Tuesday, Oct 22 2019 | Time 09:54 Hrs(IST)
  • ಐರ್ಲೆಂಡ್ ನಲ್ಲಿ ಗರ್ಭಪಾತ, ಸಮಾನ ವಯಸ್ಸು ವಿವಾಹ ಕಾನೂನು ಬದ್ಧ
  • ಸಂಸದ ಜಲೀಲ್ ಮೇಲೆ ಹಲ್ಲೆಗೆ ಯತ್ನ: ಎನ್‌ಸಿಪಿ ಅಭ್ಯರ್ಥಿ ಸೇರಿ ಮೂವರ ಬಂಧನ
  • ಇಂದು ಬ್ಯಾಂಕ್ ನೌಕರರ ಮುಷ್ಕರ; ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ
  • ಇಸ್ಲಾಮಿಕ್‍ ಸ್ಟೇಟ್‍ ಉಗ್ರರ ದಾಳಿ: ನಾಲ್ವರು ಪೊಲೀಸರು ಬಲಿ
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Entertainment Share

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪನೋರಮಾ ವಿಭಾಗಕ್ಕೆ ಕನ್ನಡದ ’ರಂಗನಾಯಕಿ’

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪನೋರಮಾ ವಿಭಾಗಕ್ಕೆ ಕನ್ನಡದ ’ರಂಗನಾಯಕಿ’
ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪನೋರಮಾ ವಿಭಾಗಕ್ಕೆ ಕನ್ನಡದ ’ರಂಗನಾಯಕಿ’

ಬೆಂಗಳೂರು, ಅ ೦೮ (ಯುಎನ್‌ಐ) ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಮ ವಿಭಾಗಕ್ಕೆ ‘ರಂಗನಾಯಕಿ ಭಾಗ ೧’ ಚಿತ್ರ ಆಯ್ಕೆಯಾಗಿದೆ

ಎಸ್ ವಿ ಎಂಟರ್‍ಟೈನ್‌ಮೆಂಟ್ ಲಾಂಛನದಲ್ಲಿ ಎಸ್ ವಿ ನಾರಾಯಣ್ ನಿರ್ಮಿಸಿ ದಯಾಳ್ ಪದ್ಮನಾಭನ್ ನಿರ್ದೇಶಿಸಿರುವ ‘ರಂಗನಾಯಕಿ ಭಾಗ ೧‘ ಚಿತ್ರ ಗೋವಾ ಅಂತರರಾಷ್ತ್ರೀಯ ಚಲನಚಿತ್ರೋತ್ಸವ(೨೦೧೯)ದ ಇಂಡಿಯನ್ ಪನೋರಮ ವಿಭಾಗಕ್ಕೆ ಆಯ್ಕೆಯಾಗಿದೆ. ಈ ವರ್ಷ ‘ಗೋಲ್ಡನ್ ಜ್ಯೂಬಿಲಿ ಎಡಿಷನ್ ಆಫ಼್ ದಿ ಫ಼ೆಸ್ಟಿವಲ್‘ ಆಗಿದ್ದು ಈ ಸಮಯದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ‘ರಂಗನಾಯಕಿ ಭಾಗ ೧’ ಪಾತ್ರವಾಗಿದೆ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ.

ಚಿತ್ರ ಮುಂದಿನ ತಿಂಗಳು ತೆರೆಕಾಣಲಿದ್ದು, ಬಿಡುಗಡೆ ಪೂರ್ವದಲ್ಲೇ ಪ್ರತಿಷ್ಠಿತ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಸಂತಸದ ಸಂಗತಿ.

ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ರಾಕೇಶ್ ಅವರ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಸಂಕಲನವಿರುವ ಈ ಚಿತ್ರಕ್ಕೆ ನವೀನ್‌ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಅವಿನಾಶ್ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಅದಿತಿ ಪ್ರಭುದೇವ, ಎಂ.ಜಿ.ಶ್ರೀನಿವಾಸ್(ಶ್ರೀನಿ), ತ್ರಿವಿಕ್ರಮ್, ಶಿವಾರಾಂ, ಸುಚೇಂದ್ರಪ್ರಸಾದ್, ಸುಂದರ್, ವೀಣಾ ಸುಂದರ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಯುಎನ್‌ಐ ಎಸ್‌ಎ ವಿಎನ್ ೧೪೦೨