Sunday, Dec 15 2019 | Time 17:52 Hrs(IST)
 • ಪೌರತ್ವ ತಿದ್ದುಪಡಿ ಮಸೂದೆ ಜಾರಿಯಿಂದ ದೇಶ ರಕ್ಷಣೆಯಾಗಿದೆ; ಪ್ರಧಾನಿ
 • ಪಂತ್-ಅಯ್ಯರ್ ಅರ್ಧಶತಕ: ವೆಸ್ಟ್‌ ಇಂಡೀಸ್‌ಗೆ 289 ರನ್ ಗುರಿ
 • ಸೈಫ್ ಪುತ್ರಿಯಾಗಿ ಅನನ್ಯ !
 • ದಬಾಂಗ್ -3 ಕುರಿತು ಸಲ್ಮಾನ್ ಮಾತು
 • ಎಚ್ ಡಿ ರೇವಣ್ಣ ಮಂಡ್ಯ ಉಸಾಬರಿಗೆ ಬರುವುದು ಬೇಡ: ನಾರಾಯಣಗೌಡ
 • ಧೋನಿ ನನ್ನ ನೆಚ್ಚಿನ ಕ್ರಿಕೆಟರ್; ಸಲ್ಮಾನ್ ಖಾನ್
 • ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್‌ಗೆ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಮುಕುಟ
 • ಭಾರತಕ್ಕೆೆ ಪಂತ್, ಅಯ್ಯರ್ ಅರ್ಧಶತಕಗಳ ಆಸರೆ
 • ರಾಹುಲ್ ಗಾಂಧಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವೆ; ರಂಜಿತ್ ಸಾರ್ವಕರ್
 • ಅಸ್ಸಾಂ ಪರಿಸ್ಥಿತಿ ಕುರಿತು ಮೋದಿ, ಅಮಿತ್‍ ಷಾಗೆ ಮಾಹಿತಿ ನೀಡಲಿರುವ ಸೋನೋವಾಲ್‍
 • ವೃತ್ತಿ ಜೀವನದ 11ನೇ ಬಿಡಬ್ಲ್ಯುಎಫ್ ಫೈನಲ್ಸ್‌ ಗೆದ್ದ ಕೆಂಟೊ ಮೊಮೊಟಾ
 • ಕಾಂಗ್ರೆಸ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದೆ; ಮಾಯಾವತಿ ಲೇವಡಿ
 • ಭಾರತೀಯ ಮೀನುಗಾರರ ದೋಣಿಗಳ ಮೇಲೆ ಶ್ರೀಲಂಕಾ ನೌಕಾಪಡೆಯಿಂದ ದಾಳಿ
 • ವಿಶ್ವ ಸುಂದರಿ ಪಟ್ಟ, ಭಾರತದ ಸುಮನ್ ರಾವ್ ಗೆ ದ್ವಿತೀಯ ಸ್ಥಾನ
 • ಫಿಲಿಪೈನ್ಸ್‌ನಲ್ಲಿ 6 8 ತೀವ್ರತೆಯ ಭೂಕಂಪನ
Entertainment Share

ಚಿತ್ರೀಕರಣ ಮುಗಿಸಿದ '೧೦೦’ ಖಾಕಿ ಖದರ್‌ನಲ್ಲಿ ರಮೇಶ್ ಅರವಿಂದ್

ಚಿತ್ರೀಕರಣ ಮುಗಿಸಿದ '೧೦೦’ ಖಾಕಿ ಖದರ್‌ನಲ್ಲಿ ರಮೇಶ್ ಅರವಿಂದ್
ಚಿತ್ರೀಕರಣ ಮುಗಿಸಿದ '೧೦೦’ ಖಾಕಿ ಖದರ್‌ನಲ್ಲಿ ರಮೇಶ್ ಅರವಿಂದ್

ಬೆಂಗಳೂರು, ನ ೧೪ (ಯುಎನ್‌ಐ) ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ನಿರ್ದೇಶನದ ಸೈಬರ್ ಕ್ರೈಮ್ ಆಧಾರಿತ ಕೌಟುಂಬಿಕ ಥ್ರಿಲ್ಲರ್ ಚಿತ್ರ ’೧೦೦’ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ

ರಮೇಶ್ ಅರವಿಂದ್, ಪೂರ್ಣ, ರಚಿತ ರಾಮ್ ಮತ್ತಿತರರ 'ವಿಶ್ ಯು ಎ ಹ್ಯಾಪಿ ಬರ್ತ್ ಡೇ’ ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಳಿಸಿದೆ ಇನ್ನೊಂದು ತಿಂಗಳಲ್ಲಿ ರಿ ರೆಕಾರ್ಡಿಂಗ್ ಕೆಲಸವೂ ಮುಗಿಯಲಿದೆ ಎಂದು ಚಿತ್ರತಂಡ ತಿಳಿಸಿದೆ

ಚಿತ್ರದ ಬಗ್ಗೆ ವಿರಿಸಿದ ರಮೇಶ್ ಅರವಿಂದ್, ’೧೦೦’ ’ಸೈಬರ್ ಕ್ರೈಮ್’ ಆಧಾರಿತ ಕಥೆಯಾಗಿದೆ ಬೆಂಕಿ, ಚಾಕು, ಅಧಿಕಾರ, ಸಾಮಾಜಿಕ ಜಾಲತಾಣವನ್ನು ಯಾರು ಉಪಯೋಗಿಸುತ್ತಾರೆ ಎಂಬುದರ ಮೇಲೆ ಅದರ ಬಳಕೆ, ದುರ್ಬಳಕೆ ಗಳಿರುತ್ತವೆ. ಅಂತೆಯೆ ’೧೦೦’ ಸಿನಿಮಾದಲ್ಲಿ ಸಾಮಾಜಿಕ ಜಾಲತಾಣದ ದುರ್ಬಳಕೆಯ ಮೇಲೆ. ಅದರಿಂದಾಗುವ ಅನಾಹುತ ಬೆಳಕು ಚೆಲ್ಲಲಾಗಿದೆ ಎಂದು ಮಾಹಿತಿ ನೀಡಿದ್ದಾರೆ

ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಿಕೊಳ್ಳುವ ವಿಲನ್ ಪಾತ್ರದಲ್ಲಿ ವಿಶ್ವ ಹೆಸರಿನ ಹೊಸ ನಟನ ಪರಿಚಯವಾಗುತ್ತಿದ್ದು, ಅವನನ್ನು ಸಂಹಾರ ಮಾಡುವ ವಿಷ್ಣು ಹೆಸರಿನ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ.

ರಮೇಶ್ ಅರವಿಂದ ಪತ್ನಿಯ ಪಾತ್ರದಲ್ಲಿ ಪೂರ್ಣ, ಮಗಳ ಪಾತ್ರದಲ್ಲಿ ಪುಟಾಣಿ ಸ್ಮಯ ನಟಿಸಿದ್ದಾರೆ. ನಟಿ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈ ಹಿಂದೆ ತೇಜಸ್ವಿನಿ ಪ್ರೊಡಕ್ಷನ್ಸ್ ನಲ್ಲಿ ಹಲವು ಚಿತ್ರಗಳನ್ನು ನಿರ್ಮಿಸಿರುವ ಎಂ ರಮೇಶ್ ಶೆಟ್ಟಿ, ಸೂರಜ್ ಪ್ರೊಡಕ್ಷನ್ಸ್ ಹೆಸರಿನಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರ ’೧೦೦’

ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದು, ಪ್ರಮೋದ್ ಮರವಂತೆ, ಭಾಸ್ಕರ್ ಸೇರಿದಂತೆ ಮೂವರು ಸಾಹಿತ್ಯ ಒದಗಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣವಿದೆ.

ಯುಎನ್‌ಐ ಎಸ್‌ಎ ವಿಎನ್