Saturday, Jan 16 2021 | Time 07:59 Hrs(IST)
Entertainment Share

ಗೋವಾ ಸಿನಿಮೋತ್ಸವ : 50 ಚಲನಚಿತ್ರ ಪ್ರದರ್ಶನ

ಪಣಜಿ, ಜ 13 (ಯುಎನ್ಐ) ಗೋವಾದಲ್ಲಿ ನಡೆಯಲಿರುವ 51 ನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ವಿಶ್ವ ಪನೊರಮಾ ವಿಭಾಗದಲ್ಲಿ ಪ್ರದರ್ಶಿಸಲಾಗುವ ಸಿನಿಮಾಗಳ ಪಟ್ಟಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಪ್ರಕಟಿಸಿದೆ. ವಿಶ್ವ ಪನೊರಮಾ ವಿಭಾಗದಲ್ಲಿ 50 ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ವಿಶ್ವದ ವಿವಿಧ ದೇಶಗಳ ಸಿನಿಮಾಗಳು ಈ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ.
ಅಮೆರಿಕ, ಬ್ರಿಟನ್, ಕೆನಡಾ, ಇರಾನ್, ಫ್ರಾನ್ಸ್‌, ಜರ್ಮನಿ, ಸ್ಪೇನ್, ಇಟಲಿ ಇನ್ನೂ ಅನೇಕ ಪ್ರಮುಖ ಸಿನಿಮಾ ನಿರ್ಮಾಣ ದೇಶಗಳ ಜೊತೆಗೆ ಬಾಂಗ್ಲಾದೇಶ, ಕಜಕಿಸ್ತಾನ, ಸ್ಲೊವೋಕಿಯಾ, ಲಿತೂನಿಯಾ, ರೊಮಾನಿಯಾ, ಅಂಡೊರ್ರಾ, ಮೆಸಿಡೋನಿಯಾ ಇನ್ನೂ ಹಲವು ದೇಶಗಳ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ

51 ನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವ ಜನವರಿ 16 ರಿಂದ ಪ್ರಾರಂಭವಾಗಲಿದ್ದು, 12 ದಿನ ನಡೆಯಲಿರುವ ಈ ಉತ್ಸವವು ಜನವರಿ 24 ರಂದು ಸಮಾರೋಪಗೊಳ್ಳಲಿದೆ. ಗೋವಾ ಸಿನಿಮಾಉತ್ಸವ ಎಂದು ಕರೆಯಲಾಗುವ ಈ ಉತ್ಸವವು ಏಷ್ಯಾದ ಹಳೆಯ ಮತ್ತು ಭಾರತದ ದೊಡ್ಡ ಸಿನಿಮಾ ಉತ್ಸವ ಆಗಿದೆ. ಈ ಬಾರಿಯ ಗೋವಾ ಸಿನಿಮೋತ್ಸವವನ್ನು ಒಟಿಟಿಯಲ್ಲಿ ಸಹ ನೋಡಬಹುದಾಗಿದೆ. ನೊಂದಾವಣಿ ಮಾಹಿತಿ ಮಾಹಿತಿ ಹಾಗೂ ಪ್ರಸಾರ ಇಲಾಖೆ (ಪಿಐಬಿ) ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
More News
'ಅದೇ ಮುಖ

'ಅದೇ ಮುಖ" !

15 Jan 2021 | 10:59 PM

ಬೆಂಗಳೂರು, ಜ 15 (ಯುಎನ್ಐ) ವರನಟ ಡಾ ರಾಜ್ ಕುಮಾರ್ ಅಭಿನಯದ ಅದೇ ಕಣ್ಣು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅಣ್ಣಾವ್ರ ನಟನೆಗೆ ಜನರು ಫಿದಾ ಆಗಿದ್ದರು. ಚಿತ್ರವೂ ಹಿಟ್ ಆಗಿತ್ತು.

 Sharesee more..
ಸುಗ್ಗಿ ಸಂಭ್ರಮದ ನಡುವೆ 'ಲಂಕಾಸುರ'

ಸುಗ್ಗಿ ಸಂಭ್ರಮದ ನಡುವೆ 'ಲಂಕಾಸುರ'

15 Jan 2021 | 10:04 PM

ಬೆಂಗಳೂರು, ಜ 15 (ಯುಎನ್ಐ) ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ್ ಪ್ರಭಾಕರ್ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ.

 Sharesee more..

“ಕಬ್ಜ” ಭಾರ್ಗವ್ ಭಕ್ಷಿಯಾಗಿ ಕಿಚ್ಚನ ಅಬ್ಬರ

14 Jan 2021 | 2:47 PM

 Sharesee more..