Monday, Oct 26 2020 | Time 03:13 Hrs(IST)
Entertainment Share

ಗೋಧ್ರಾ ಅಲ್ಲ “ಗೋಧ್ರಾನ್”: ಕೆಎಫ್‍ಸಿಸಿ ಅನುಮತಿಸುವ ಶೀರ್ಷಿಕೆಗಿಲ್ಲವೇ ಸಿಂಧುತ್ವ?

ಗೋಧ್ರಾ ಅಲ್ಲ “ಗೋಧ್ರಾನ್”:  ಕೆಎಫ್‍ಸಿಸಿ ಅನುಮತಿಸುವ ಶೀರ್ಷಿಕೆಗಿಲ್ಲವೇ ಸಿಂಧುತ್ವ?
GODHRAN-CENSOR -SATISH NEENASAM

ಬೆಂಗಳೂರು, ಅ 17 (ಯುಎನ್‍ಐ) ಕೊರೋನಾ ಲಾಕ್ ಡೌನ್ ಮುಗಿದ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿರುವಾಗಲೇ “ಗೋಧ್ರಾ” ಚಿತ್ರತಂಡವು ಬಾಕಿ ಉಳಿದಿದ್ದ ಕೆಲಸಗಳನ್ನು ಮುಗಿಸಲು ಮುಂದಾಗಿದೆ.ಈ ನಿಟ್ಟಿನಲ್ಲಿ “ಗೋಧ್ರಾ” ಸೆನ್ಸಾರ್ ಮಂಡಳಿಯ ಮುಂದೆ ಹೋಗಿದ್ದು, ಶೀರ್ಷಿಕೆ ಬದಲಿಸುವಂತೆ ಮಂಡಳಿ ಸೂಚಿಸಿದೆ. ಹೀಗಾಗಿ “ಯಾರ ಭಾವನೆಗಳಿಗೂ ನೋವುಂಟು ಮಾಡುವ ಉದ್ದೇಶ ನಮಗಿಲ್ಲ ,ಹಾಗಾಗಿ ಸೆನ್ಸಾರ್ ಮಂಡಳಿಯ ಅಭಿಪ್ರಾಯದಂತೆ "ಗೋಧ್ರಾ"ಟೈಟಲ್ ಬದಲಾಯಿಸಲು ಒಪ್ಪಿದ್ದೇವೆ. ಶೀಘ್ರದಲ್ಲೇ ಹೊಸ ಟೈಟಲ್ ಘೋಷಿಸುತ್ತೇವೆ” ಎಂದು ಸತೀಶ್ ನೀನಾಸಂ ಟ್ವೀಟ್ ಮಾಡಿದ್ದಾರೆ.

ಸೆನ್ಸಾರ್ ಮಂಡಳಿ ಹೇಳಿದ್ದೇನು?

ಸೆನ್ಸಾರ್. ಮಂಡಳಿಯ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ನಮ್ಮ ಚಿತ್ರದ ನಿಲುವು, ಕಥಾವಸ್ತು ಮತ್ತು ನೇರವಂತಿಕೆಯ ಕೆಲವು ವಿಷಯಗಳ ಕುರಿತಾದ ಆಕ್ಷೇಪಣೆ ಮತ್ತು ಅದಕ್ಕಾಗಿ ಶೀರ್ಷಿಕೆಯನ್ನು ಬದಲಾಯಿಸಬೇಕು ಎನ್ನುವ ಸಲಹೆ ಬಂದವು. ನೇರ ನಿಷ್ಠುರ ವಿಷಯಗಳು ಕೆಲವೊಮ್ಮೆ ಕಹಿಯಾಗಿರುತ್ತವೆ. ಗೋಧ್ರಾದಲ್ಲಿ ನಡೆದ ಘಟನೆಗೂ ಮತ್ತು ನಮ್ಮ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಎಂದು ಮನವಿ ಮಾಡಿದರೂ, ಆ ಕುರಿತು ಅವರಿಗೆ ತಿಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದೆವು. ಆದರೆ, ನಮ್ಮ ಮನವಿಯನ್ನು ಅವರು ಪುರಸ್ಕರಿಸಲಿಲ್ಲ. ಹಾಗಾಗಿ ಸೆನ್ಸಾರ್ ಸಿಬಿಎಫ್ ಸಿ ಅಧಿಕಾರಿಗಳ ಜತೆ ಚರ್ಚಿಸಿ ನಮ್ಮ ಚಿತ್ರದ ಶೀರ್ಷಿಕೆಯನ್ನು ಗೋಧ್ರಾನ್‍ ಎಂದು ಬದಲಾಯಿಸಲು ತೀರ್ಮಾನ ತಗೆದುಕೊಂಡಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.

ಕೆಎಫ್‍ಸಿಸಿ ಅನುಮತಿಸುವ ಶೀರ್ಷಿಕೆಗೆ ಸಿಂಧುತ್ವ ಇಲ್ಲವೇ? ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಯಲ್ಲಿ ‘ಗೋಧ್ರಾ’ ಎಂದು ನಮ್ಮ ಚಿತ್ರಕ್ಕೆ ಹೆಸರಿಡಲು ಅನುಮತಿ ಪಡೆದಿದ್ದೇವೆ. ಈ ಅನುಮೋದಿತ ಮತ್ತು ನೋಂದಾಯಿಸಿದ ಶೀರ್ಷಿಕೆಗೆ ಯಾವುದೇ ಸಿಂಧುತ್ವವಿಲ್ಲ ಎಂದು ಸಿಬಿಎಫ್‌ಸಿಯಿಂದ ಈಗ ನಮಗೆ ತಿಳಿದು ಆಘಾತವಾಯಿತು. ಕೆಎಫ್‌ಸಿಸಿ ಶೀರ್ಷಿಕೆಗಳನ್ನು ನೀಡಲು ಅಂತಹ ಯಾವುದೇ ಅಧಿಕಾರ ಹೊಂದಿರುವುದಿಲ್ಲ ಮತ್ತು ಅದು ಅನುಮತಿಸಿದ ಶೀರ್ಷಿಕೆಯನ್ನು ಸಿಬಿಎಫ್ ಸಿ ಒಪ್ಪಬೇಕಿಲ್ಲ ಎಂದು ಮಂಡಳಿಯು ಹೇಳಿದಾಗ ಆಶ್ಚರ್ಯವಾಯಿತು.ಗೋಧ್ರಾ ಎಂಬ ಶೀರ್ಷಿಕೆಯು ಆ ಸ್ಥಳದಲ್ಲಿ ನಡೆದ ಘಟನೆಗೆ ಸಂಬಂಧಿಸಿಲ್ಲ ಎಂಬ ಭರವಸೆಯನ್ನು ನಾವು ಕೆಎಫ್‌ಸಿಸಿಗೆ ನೀಡಿದ್ದೆವು. ಸಿನಿಮಾವನ್ನು ಅದೇ ರೀತಿಯಲ್ಲೇ ಮಾಡಿದ್ದೇವೆ. ಚಿತ್ರದ ಚಿತ್ರೀಕರಣಕ್ಕೆ ಶೀರ್ಷಿಕೆಯನ್ನು ನೋಂದಾಯಿಸಲು ಕೆಎಫ್‌ಸಿಸಿಯಿಂದ ಅನುಮತಿ ಪಡೆಯುವಾಗ ಪ್ರತಿಯೊಬ್ಬ ನಿರ್ಮಾಪಕರು ಅನುಸರಿಸಬೇಕಾದ ಎಲ್ಲ ಕಾರ್ಯವಿಧಾನಗಳನ್ನು ನಾವು ಅನುಸರಿಸಿದ್ದೇವೆ. ಚಿತ್ರೀಕರಣದ ಸಮಯದಲ್ಲಿ ತನ್ನದೇ ಅಂಗಸಂಸ್ಥೆಗಳ ಸದಸ್ಯರನ್ನು ಎಲ್ಲಿ, ಎಷ್ಟು ಬಳಸಿಕೊಳ್ಳಬೇಕು, ಯಾವೆಲ್ಲ ನಿಯಮಗಳನ್ನು ಅನುಸರಿಸಬೇಕು ಎಂದೆಲ್ಲ ಹೇಳುತ್ತದೆ. ಅದನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಅವುಗಳ ಬೆನ್ನಿಗೆ ನಿಲ್ಲುತ್ತದೆ.

ಆದರೆ, ಕೋಟಿ ಕೋಟಿ ಹಣ ಹಾಕಿ ಸಿನಿಮಾ ಮಾಡುವ ಚಿತ್ರತಂಡವನ್ನು ರಕ್ಷಿಸಲು ಸಾಧ್ಯವಾಗದಂತಹ ಶೀರ್ಷಿಕೆಗಳನ್ನು ನೀಡುತ್ತದೆ? ಈ ಸೋಜಿಗವನ್ನು ಹೊರತುಪಡಿಸಿ, ಗೋಧ್ರಾ ಶೀರ್ಷಿಕೆಯನ್ನು ಬಳಸಿಕೊಂಡು ನಾವು ಈಗಾಗಲೇ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ ಮತ್ತು ಕಳೆದ ಎರಡು ವರ್ಷಗಳಿಂದ ಈ ಹೆಸರಿನಿಂದಲೇ ಸಿನಿಮಾ ಪ್ರಚಾರ ಮಾಡಿದ್ದೇವೆ. ಅದಕ್ಕಾಗಿ ಹಣವನ್ನೂ ವ್ಯಯಿಸಿದ್ದೇವೆ.ಹೀಗಾಗಿ ಕೆಎಫ್‌ಸಿಸಿಯು ಈ ವಿಷಯದಲ್ಲಿ ನಮಗೆ ಧೈರ್ಯ ತುಂಬಬೇಕಿದೆ. ಆಗಿರುವ ಈ ಗೊಂದಲವನ್ನು ತಿಳಿಗೊಳಿಸಬೇಕಿದೆ. ಜವಾಬ್ದಾರಿಯುತ ಚಲನಚಿತ್ರ ನಿರ್ಮಾಪಕರಾಗಿ, ನಾವು ಉತ್ತರಗಳನ್ನು ಕೋರುತ್ತೇವೆ. ನಿರ್ಮಾಪಕರು ಮತ್ತು ನಿರ್ದೇಶಕರು ಹಾಗೂ ನೂರಾರು ಕಲಾವಿದರು ಮತ್ತು ತಂತ್ರಜ್ಞರನ್ನು ಕೆಎಫ್‌ಸಿಸಿಯು ಒಳಗೊಳ್ಳುವುದರಿಂದ, ನೀವು ಕೊಟ್ಟ ಶೀರ್ಷಿಕೆಗಳನ್ನೇ ನಂಬಿಕೊಂಡು ಶ್ರಮ ಪಡುವುದರಿಂದ, ಕೊನೆಗೆ ನೀವು ಕೊಡುವ ಶೀರ್ಷಿಕೆಗೆ ಯಾವುದೇ ಬೆಲೆ ಇಲ್ಲ ಅಂದಾಗ ನಾವು ಯಾರನ್ನು ನಂಬಬೇಕು? ಎಂದು ಚಿತ್ರತಂಡ ಪ್ರಶ್ನಿಸಿದೆ.ಈ ಚಿತ್ರಕ್ಕೆ ನೀನಾಸಂ ಸತೀಶ್ ನಾಯಕರಾದರೆ, ಶ್ರದ್ಧಾ ಶ್ರೀನಾಥ್ ನಾಯಕಿ. ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷ ಸೋಮಶೇಖರ್ ಮತ್ತು ಸೋನು ಗೌಡ ಮುಂತಾದವರ ತಾರಾ ಬಳಗವಿದೆ. ಜುಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ, ಕೆ.ಪಿ. ಇನ್ನೆಲೆ ಸಂಗೀತ ಕೊಟ್ಟಿದ್ದಾರೆ. ಕೆ.ಎಸ್.ನಂದೀಶ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ಕೂಡ ನಡೆಸಲಾಗಿದೆ.

ಯುಎನ್ಐ ಎಸ್‍ಎ 1314

More News
ಕಲಾನಿರ್ದೇಶಕ ಜಿ ಮೂರ್ತಿ ಇನ್ನಿಲ್ಲ

ಕಲಾನಿರ್ದೇಶಕ ಜಿ ಮೂರ್ತಿ ಇನ್ನಿಲ್ಲ

24 Oct 2020 | 9:24 PM

ಬೆಂಗಳೂರು, ಅ 24 (ಯುಎನ್ಐ) ಸಿನಿಮಾ ಕಲಾನಿರ್ದೇಶಕ, ಚಿತ್ರನಿರ್ದೇಶಕ, ನಿರ್ಮಾಪಕ ಜಿ. ಮೂರ್ತಿ ವಿಧಿವಶರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.

 Sharesee more..
'ಪದವಿಪೂರ್ವ'ಕ್ಕೆ ಸೇರಿದ ನವರಸ ನಾಯಕನ ಅಭಿಮಾನಿ

'ಪದವಿಪೂರ್ವ'ಕ್ಕೆ ಸೇರಿದ ನವರಸ ನಾಯಕನ ಅಭಿಮಾನಿ

23 Oct 2020 | 9:09 PM

ಬೆಂಗಳೂರು, ಅ 23 (ಯುಎನ್ಐ) ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ಹರಿಪ್ರಸಾದ್ ಜಯಣ್ಣ ಅವರ ಚೊಚ್ಚಲ ನಿರ್ದೇಶನದಲ್ಲಿ ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ ನಿರ್ಮಿಸುತ್ತಿರುವ ಪದವಿಪೂರ್ವ ಚಿತ್ರಕ್ಕೆ ಹಾಸನದ ಅರಕಲುಗೂಡಿನ ಪ್ರತಿಭೆ ವಿಜೇಶ್ ಅಲಿಯಾಸ್ ವೆಂಕಟೇಶ್ ಗಂಗಾಧರಪ್ಪ ಪ್ರವೇಶ ಪಡೆದುಕೊಂಡಿದ್ದಾರೆ.

 Sharesee more..