Wednesday, Jul 15 2020 | Time 04:10 Hrs(IST)
Entertainment Share

ಚಿತ್ರರಂಗದಲ್ಲಿ ಕಾರ್ತಿಕ್ ನನ್ನ ಅತ್ಯಂತ ಆತ್ಮೀಯ ಗೆಳೆಯ; ಅನನ್ಯಾ ಪಾಂಡೆ

ಬೆಂಗಳೂರು, ಸೆ 10 (ಯುಎನ್ಐ ) ನಟ ಕಾರ್ತಿಕ್ ಆರ್ಯನ್ ಚಿತ್ರರಂಗದಲ್ಲಿನ ತನ್ನ ಅತ್ಯಂತ ಆಪ್ತ ಸ್ನೇಹಿತ ಎಂದು ಬಾಲಿವುಡ್ ನಟ ಚಂಕಿ ಪಾಂಡೆ ಪುತ್ರಿ ಹಾಗೂ ನಟಿ ಅನನ್ಯಾ ಪಾಂಡೆ ಹೇಳಿದ್ದಾರೆ.
ಕಾರ್ತಿಕ್ ಆರ್ಯನ್ ಹಾಗೂ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ನಡುವೆ ಪ್ರೇಮ ಸಂಬಂಧವಿದೆ ಎಂಬ ವದಂತಿಗಳ ನಡುವೆಯೇ ಕಾರ್ತಿಕ್ ಮತ್ತು ಅನನ್ಯಾ ನಡುವೆಯೂ ಇಂತಹದೊಂದು ಗುಲ್ಲು ಕೇಳಿ ಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅನನ್ಯಾ, ಚಿತ್ರೋದ್ಯಮದಲ್ಲಿ ಕಾರ್ತಿಕ್ ನನ್ನ ಅತ್ಯಂತ ಆತ್ಮೀಯ ಗೆಳೆಯನಾಗಿದ್ದಾರೆ. ಅವರು ತುಂಬಾ ಹಾಸ್ಯಮಯವಾಗಿ ಮಾತುನಾಡುತ್ತಾರೆ ಹಾಗೂ ಚಿತ್ರೀಕರಣದ ಸಂದರ್ಭದಲ್ಲಿ ಸದಾ ನನ್ನನ್ನು ನಗಿಸುತ್ತಿರುತ್ತಾರೆ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಜೊತೆಗೆ, ಸಾರಾ ಅಲಿ ಖಾನ್ ಅನ್ನು ಚಿತ್ರರಂಗಕ್ಕೆ ಬರುವ ಮುಂಚಿನಿಂದಲೂ ಬಲ್ಲೆ. ಕಾಲೇಜಿನಲ್ಲಿ ಅವರು ನನ್ನ ಸೀನಿಯರ್ ಆಗಿದ್ದರು. ಇಬ್ಬರೂ ಒಟ್ಟಿಗೆ ಹಲವು ನಾಟಕಗಳಲ್ಲಿ ಪಾತ್ರವಹಿಸಿದ್ದೆವು ಎಂದಿದ್ದಾರೆ.
ಕರಣ್ ಜೋಹರ್ ನಿರ್ದೇಶನದ ‘ಸ್ಟೂಡೆಂಟ್ ಆಫ್ ದಿ ಇಯರ್ -2’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ಅನನ್ಯಾ ಪಾಂಡೆ, ಸದ್ಯ ‘ಪತಿ ಪತ್ನಿ ಔರ್ ವೋ’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಅವರೊಂದಿಗೆ ನಟಿಸುತ್ತಿದ್ದು, ಚಿತ್ರದಲ್ಲಿ ಭೂಮಿ ಪಡ್ನೇಕರ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಯುಎನ್ಐ ಎಸ್ಎಚ್ ಕೆಎಸ್ ವಿ 1824