Monday, Jan 20 2020 | Time 20:42 Hrs(IST)
 • ಸಿಎಎ ಪ್ರತಿಭಟನೆಗೆ ಅನುಮತಿ ನಿರಾಕರಣೆ: ಬೀದಿಗಿಳಿದು, ಆಝಾದಿ ಕೂಗಿದ ಪ್ರತಿಭಟನಕಾರರು
 • ಮುಂದಿನ ಶೈಕ್ಷಣಿಕ ವರ್ಷದಲ್ಲೂ ಟಿಪ್ಪು ಪಠ್ಯ ಕೈಬಿಡುವುದಿಲ್ಲ; ಸುರೇಶ್ ಕುಮಾರ್
 • ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭ: ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಯಡಿಯೂರಪ್ಪ
 • ಡೆತ್ ನೋಟ್ ಆರೋಪ ಆಧರಿಸಿ ವ್ಯಕ್ತಿಯನ್ನು ಅಪರಾಧಿಯೆಂದು ಪರಿಗಣಿಸಲಾಗದು: ಹೈಕೋರ್ಟ್
 • ಟಿಪ್ಪು ಜಯಂತಿ ರದ್ದತಿ ಆದೇಶ ಮರುಪರಿಶೀಲಿಸಲು ಕಾಲಾವಕಾಶ ಬೇಕು; ಸರ್ಕಾರ
 • 175 ಕಿ ಮೀ ವೇಗವಾಗಿ ಬೌಲಿಂಗ್ ಮಾಡಿದ 17ರ ಪ್ರಾಯದ ವೇಗಿ !
 • ಆಸ್ಟ್ರೇಲಿಯಾ ಓಪನ್: ಸೆರೇನಾ, ಜೊಕೊವಿಚ್, ಫೆಡರರ್ ಶುಭಾರಂಭ
 • ಪಕ್ಷ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯಲು ತೀವ್ರ ಪ್ರಯತ್ನ- ಜೆ ಪಿ ನಡ್ಡಾ
 • ಕೆಪಿಸಿಸಿ ಅಧ್ಯಕ್ಷರ ಶೀಘ್ರ ನೇಮಕಾತಿಗೆ ಹೈಕಮಾಂಡ್‍ಗೆ ಪತ್ರ: ಕಾರ್ಯಾಧ್ಯಕ್ಷರ ನೇಮಕಕ್ಕೆ ಪರಮೇಶ್ವರ್ ಆಕ್ಷೇಪ
 • ಸರ್ಕಾರ ಮತ್ತು ಪೊಲೀಸರು ಸೇರಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ :ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ
 • ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ನಳಿನ್ ಕುಮಾರ್ ಕಟೀಲ್ ಅಭಿನಂದನೆ
 • 1 12 ಕೋಟಿ ಅಂಕಪಟ್ಟಿ ಡಿಜಿಟಲ್ ಲಾಕರ್ ನಲ್ಲಿ : ಸುರೇಶ್ ಕುಮಾರ್
 • ಏಕದಿನ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ವಿರಾಟ್, ಬುಮ್ರಾ
 • ನಡ್ಡಾ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಾರೆ- ಮೋದಿ
 • ಸಾವಿನ ದವಡೆಯಲ್ಲಿ ಮಾಜಿ ಭೂಗತ ದೊರೆ ಮುತ್ತಪ್ಪ ರೈ :ಉಳಿದ ಬದಕು ಸಮಾಜಸೇವೆಗಾಗಿ ಮೀಸಲು
International Share

ಕ್ಷಿಪಣಿ ಕುರಿತ ಮಾತುಕತೆಗೆ ಇರಾನ್ ನಿರಾಕರಣೆ

ವಾಷಿಂಗ್ಟನ್, ಜುಲೈ 17 (ಸ್ಫುಟ್ನಿಕ್) ಇರಾನ್ ತನ್ನ ಕ್ಷಿಪಣಿ ಕಾರ್ಯಕ್ರಮದ ಕುರಿತು ಯಾವುದೇ ಸಂಭವನೀಯ ಮಾತುಕತೆ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಿದೆ.
ಸಂಯುಕ್ತ ರಾಷ್ಟ್ರದಲ್ಲಿ ಇರಾನ್ ಮಂಗಳವಾರ ಹೇಳಿಕೆಯೊಂದರಲ್ಲಿ ಈ ವಿಷಯ ಪ್ರಸ್ತಾಪಿಸಿದೆ. ಭವಿಷ್ಯದಲ್ಲಿ ಅಮೆರಿಕ, ಕೊಲ್ಲಿ ದೇಶಗಳಿಗೆ ಕ್ಷಿಪಣಿ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಅನುಮತಿಸಿದರೆ ಕ್ಷಿಪಣಿ ಕಾರ್ಯಕ್ರಮಗಳ ಕುರಿತು ಮಾತುಕತೆ ಪ್ರಾರಂಭಿಸಬಹುದು ಎಂಬ ವರದಿ ಹಿನ್ನೆಲೆಯಲ್ಲಿ ಇರಾನ್ ಈ ಹೇಳಿಕೆ ನೀಡಿದೆ.
ತನ್ನ ಕ್ಷಿಪಣಿ ಕಾರ್ಯಕ್ರಮದ ಕುರಿತು ಯಾವುದೇ ದೇಶದೊಂದಿಗೆ ಯಾವುದೇ ಪರಿಸ್ಥಿತಿಯಲ್ಲಿಯೂ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಒಮನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಬಳಿ ಅಲ್ಟೇರ್ ಮತ್ತು ಕೋಕುಕಾ ಕರೆಜಿಯಸ್ ನಲ್ಲಿ ಎರಡು ತೈಲ ಟ್ಯಾಂಕರ್‌ ಸ್ಫೋಟಗೊಂಡ ನಂತರ ಹಾಗೂ ಇರಾನ್‌, ಅಮೆರಿಕ ಗುಪ್ತಚರ ಡ್ರೋನ್ ವಿಮಾನವನ್ನು ಹೊಡೆದುರುಳಿಸಿದ ನಂತರ ಉಭಯ ದೇಶಗಳ ನಡುವೆ ಭಿನ್ನಮತ ಉಂಟಾಗಿತ್ತು.
ಕಳೆದ ವಾರ ಇರಾನ್, ಅಂತಾರಾಷ್ಟ್ರೀಯ ಪರಮಾಣು ಒಪ್ಪಂದದಲ್ಲಿ ಯುರೇನಿಯಂನಲ್ಲಿ ಶೇ. 3.67 ಇದ್ದ ತನ್ನ ನಿಗದಿತ ಮಿತಿಯನ್ನು ಶೇ. 4.5 ಕ್ಕೆ ಹೆಚ್ಚಿಸಿತ್ತು. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಈ ವಿಷಯವನ್ನು ದೃಢಪಡಿಸಿತ್ತು.
ಯುಎನ್ಐ ಪಿಕೆ ಜಿಎಸ್ಆರ್ 9:30
More News
ಸಿಎಎ ಜಾರಿ ಅಗತ್ಯವಿರಲಿಲ್ಲ : ಶೇಖ್ ಹಸೀನಾ

ಸಿಎಎ ಜಾರಿ ಅಗತ್ಯವಿರಲಿಲ್ಲ : ಶೇಖ್ ಹಸೀನಾ

19 Jan 2020 | 6:32 PM

ದುಬೈ, ಜನವರಿ 19 (ಯುಎನ್ ಐ) ಭಾರತ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯವಿರಲಿಲ್ಲ, ಮೇಲಾಗಿ ಇದರ ಉದ್ದೇಶವೂ ಅರ್ಥವಾಗುತ್ತಿಲ್ಲ ಎಂದು ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಪ್ರತಿಕ್ರಿಯೆ ನೀಡಿದ್ದಾರೆ.

 Sharesee more..