Monday, Oct 26 2020 | Time 04:31 Hrs(IST)
Entertainment Share

ಗೋಧ್ರಾ ಅಲ್ಲ ಗೋಧ್ರಾನ್ ಕೂಡ ಅಲ್ಲ, ಶೀಘ್ರವೇ ಶೀರ್ಷಿಕೆ ಘೋಷಣಿ

ಬೆಂಗಳೂರು, ಆ 17(ಯುಎನ್ಐ) ನೀನಾಸಂ ಸತೀಶ್ ಅಭಿನಯದ ಗೋಧ್ರಾ ಚಿತ್ರದ ಶೀರ್ಷಿಕೆ ಬದಲಾವಣೆಗೆ ಸೆನ್ಸಾರ್ ಮಂಡಳಿ ಸೂಚಿಸಿದ ನಂತರ ಸಾಕಷ್ಟು ಚರ್ಚೆ ಕೇಳಿಬರುತ್ತಿದೆ.
"ನಮ್ಮ ಚಿತ್ರದ ಶೀರ್ಷಿಕೆ ಅನಗತ್ಯ ಚರ್ಚೆಗಳನ್ನು ಹುಟ್ಟುಹಾಕಲು ಪ್ರಾರಂಭಿಸಿದೆ. ಅದಕ್ಕಾಗಿ ನಾವು ವಿಷಾದಿಸುತ್ತೇವೆ. ಈಗಾಗಲೇ ಹೇಳಿದಂತೆ, ನಾವು ಇನ್ನು ಮುಂದೆ ನಮ್ಮ ಚಲನಚಿತ್ರಕ್ಕಾಗಿ ಗೋಧ್ರಾ ಶೀರ್ಷಿಕೆಯನ್ನು ಬಳಸುತ್ತಿಲ್ಲ. ಇದಕ್ಕಾಗಿ ಸಂಪೂರ್ಣವಾಗಿ ವಿಭಿನ್ನ ಹೆಸರನ್ನು ಬಳಸಲು ನಾವು ತೀರ್ಮಾನಿಸಿದ್ದೇವೆ ಮತ್ತು ಅದನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಹಿಂದಿನ ಗೋಧ್ರಾದಿಂದ ಶೀರ್ಷಿಕೆಯನ್ನು ಗೋಧ್ರಾನ್ ಎಂದು ಬದಲಾಯಿಸಲು ನಾವು ಮೊದಲೇ ಯೋಜಿಸಿದ್ದೆವು. ಆದರೆ ಅದು ಕೂಡ ತಾತ್ಕಾಲಿಕ ಶೀರ್ಷಿಕೆ ಆಗಿತ್ತು. ಈಗ ಅದನ್ನು ಕೈ ಬಿಡಲು ನಿರ್ಧಾರ ಮಾಡಿದ್ದೇವೆ" ಎಂದು ಚಿತ್ರತಂಡ ತಿಳಿಸಿದೆ.
ಕೆಎಫ್‌ಸಿಸಿ ಮತ್ತು ಸಿಬಿಎಫ್‌ಸಿಯೊಂದಿಗೆ ಸಮಾಲೋಚಿಸಿದ ನಂತರ ನಾವು ಶೀರ್ಷಿಕೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದ್ದೇವೆ. ಹೊಸ ಶೀರ್ಷಿಕೆ ಅವರ ಒಪ್ಪಿಗೆಯೊಂದಿಗೆ ಇರುತ್ತದೆ. ಯಾವುದೇ ಕಾರಣಕ್ಕೂ ಯಾರ ಭಾವನೆಗಳನ್ನು ನೋಯಿಸುವ ಉದ್ದೇಶ ನಮಗಿಲ್ಲ. ಈ ವಿಷಯದಿಂದ ವಿವಾದವನ್ನು ಉಂಟುಮಾಡಲು ನಾವು ಪ್ರಯತ್ನಿಸುವುದಿಲ್ಲ. ಇದು ಸಂಪೂರ್ಣವಾಗಿ ಅನಗತ್ಯ. ಮನರಂಜನೆ ಮತ್ತು ಸಾಮಾಜಿಕ ಸಂದೇಶದ ಮೂಲಕ ಸಂತೋಷವನ್ನು ಹಂಚುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ.
ಆದ್ದರಿಂದ ಶೀರ್ಷಿಕೆ ಈ ಪ್ರಕ್ರಿಯೆಯ ಹಾದಿಯಲ್ಲಿ ಬರಬಾರದು. ನಮ್ಮ ಹೊಸ ಶೀರ್ಷಿಕೆಯೊಂದಿಗೆ ನಾವು ಬೇಗನೆ ಎಲ್ಲರ ಮುಂದೆ ಬರುತ್ತೇವೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಯುಎನ್ಐ ಎಸ್ಎ 1931
More News
ಕಲಾನಿರ್ದೇಶಕ ಜಿ ಮೂರ್ತಿ ಇನ್ನಿಲ್ಲ

ಕಲಾನಿರ್ದೇಶಕ ಜಿ ಮೂರ್ತಿ ಇನ್ನಿಲ್ಲ

24 Oct 2020 | 9:24 PM

ಬೆಂಗಳೂರು, ಅ 24 (ಯುಎನ್ಐ) ಸಿನಿಮಾ ಕಲಾನಿರ್ದೇಶಕ, ಚಿತ್ರನಿರ್ದೇಶಕ, ನಿರ್ಮಾಪಕ ಜಿ. ಮೂರ್ತಿ ವಿಧಿವಶರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.

 Sharesee more..
'ಪದವಿಪೂರ್ವ'ಕ್ಕೆ ಸೇರಿದ ನವರಸ ನಾಯಕನ ಅಭಿಮಾನಿ

'ಪದವಿಪೂರ್ವ'ಕ್ಕೆ ಸೇರಿದ ನವರಸ ನಾಯಕನ ಅಭಿಮಾನಿ

23 Oct 2020 | 9:09 PM

ಬೆಂಗಳೂರು, ಅ 23 (ಯುಎನ್ಐ) ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ಹರಿಪ್ರಸಾದ್ ಜಯಣ್ಣ ಅವರ ಚೊಚ್ಚಲ ನಿರ್ದೇಶನದಲ್ಲಿ ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ ನಿರ್ಮಿಸುತ್ತಿರುವ ಪದವಿಪೂರ್ವ ಚಿತ್ರಕ್ಕೆ ಹಾಸನದ ಅರಕಲುಗೂಡಿನ ಪ್ರತಿಭೆ ವಿಜೇಶ್ ಅಲಿಯಾಸ್ ವೆಂಕಟೇಶ್ ಗಂಗಾಧರಪ್ಪ ಪ್ರವೇಶ ಪಡೆದುಕೊಂಡಿದ್ದಾರೆ.

 Sharesee more..