Saturday, Jul 11 2020 | Time 10:57 Hrs(IST)
  • ಪುಲ್ವಾಮದಲ್ಲಿ ಭದ್ರತಾ ಪಡೆಯಿಂದ ಶೋಧ ಕಾರ್ಯಾಚರಣೆ
  • ಬಾರಮುಲ್ಲಾ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರ ಹತ್ಯೆ
National Share

ಗೃಹ ಸಚಿವಾಲಯದಿಂದ ಅನ್‍ಲಾಕ್‍-2 ಮಾರ್ಗಸೂಚಿ ಪ್ರಕಟ: ಜುಲೈ 31ರವರೆಗೆ ಶಾಲಾ-ಕಾಲೇಜು, ಮೆಟ್ರೋ, ಸಿನೆಮಾ ಹಾಲ್‌ಗಳು ಸ್ಥಗಿತ

ನವದೆಹಲಿ, ಜೂನ್ 29 (ಯುಎನ್‌ಐ) – ಕೇಂದ್ರ ಗೃಹ ಸಚಿವಾಲಯ ಅನ್‍ಲಾಕ್‍-2ಕ್ಕೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಶಾಲಾ- ಕಾಲೇಜುಗಳು, ಮೆಟ್ರೋ ಮತ್ತು ಸಿನೆಮಾ ಹಾಲ್‌ಗಳನ್ನು ಜುಲೈ 31 ರವರೆಗೆ ಮುಚ್ಚುವಂತೆ ನಿರ್ದೇಶಿಸಿದೆ.
‘ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಶಾಲಾ- ಕಾಲೇಜುಗಳು ಮತ್ತು ತರಬೇತಿ ಸಂಸ್ಥೆಗಳು 2020 ಜುಲೈ 31 ರವರೆಗೆ ಮುಚ್ಚವಂತೆ ನಿರ್ಧರಿಸಲಾಗಿದೆ.’ ಎಂದು ಹೊಸ ಮಾರ್ಗಸೂಚಿಗಳು ತಿಳಿಸಿವೆ.
ಹೊಸ ನಿಯಮಗಳಂತೆ, ಸಿನೆಮಾ ಹಾಲ್‌ಗಳು, ವ್ಯಾಯಾಮಶಾಲೆಗಳು, ಈಜುಕೊಳಗಳು, ಮನರಂಜನಾ ಉದ್ಯಾನವನಗಳು, ಚಿತ್ರಮಂದಿರಗಳು, ಬಾರ್‌ಗಳು, ಸಭಾಂಗಣಗಳು ಹಾಗೂ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳು ಮತ್ತು ಇತರ ದೊಡ್ಡ ಸಭೆಗಳಿಗೆ ಜುಲೈ 31 ರವರೆಗೆ ನಿರ್ಬಂಧ ಹೇರಲಾಗಿದೆ.
ವಂದೇ ಭಾರತ್ ಕಾರ್ಯಾಚರಣೆಯಡಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣವನ್ನು ಸೀಮಿತ ರೀತಿಯಲ್ಲಿ ಅನುಮತಿಸಲಾಗಿದೆ. ಆದರೆ ದೇಶೀಯ ವಿಮಾನಗಳು ಮತ್ತು ಪ್ರಯಾಣಿಕರ ರೈಲುಗಳನ್ನು ಈಗಾಗಲೇ ಸೀಮಿತ ರೀತಿಯಲ್ಲಿ ಅನುಮತಿಸಲಾಗಿದೆ. ಇವುಗಳ ಕಾರ್ಯಾಚರಣೆಗಳನ್ನು ಹಂತಹಂತವಾಗಿ ಮತ್ತಷ್ಟು ವಿಸ್ತರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ರಾತ್ರಿ ಕರ್ಫ್ಯೂ ಅವಧಿಯನ್ನು ಮತ್ತಷ್ಟು ಸಡಿಲಿಸಲಾಗುತ್ತಿದೆ. ಕರ್ಫ್ಯೂ ರಾತ್ರಿ ಗಂಟೆಯಿಂದ ಬೆಳಿಗ್ಗೆ 5ರವರೆಗೆ ಜಾರಿಯಲ್ಲಿರುತ್ತದೆ. ಕೈಗಾರಿಕಾ ಘಟಕಗಳ ತಡೆರಹಿತ ಕಾರ್ಯಾಚರಣೆ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವ್ಯಕ್ತಿಗಳು ಮತ್ತು ಸರಕುಗಳ ಚಲನೆ, ಬಸ್‍ಗಳು, ರೈಲುಗಳು ಮತ್ತು ವಿಮಾನಗಳಿಂದ ಇಳಿದ ನಂತರ ಸಾಗುವ ವ್ಯಕ್ತಿಗಳಿಗೆ ರಾತ್ರಿ ಕರ್ಫ್ಯೂ ನಿಂದ ವಿನಾಯಿತಿ ಇರುತ್ತದೆ.
ಅಂಗಡಿಗಳಲ್ಲಿ ಪ್ರದೇಶವನ್ನು ಅವಲಂಬಿಸಿ, ಒಂದು ಬಾರಿ ಐದು ಕ್ಕೂ ಹೆಚ್ಚು ಜನರು ಇರಬಾರದು. ಈ ವೇಳೆ ಸಾಕಷ್ಟು ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ.
ಯುಎನ್‍ಐ ಎಸ್‍ಎಲ್ಎಸ್ 2317
More News
ವಾಸ್ತವ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಸೇನೆಗಳ ಸಂಪೂರ್ಣ ಹಿಂತೆಗೆತಕ್ಕೆ ಭಾರತ, ಚೀನಾ ಪುನರುಚ್ಛಾರ

ವಾಸ್ತವ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಸೇನೆಗಳ ಸಂಪೂರ್ಣ ಹಿಂತೆಗೆತಕ್ಕೆ ಭಾರತ, ಚೀನಾ ಪುನರುಚ್ಛಾರ

10 Jul 2020 | 9:30 PM

ನವದೆಹಲಿ, ಜುಲೈ(ಯುಎನ್‍ಐ)- ಪೂರ್ವ ಲಡಾಖ್‍ ನ ವಾಸ್ತವ ಗಡಿ ನಿಯಂತ್ರಣಾ ರೇಖೆಯಯಲ್ಲಿ ಮುಂದುವರೆದಿರುವ ಸೇನೆ ಹಿಂತೆಗೆತದ ನಡುವೆ ಭಾರತ ಮತ್ತು ಚೀನಾ ರಾಯಭಾರಿಗಳು ಶುಕ್ರವಾರ ಸಭೆ ನಡೆಸಿ, ಗಡಿ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಭಾರತ-ಚೀನಾ ಗಡಿಯಲ್ಲಿ ಸೇನೆಗಳನ್ನು ಸಂಪೂರ್ಣ ಹಿಂತೆಗೆದುಕೊಳ್ಳುವುದನ್ನು ಎರಡೂ ದೇಶಗಳು ಖಚಿತಪಡಿಸುತ್ತವೆ ಎಂದು ಪುನರುಚ್ಛರಿಸಿದ್ದಾರೆ.

 Sharesee more..

ಶಾಸ್ತ್ರಿ ಭವನದಲ್ಲಿ ಅಗ್ನಿ ಆಕಸ್ಮಿಕ

10 Jul 2020 | 4:57 PM

 Sharesee more..