Tuesday, Jan 21 2020 | Time 23:55 Hrs(IST)
 • ಸೌಹಾರ್ದತೆಯನ್ನು ಕೆಡಿಸುವ ರೇಣುಕಾಚಾರ್ಯ ಹೇಳಿಕೆ: ಎಸ್‍ಡಿಪಿಐ
 • ವುಹಾನ್‌ ವೈರಸ್‌: ಏಳು ವಿಮಾನ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ
 • ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
 • ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದವರನ್ನು ಪಕ್ಷದಿಂದ ಅಮಾನತುಗೊಳಿಸಿದ ದಿನೇಶ್ ಗುಂಡೂರಾವ್
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
International Share

ಕಾಶ್ಮೀರ ವಿಷಯ ಚರ್ಚಿಸದಿರಲು ಟ್ರಂಪ್ ನಿರ್ಧಾರ; ಹರ್ಷವರ್ಧನ್ ಶ್ರಿಂಗ್ಲಾ

ವಾಷಿಂಗ್ಟನ್ , ಆಗಸ್ಟ್ 13(ಯುಎನ್ಐ) ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆ, ಭಾರತದಲ್ಲಿ ತೀವ್ರ ವಿವಾದಕ್ಕೆ ಹಾದಿ ಮಾಡಿಕೊಟ್ಟಿತ್ತು. ಆದರೆ, ಇತ್ತೀಚಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಇನ್ನೂ ಮುಂದೆ ಕಾಶ್ಮೀರ ವಿಷಯದ ಬಗ್ಗೆ ಯಾವುದೇ ಹಸ್ತಕ್ಷೇಪ ನಡೆಸದಿರಲು ಟ್ರಂಪ್ ನಿರ್ಧರಿಸಿದ್ದಾರೆ ಎಂಬುದು ಹೊಸ ಸುದ್ದಿ.
ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವೆ ಎಂದು ನೀಡಿದ್ದ ಆಹ್ವಾನ ಇನ್ನೆಂದಿಗೂ ಚರ್ಚಿಗೆ ಬರುವುದಿಲ್ಲ ಎಂದು ಡೋನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ ಎಂದು ಅಮೆರಿಕಾದಲ್ಲಿನ ಭಾರತ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ತಮ್ಮ ಪ್ರಸ್ತಾಪ ಭಾರತ ಹಾಗೂ ಪಾಕಿಸ್ತಾನದ ಸಮ್ಮತಿಯ ಮೇಲೆ ಆಧಾರಿತವಾಗಿದ್ದು, ಉಭಯ ದೇಶಗಳು ಒಪ್ಪಿದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದರು.
ಆದರೆ, ಮಧ್ಯಸ್ಥಿಕೆ ಪ್ರಸ್ತಾಪವನ್ನು ಸ್ವೀಕರಿಸಲು ಭಾರತ ತಳ್ಳಿಹಾಕಿರುವ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆ ವಿಷಯ ಎಂದೂ ಚರ್ಚಿಸುವುದಿಲ್ಲ. ಕಾಶ್ಮೀರ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸದಿರುವುದು ಅಮೆರಿಕ ದಶಕಗಳಿಂದ ಪಾಲಿಸಿಕೊಂಡು ಬಂದಿರುವ ನೀತಿಯಾಗಿದೆ. ಆದರೆ, ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಉಭಯ ದೇಶಗಳಿಗೆ ಪ್ರೋತ್ಸಾಹ, ಉತ್ತೇಜನ ನೀಡುತ್ತದೆ ಎಂದು ಹರ್ಷವರ್ಧನ್ ಶ್ರಿಂಗ್ಲಾ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಜುಲೈ 22 ಡೋನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿ ನಡೆಸಿದ್ದಾಗ, ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಭಾರತ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಕೇಳಿಕೊಂಡಿದ್ದರು ಎಂದು ಟ್ರಂಪ್ ಹೇಳಿದ್ದರು. ಟ್ರಂಪ್ ಅವರ ಹೇಳಿಕೆ ಭಾರತದಲ್ಲಿ ವಿವಾದ ಸೃಷ್ಟಿಸಿದ್ದವು. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಭಾರತ ಸರ್ಕಾರ, ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿತು. ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜತೆ ಕಾಶ್ಮೀರ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ ಭಾರತ ಸ್ಪಷ್ಟಪಡಿಸಿತ್ತು.
ಇದಾದ ಕೆಲವೇ ದಿನಗಳಲ್ಲಿ ಟ್ರಂಪ್, "ಕಾಶ್ಮೀರ ವಿಷಯ ಭಾರತ, ಪಾಕಿಸ್ತಾನ ನಡುವಣ ದ್ವಿಪಕ್ಷೀಯ ವಿಷಯವಾಗಿದೆ" ಎಂದು ಹೇಳಿದ್ದರು. ಸಮಸ್ಯೆ ಪರಿಹರಿಸಲು ನಮ್ಮ ಸಹಾಯ ಕೇಳಿದರೆ ನಾವು ಮಧ್ಯಸ್ಥಿಕೆ ವಹಿಸಲು ಸಿದ್ಧರಿದ್ದೇವೆ, ”ಎಂದು ಅವರು ಸ್ಪಷ್ಟಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತ , ಕಾಶ್ಮೀರದ ಬಗ್ಗೆ ಯಾವುದೇ ಮಾತುಕತೆ ನಡೆದರೆ ಅದು ಪಾಕಿಸ್ತಾನದೊಂದಿಗೆ ಮಾತ್ರ .. ಅದೂ ಕೂಡ ದ್ವಿಪಕ್ಷೀಯ ಮಾತುಕತೆ ಮಾತ್ರ ಎಂದು ಕಡ್ಡಿತುಂಡಾಗುವಂತೆ ಸ್ಪಷ್ಟಪಡಿಸಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಗೊಳಿಸುವ ಭಾರತ ಸರ್ಕಾರ ಕ್ರಮಕ್ಕೆ ಪ್ರತಿಕ್ರಿಯಿಸಿದ್ದ ಅಮೆರಿಕಾ, ಅದು ಸಂಪೂರ್ಣ ದ್ವಿಪಕ್ಷೀಯ ವಿಷಯ ಎಂದು ಹೇಳಿತ್ತು.
ಯುಎನ್ಐ ಕೆವಿಆರ್ ಎಎಚ್ 1419
More News
ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!

ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!

21 Jan 2020 | 6:33 PM

ತೆಹ್ರಾನ್, ಜ 21 (ಸ್ಪುಟ್ನಿಕ್ ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆ ಮಾಡಿದವರಿಗೆ 3 ಮಿಲಿಯನ್ ಡಾಲರ್ ಬಹುಮಾನ! ಹೀಗೆಂದು ಘೋಷಿಸಿರುವುದ ಇರಾನ್ ನ ಕೆರ್ಮಾನ್ ನಗರದ ಜನಪ್ರತಿನಿಧಿ ಅಹಮದ್ ಹಮ್ಜೇಹ್ ಎಂಬುವರು.

 Sharesee more..

ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಭಾರತೀಯರು ಸಾವು

21 Jan 2020 | 4:56 PM

 Sharesee more..

ಪಾಕಿಸ್ತಾನದಲ್ಲಿ ಗೋಧಿ ಹಿಟ್ಟಿಗಾಗಿ ಆಹಾಕಾರ !

21 Jan 2020 | 2:03 PM

 Sharesee more..