Monday, Oct 26 2020 | Time 04:25 Hrs(IST)
Sports Share

ಗೆಲುವಿನ ಮಿಂಚಿರುವುದು ಖುಷಿ ನೀಡಿದೆ: ಎಬಿಡಿ

ದುಬೈ, ಅ.17 (ಯುಎನ್ಐ)- ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯ ಗೆದ್ದಿದ್ದು, ನಿಜಕ್ಕೂ ಖುಷಿ ನೀಡಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಹೇಳಿದ್ದಾರೆ.
ಐಪಿಎಲ್ ನ 33ನೇ ಪಂದ್ಯದಲ್ಲಿ ಬೆಂಗಳೂರು ತಂಡ ಏಳು ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ, 12 ಅಂಕಗಳೊಂದಿಗೆ ವಿರಾಟ್ ಪಡೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
“ನಮ್ಮ ಬೌಲರ್ ಗಳು ಕೊಂಚ ರನ್ ನೀಡಿ ಕೈ ಸುಟ್ಟುಕೊಂಡರು. ನಾವು 15-20 ರನ್ ಹೆಚ್ಚಾಗಿ ನೀಡಿದ್ದೇವು. ವಿರಾಟ್ ಹಾಗೂ ನಾನು ಜೊತೆಯಾಟವನ್ನು ಬೆಳೆಸುವ ಯೋಜನೆಯನ್ನು ಹಾಕಿಕೊಂಡಿದ್ದೆವು. ನನ್ನಲ್ಲಿರುವ ಕ್ಷಮತೆಯನ್ನು ತೋರಿಸುವ ಅವಶ್ಯಕತೆ ಇತ್ತು” ಎಂದು ತಿಳಿಸಿದ್ದಾರೆ.
“ಹಿಂದಿನ ಪಂದ್ಯದಲ್ಲಿ ನಾನು ಉತ್ತಮವಾಗಿ ಆಡಿರಲಿಲ್ಲ. ಕೆಲವಮ್ಮೆ ಎದುರಾಳಿ ಬೌಲರ್ ಗಳು ಉತ್ತಮ ಬೌಲಿಂಗ್ ನಡೆಸಿದ್ದಾರೆ. ಉನಾದ್ಕಟ್ ಬೌಲಿಂಗ್ ಮಾಡುವಾಗ ಲೆಗ್ ಸೈಡ್ ನಲ್ಲಿ ಬಾರಿಸುವ ಯೋಜನೆಯನ್ನು ಹಾಕಿಕೊಂಡಿದ್ದೆ. ಇಂದು ಆಡಿದ ರೀತಿ ಖುಷಿ ನೀಡಿದೆ” ಎಂದಿದ್ದಾರೆ.
ಯುಎನ್ಐ ವಿಎನ್ಎಲ್ 2133