲಿ ಪದೇ ಪದೇ ಸಂಪುಟ ಪುನಾರಚನೆಗಳು ನಡೆದಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
ಯುಎನ್ಐ ಎಸ್ಎಲ್ಎಸ್ 1600