Tuesday, Nov 30 2021 | Time 18:28 Hrs(IST)
Sports Share

ಗಬ್ಬರ್ ಶತಕ, ಡೆಲ್ಲಿ ಗೆಲುವು ರೋಚಕ

ಶಾರ್ಜಾ, ಅ.17 (ಯುಎನ್ಐ)- ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಗಬ್ಬರ್ ಖ್ಯಾತಿಯ ಶಿಖರ್ ಧವನ್ ಅಬ್ಬರದ ಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ಶನಿವಾರ ನಡೆದ ಐಪಿಎಲ್ ನ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿ, ಅಂಕ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಜೀವದಾನದ ಲಾಭ ಪಡೆದು ಬ್ಯಾಟಿಂಗ್ ನಡೆಸಿದ ಶಿಖರ್ ಅಬ್ಬರಿಸಿದರು. ತಮ್ಮ ನೈಜ ಬ್ಯಾಟಿಂಗ್ ನಡೆಸಿದ ಧವನ್ ಟೂರ್ನಿಯಲ್ಲಿ ಸತತ ಮೂರನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿತು. ಅಲ್ಲದೆ ಪ್ರಸಕ್ತ ಐಪಿಎಲ್ ನಲ್ಲಿ ಡೆಲ್ಲಿ ತಂಡ ಗುರಿಯನ್ನು ಹಿಂಬಾಲಿಸಿ ಗೆದ್ದ ಮೊದಲ ಗೆಲುವು ಇದಾಗಿದೆ.
ಒಂದು ತುದಿಯಲ್ಲಿ ವಿಕೆಟ್ ಬೀಳುತ್ತಾ ಇದ್ದರೂ ನೆಲಕಚ್ಚಿ ಬ್ಯಾಟಿಂಗ್ ಮಾಡಿದ ಧವನ್ 58 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಹಾಯದಿಂದ 174.13ರ ಸರಾಸರಿಯಲ್ಲಿ 101 ರನ್ ಬಾರಿಸಿ ಸ್ಫೋಟಿಸಿದರು.
ಮೊದಲು ಬ್ಯಾಟ್ ಮಾಡಿದ ಚೆನ್ನೈ 20 ಓವರ್ ಗಳಲ್ಲಿ 4 ವಿಕೆಟ್ ಗೆ 179 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ ಇನ್ನೂ ಒಂದು ಎಸೆತ ಬಾಕಿ ಇರುವಂತೆ ಐದು ವಿಕೆಟ್ ನಷ್ಟಕ್ಕೆ 185 ರನ್ ಸಿಡಿಸಿ ಜಯ ಸಾಧಿಸಿತು. ಡೆಲ್ಲಿ ಆಡಿರುವ 9 ಪಂದ್ಯಗಳಲ್ಲಿ 7 ಗೆಲುವು 2 ಸೋಲುಗಳಿಂದ 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಚೆನ್ನೈ ಇಷ್ಟೇ ಪಂದ್ಯಗಳಲ್ಲಿ ಕೇವಲ ಮೂರು ಜಯ ಸಾಧಿಸಿದ್ದು, ಆರು ಅಂಕಗಳಿಂದ ಆರನೇ ಸ್ಥಾನದಲ್ಲಿದೆ.
ಡೆಲ್ಲಿ ಪರ ಪೃಥ್ವಿ ಶಾ, ಅಜಿಂಕ್ಯಾ ರಹಾನೆ ರನ್ ಕಲೆ ಹಾಕುವಲ್ಲಿ ವಿಫಲರಾದರು. 26 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಆಧಾರವಾದರು. ಈ ಜೋಡಿ ಮೂರನೇ ವಿಕೆಟ್ ಗೆ 72 ರನ್ ಸೇರಿಸಿ ತಂಡಕ್ಕೆ ನೆರವಾಯಿತು. ಶ್ರೇಯಸ್ 23 ರನ್ ಸಿಡಿಸಿ ಬ್ರಾವೊಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ 24, ಅಲೆಕ್ಸ್ ಕ್ಯಾರಿ 4 ರನ್ ಬಾರಿಸಿದರು. ಇನ್ನು ಆಲ್ ರೌಂಡರ್ ಅಕ್ಷರ್ ಪಟೇಲ್ ಕೇವಲ 5 ಎಸೆತಗಳಲ್ಲಿ 3 ಸಿಕ್ಸರ್ ಸಹಾಯದಿಂದ 21 ರನ್ ಬಾರಿಸಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಚೆನ್ನೈ ಪರ ಆರಂಭಿಕರಾಗಿ ಬಡ್ತಿ ಪಡೆದಿರುವ ಸ್ಯಾಮ್ ಕರನ್ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದರು. ಎರಡನೇ ವಿಕೆಟ್ ಗೆ ಡುಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಜೋಡಿ ತಂಡಕ್ಕೆ ನೆರವಾಯಿತು. ಈ ಜೋಡಿ ತಂಡ ಹಾಕಿಕೊಂಡ ಯೋಜನೆಯಂತೆ ಬ್ಯಾಟ್ ಮಾಡಿತು. ಆರಂಭದಲ್ಲಿ ಬಿದ್ದ ವಿಕೆಟ್ ಮಹತ್ವ ಅರಿತು ಬ್ಯಾಟ್ ಮಾಡಿದ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿತು.
ಈ ಜೋಡಿ 11.4 ಓವರ್ ಗಳವರೆಗೆ ಬ್ಯಾಟಿಂಗ್ ನಡೆಸಿ 87 ರನ್ ಸೇರಿಸಿತು. ಶೇನ್ ವ್ಯಾಟ್ಸನ್ 28 ಎಸೆತಗಳಲ್ಲಿ 36 ರನ್ ಸಿಡಿಸಿ ಔಟ್ ಆದರು.
ಟೂರ್ನಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ಡುಪ್ಲೆಸಿಸ್ ಬಲಿಷ್ಠ ಡೆಲ್ಲಿ ಬೌಲಿಂಗ್ ಪಡೆಯನ್ನು ದಂಡಿಸಿದರು. ಇವರು 47 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 58 ರನ್ ಸಿಡಿಸಿದರು. ನಾಯಕ ಮಹೇಂದ್ರ ಸಿಂಗ್ 3 ರನ್ ಬಾರಿಸಿ ಔಟ್ ಆದರು.
ಐದನೇ ವಿಕೆಟ್ ಗೆ ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜಾ ಅಬ್ಬರದ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿತು. ಜಡೇಜಾ ಕೇವಲ 33 ಎಸೆತಗಳಲ್ಲಿ 4 ಸಿಕ್ಸರ್ ಸಹಾಯದಿಂದ 33 ರನ್ ಸಿಡಿಸಿ ಅಜೆಯರಾಗುಳಿದರು. ರಾಯುಡು 45 ಗಳಿಸಿದರು.
ಡೆಲ್ಲಿ ತಂಡದ ಪರ ಎನ್ರಿಚ್ ನೋರ್ಟ್ಚೆ ಎರಡು, ತುಶಾರ್ ದೇಶಪಾಂಡೆ, ಕಗಿಸೊ ರಬಾಡ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಚೆನ್ನೈ 20 ಓವರ್ ಗಳಲ್ಲಿ 4 ವಿಕೆಟ್ ಗೆ 179
(ಫಾಫ್ ಡುಪ್ಲೆಸಿಸ್ 58, ಶೇನ್ ವ್ಯಾಟ್ಸನ್ 36, ಅಂಬಟಿ ರಾಯಡು 45*, ರವೀಂದ್ರ ಜಡೇಜಾ 33*, ಎನ್ರಿಚ್ ನೋರ್ಟ್ಚೆ 44ಕ್ಕೆ 2)
ಡೆಲ್ಲಿ 19.5 ಓವರ್ ಗೆ 5 ವಿಕೆಟ್ ನಷ್ಟಕ್ಕೆ 185
(ಶಿಖರ್ ಧವನ್ 101*, ಶ್ರೇಯಸ್ ಅಯ್ಯರ್ 23, ಮಾರ್ಕಸ್ ಸ್ಟೊಯಿನಿಸ್ 24, ದೀಪಕ್ ಚಹಾರ್ 18ಕ್ಕೆ 2)
ಯುಎನ್ಐ ವಿಎನ್ಎಲ್ 2333
More News
ಪಿಚ್ ಕ್ಯುರೇಟರ್ ಗೆ 35 ಸಾವಿರ ರೂ  ಬಹುಮಾನ! ಔದಾರ್ಯ ಮೆರೆದ ರಾಹುಲ್ ದ್ರಾವಿಡ್!

ಪಿಚ್ ಕ್ಯುರೇಟರ್ ಗೆ 35 ಸಾವಿರ ರೂ ಬಹುಮಾನ! ಔದಾರ್ಯ ಮೆರೆದ ರಾಹುಲ್ ದ್ರಾವಿಡ್!

30 Nov 2021 | 8:11 AM

ಕಾನ್ಪುರ, ನ 30 (ಯುಎನ್ಐ) ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾದವ್ರು.

 Sharesee more..
ಇಂಡಿಯಾ V/S ಕಾನ್ಪುರ್ ಟೆಸ್ಟ್ : ಇಬ್ಬರು ಭಾರತೀಯರ ಕಾರಣದಿಂದಾಗಿ ಟೀಮ್ ಇಂಡಿಯಾ ಗೆಲ್ಲಲು ಸಾಧ್ಯವಾಗಲಿಲ್ಲ!

ಇಂಡಿಯಾ V/S ಕಾನ್ಪುರ್ ಟೆಸ್ಟ್ : ಇಬ್ಬರು ಭಾರತೀಯರ ಕಾರಣದಿಂದಾಗಿ ಟೀಮ್ ಇಂಡಿಯಾ ಗೆಲ್ಲಲು ಸಾಧ್ಯವಾಗಲಿಲ್ಲ!

29 Nov 2021 | 6:02 PM

ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ರೋಚಕ ರೀತಿಯಲ್ಲಿ ಕೊನೆಗೊಂಡಿತು. ಈ ಪಂದ್ಯದಲ್ಲಿ 284 ರನ್ ಗಳ ಟಾರ್ಗೆಟ್ ಪಡೆದುಕೊಂಡಿದ್ದ ಕಿವೀಸ್ ತಂಡ, ಕೊನೆ ದಿನ ಬ್ಯಾಟಿಂಗ್ ಕಚ್ಚಿಕೊಂಡಿದ್ದರಿಂದ ಪಂದ್ಯ ಡ್ರಾ ದಲ್ಲಿ ಕೊನೆಕೊಂಡಿತು.

 Sharesee more..
ಚೀನಾದಲ್ಲಿ ಮಾತನಾಡುವ ಹಕ್ಕಿಲ್ಲವೇ? - ಪೆಂಗ್ ಶುಯಿ ಬಗ್ಗೆ ಹೆಚ್ಚಾಯ್ತು ಡಬ್ಲ್ಯುಟಿಎ ಕಳವಳ

ಚೀನಾದಲ್ಲಿ ಮಾತನಾಡುವ ಹಕ್ಕಿಲ್ಲವೇ? - ಪೆಂಗ್ ಶುಯಿ ಬಗ್ಗೆ ಹೆಚ್ಚಾಯ್ತು ಡಬ್ಲ್ಯುಟಿಎ ಕಳವಳ

28 Nov 2021 | 4:00 PM

ಕಮ್ಯೂನಿಸ್ಟ್ ರಾಷ್ಟ್ರವಾಗಿರುವ ಚೀನಾದಲ್ಲಿ ಮುಕ್ತವಾಗಿ ಮಾತಾಡುವ ಹಕ್ಕಿಲ್ಲವೇ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಚೀನಿ ಟೆನಿಸ್ ಆಟಗಾರ್ತಿ ಪೆಂಗ್ ಶುಯಿ ವಿಚಾರದಲ್ಲಿ ಇದು ಮತ್ತೆ ಮುನ್ನೆಲೆಗೆ ಬಂದಿದೆ.

 Sharesee more..
ಜೂನಿಯರ್ ಹಾಕಿ ವಿಶ್ವಕಪ್: ಭಾರತಕ್ಕೆ 8-2 ಅಂತರದಲ್ಲಿ ಪೋಲೆಂಡ್ ವಿರುದ್ಧ ಗೆಲುವು – ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ ಇಂಡಿಯಾ

ಜೂನಿಯರ್ ಹಾಕಿ ವಿಶ್ವಕಪ್: ಭಾರತಕ್ಕೆ 8-2 ಅಂತರದಲ್ಲಿ ಪೋಲೆಂಡ್ ವಿರುದ್ಧ ಗೆಲುವು – ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ ಇಂಡಿಯಾ

28 Nov 2021 | 11:12 AM

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಭಾರತ ಮೂರನೇ ಪಂದ್ಯದಲ್ಲಿ ಪೋಲೆಂಡ್ ಅನ್ನು 8-2 ಗೋಲುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

 Sharesee more..
ಅಪಾಯದಲ್ಲಿ ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ!

ಅಪಾಯದಲ್ಲಿ ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ!

28 Nov 2021 | 10:23 AM

ದಕ್ಷಿಣ ಆಫ್ರಿಕಾದಲ್ಲಿ ಕರೊನಾ ಹೊಸ ತಳಿ ಓಮಿಕ್ರಾನ್ ಭೀತಿ ಸೃಷ್ಟಿ ಮಾಡಿದೆ. ಹಾಂಗ್ ಕಾಂಗ್, ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್ವಾನಾದಲ್ಲಿ 50 ಸೋಂಕಿತ ಪ್ರಕರಣಗಳು ಕಂಡುಬಂದಿವೆ. ಇಲ್ಲಿಯವರೆಗೆ ಭಾರತದಲ್ಲಿ ಈ ಹೊಸ ರೂಪಾಂತರಿಯ ಯಾವುದೇ ಪ್ರಕರಣ ಕಂಡುಬಂದಿಲ್ಲ. ಇದೆಲ್ಲದರ ನಡುವೆ ಮುಂದಿನ ತಿಂಗಳು ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾಗುತ್ತಿದೆ.

 Sharesee more..