Sunday, Jul 12 2020 | Time 23:56 Hrs(IST)
 • ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ 4 ವಿಕೆಟ್ ಜಯ
 • ಕೃಷಿ ಸಚಿವ ಬಿ ಸಿ ಪಾಟೀಲ್ ಒಂದು ವಾರ ಕ್ವಾರಂಟೈನ್ : ಸೋಂಕಿತರ ಸಂಪರ್ಕ ಹಿನ್ನಲೆ
 • ರಾಮನಗರ ಲಾಕ್‌ಡೌನ್‌ಗೆ ಎಚ್ ಡಿ ಕುಮಾರಸ್ವಾಮಿ ಸಲಹೆ
 • ಸೋಂಕಿತರಿಗೆ ಸೂಕ್ತ ಚಿಕಿತ್ಸೆ,ರೋಗ ಲಕ್ಷಣ ಪತ್ತೆಗಾಗಿ ತುರ್ತು ಸಹಾಯವಾಣಿ ಆರಂಭಿಸಲು ಸೂಚನೆ : ಡಾ ಸುಧಾಕರ್
 • ಕಾಂಗ್ರೆಸ್ ನಾಯಕತ್ವವನ್ನು ಭೇಟಿ ಮಾಡಲು ದೆಹಲಿಯಲ್ಲಿರುವ ಸಚಿನ್ ಪೈಲಟ್
 • 'ಕುವೆಂಪು ಹನುಮದ್ದರ್ಶನ' ಕೃತಿ ಲೋಕಾರ್ಪಣೆ ಮಾಡಿದ ಡಿಸಿಎಂ ಡಾ ಅಶ್ವಥ್ ನಾರಾಯಣ್
 • ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ
 • ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಕೊಲೆ
 • ಮಗಳಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಮಲತಂದೆ: ಪರಾರಿಯಾಗಿರುವ ಆರೋಪಿಗಾಗಿ ಶೋಧ
 • ಪೊಲೀಸರಿಗೆ ಕರೋನಾ ಸೋಂಕು ಹೆಚ್ಚಳ ತಡವಾಗಿ ಎಚ್ಚತ್ತ ಗೃಹ ಇಲಾಖೆ : ಸಿಬ್ಬಂದಿಗಳ ಕಾರ್ಯವಿಧಾನದಲ್ಲಿ ಬದಲಾವಣೆ
 • ರಾಜ್ಯದಲ್ಲಿ 2627 ಹೊಸ ಕೋವಿಡ್ ಪ್ರಕರಣಗಳು ವರದಿ, 71 ಸಾವು; ಸೋಂಕಿತರ ಸಖ್ಯೆ 38843ಕ್ಕೇರಿಕೆ
 • ರಾಜಕಾಲುವೆಗೆ ಬಿದ್ದ ಬಾಲಕಿಗಾಗಿ ಮುಂದುವರಿದ ಕಾರ್ಯಾಚರಣೆ: ಎರಡು ದಿನವಾದರೂ ಪತ್ತೆಯಿಲ್ಲ
 • ಕೊವಿಡ್‍: ಪರಪ್ಪನ ಅಗ್ರಹಾರ ಜೈಲಿನಲ್ಲಿ 56 ಕೈದಿಗಳಿಗೆ ಸೋಂಕು ದೃಢ
 • ಕೋವಿಡ್ ನಿಭಾಯಿಸಲು ಸರ್ಕಾರಕ್ಕೆ ಬೆಂಬಲ ನೀಡೋಣ, ಆದರೆ ಕೋವಿಡ್ ಕಾಲದ ಲೂಟಿಗಲ್ಲ; ಎಚ್‌ಡಿಕೆ
 • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಐವರು ಕೊರೊನಾದಿಂದ ಸಾವು: 46ಕ್ಕೇರಿದ ಸಾವಿನ ಸಂಖ್ಯೆ
National Share

ಗಡಿ ಉದ್ವಿಗ್ನತೆ ಮಧ್ಯೆ ಚೀನಾದ 59 ಮೊಬೈಲ್‍ ಆಪ್‍ಗಳಿಗೆ ಸರ್ಕಾರ ನಿಷೇಧ

ನವದೆಹಲಿ, ಜೂನ್ 29 (ಯುಎನ್‌ಐ) ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆಯಾಗುವ ಚಟುವಟಿಕೆಗಳಲ್ಲಿ ತೊಡಿಗಿರುವ ಮಾಹಿತಿ ಹಿನ್ನೆಲೆಯಲ್ಲಿ ಸರ್ಕಾರ ಚೀನಾದ 59 ಆ್ಯಪ್‌ಗಳನ್ನು ಸೋಮವಾರ ನಿಷೇಧಿಸಿದೆ.
ಸರ್ಕಾರದ ಈ ಕ್ರಮ ಕೋಟ್ಯಂತರ ಭಾರತೀಯ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆದಾರರ ಹಿತಾಸಕ್ತಿ ಕಾಪಾಡಲಿದೆ.
ನಿಷೇಧಿಸಲ್ಪಟ್ಟ ಆಪ್‍ಗಳಲ್ಲಿ ಟಿಕ್‌ ಟೋಕ್, ಶೇರ್‍ ಇಟ್‍, ಕ್ವಾಯ್, ಯುಸಿ ಬ್ರೌಸರ್, ಬೈದು ಮ್ಯಾಪ್‍, ಶೀನ್, ಕ್ಲಾಷ್ ಆಫ್ ಕಿಂಗ್ಸ್, ಡಿಯು ಬ್ಯಾಟರಿ ಸೇವರ್, ಹೆಲೋ, ಲೈಕ್, ಯೂಕ್ಯಾಮ್‍ ಮೇಕಪ್, ಮಿ ಕಮ್ಯುನಿಟಿ, ಸಿಎಮ್ ಬ್ರೋವರ್ಸ್, ವೈರಸ್ ಕ್ಲೀನರ್, ಎಪಿಯುಎಸ್ ಬ್ರೌಸರ್, ರೊಮ್‍ವೆ, ಕ್ಲಬ್ ಫ್ಯಾಕ್ಟರಿ, ನ್ಯೂಸ್‌ಡಾಗ್, ಬ್ಯೂಟ್ರಿ ಪ್ಲಸ್, ವೀಚಾಟ್ ಮತ್ತು ಯುಸಿ ನ್ಯೂಸ್ ಸೇರಿವೆ.
ಅಲ್ಲದೆ, ಮೀ ವಿಡಿಯೋ ಕಾಲ್‍, ಕ್ಸಿಯೋಮಿ, ವೀಸಿಂಕ್‍, ಇಎಸ್‍ ಫೈಲ್‍ ಎಕ್ಸ್‍ಪ್ಲೋರರ್‍, ವಿವಾ ವಿಡಿಯೋ, ಕ್ಯುಯು ವಿಡಿಯೋ ಇಂಕ್‍, ಡಿಯು ಕ್ಲೀನರ್, ಡಿಯು ಬ್ರೌಸರ್, ಹ್ಯಾಗೊ ಪ್ಲೇ ವಿತ್ ನ್ಯೂ ಫ್ರೆಂಡ್ಸ್, ಕ್ಯಾಮ್ ಸ್ಕ್ಯಾನರ್, ವಿ ಮೀಟ್ ಮತ್ತು ಸ್ವೀಟ್ ಸೆಲ್ಫಿ ಆಪ್‍ಗಳು ಸಹ ನಿಷೇಧಿಸಲ್ಪಟ್ಟಿವೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸರ್ಕಾರ 59 ಆಪ್‍ಗಳನ್ನು ನಿಷೇಧಿಸಿದೆ.
ಭಾರತೀಯ ಸೈಬರ್‌ ಕ್ಷೇತ್ರದಲ್ಲಿ ಸುರಕ್ಷತೆ ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಪ್ರಮುಖ ಆವಿಷ್ಕಾರಗಳ ವಿಷಯಕ್ಕೆ ಬಂದರೆ, ಭಾರತ ತಾಂತ್ರಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿ ಡಿಜಿಟಲ್‍ ಸ್ಪೇಸ್‍ ನಲ್ಲಿ ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.
ಇದೇ ವೇಳೆ, ಮಾಹಿತಿ ಸುರಕ್ಷತೆಗೆ ಸಂಬಂಧಿಸಿದ ಅಂಶಗಳು ಮತ್ತು 130 ಕೋಟಿ ಭಾರತೀಯರ ಗೌಪ್ಯತೆಯನ್ನು ಕಾಪಾಡುವ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. ಈ ಆತಂಕಗಳಿಂದ ಇದು ದೇಶದ ಸಾರ್ವಭೌಮತ್ವ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಇತ್ತೀಚೆಗೆ ಗಮನಿಸಲಾಗಿದೆ.
ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಕೆಲ ಮೊಬೈಲ್ ಆಪ್‍ಗಳ ಮೂಲಕ ಬಳಕೆದಾರರ ಮಾಹಿತಿಯನ್ನು ಅನಧಿಕೃತವಾಗಿ ಕದ್ದು ಭಾರತದ ಹೊರಗಿನ ಸ್ಥಳಗಳಲ್ಲಿರುವ ಸರ್ವರ್‌ಗಳಿಗೆ ರಹಸ್ಯವಾಗಿ ರವಾನಿಸುವ ಬಗ್ಗೆ ಅನೇಕ ವರದಿಗಳು ಸೇರಿದಂತೆ ಹಲವಾರು ಮೂಲಗಳಿಂದ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಬಹಳಷ್ಟು ದೂರುಗಳು ಬಂದಿವೆ.
ಯುಎನ್‍ಐ ಎಸ್ಎಲ್ಎಸ್ 2215
More News
ತೈಲ ಕಂಪನಿಗಳಿಂದ ಡೀಸೆಲ್ ಬೆಲೆ ಮತ್ತೆ ಹೆಚ್ಚಳ

ತೈಲ ಕಂಪನಿಗಳಿಂದ ಡೀಸೆಲ್ ಬೆಲೆ ಮತ್ತೆ ಹೆಚ್ಚಳ

12 Jul 2020 | 6:15 PM

ನವದೆಹಲಿ, ಜುಲೈ 12(ಯುಎನ್ಐ) ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ತಟ್ಟಿದ್ದು ತೈಲ ಕಂಪನಿಗಳು ಇಂದೂ ಪ್ರತಿ ಲೀಟರ್ ಡೀಸೆಲ್ ಗೆ ಮತ್ತೆ 16 ಪೈಸೆ ಏರಿಕೆ ಮಾಡಿವೆ.

 Sharesee more..
ಆತ್ಮನಿರ್ಭರ ಭಾರತ ಯೋಜನೆಯ ಪ್ಯಾಕೇಜ್ ಅನುಷ್ಠಾನ ಪರಿಶೀಲಿಸಿದ ನಿರ್ಮಲಾ ಸೀತಾರಾಮನ್

ಆತ್ಮನಿರ್ಭರ ಭಾರತ ಯೋಜನೆಯ ಪ್ಯಾಕೇಜ್ ಅನುಷ್ಠಾನ ಪರಿಶೀಲಿಸಿದ ನಿರ್ಮಲಾ ಸೀತಾರಾಮನ್

12 Jul 2020 | 5:35 PM

ನವದೆಹಲಿ, ಜು 12 (ಯುಎನ್ಐ) ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಜಿಡಿಪಿಯ ಶೇ.10ರಷ್ಟು ಮೊತ್ತಕ್ಕೆ ಸಮನಾದ 20 ಲಕ್ಷ ಕೋಟಿ ರೂ.ಗಳ ಆತ್ಮನಿರ್ಭರ ಭಾರತ ಪ್ಯಾಕೇಜ್ ಅನುಷ್ಠಾನದ ಕ್ರಮಗಳನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪರಿಶೀಲನೆ ನಡೆಸಿದರು.

 Sharesee more..