Monday, Oct 26 2020 | Time 03:28 Hrs(IST)
International Share

ಚೀನಾದಲ್ಲಿ ಭೂಕುಸಿತ ಘಟನೆಯಲ್ಲಿ ಕನಿಷ್ಠ 5 ಮಂದಿ ಸಾವು

ಚೆಂಗ್ಡು, ಅ 17 (ಯುಎನ್‌ಐ)- ಚೀನಾದ ನೈರುತ್ಯ ಪ್ರಾಂತ್ಯವಾದ ಸಿಚುವಾನ್ ನಲ್ಲಿ ಶನಿವಾರ ಬೆಳಿಗ್ಗೆ ಭೂಕುಸಿತ ಸಂಭವಿಸಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ.
ಕ್ಸುವಾನ್ಹಾನ್ ಕೌಂಟಿಯ ಕಿಶು ಟೌನ್‌ಶಿಪ್‌ನಲ್ಲಿ ಭೂಕುಸಿತದಿಂದ ಅನೇಕ ವಸತಿ ಕಟ್ಟಡಗಳು ನೆಲಕ್ಕುರುಳಿವೆ ಎಂದು ಕೌಂಟಿಯ ಪ್ರಚಾರ ವಿಭಾಗ ತಿಳಿಸಿದೆ.
ಶನಿವಾರ ಸಂಜೆಯ ವೇಳೆಗೆ ಐದು ಜನರನ್ನು ಕಟ್ಟಡಗಳ ಅವಶೇಷಗಳಿಂದ ಹೊರಕ್ಕೆ ತೆಗೆಯಲಾಗಿದೆ. ಇವರೆಲ್ಲರೂ ಮೃತಪಟ್ಟಿರುವುದಾಗಿ ದೃಢಪಟ್ಟಿದೆ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಸ್ಥಳೀಯ ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ. ಚೀನಾದ ಕೆಲ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಮುಂದುವರೆದಿದೆ. ಇದರಿಂದ ಅನೇಕ ಭಾಗಗಳಲ್ಲಿ ಜನಜೀವನಕ್ಕೆ ತೊಂದರೆಯಾಗಿದೆ.
ಯುಎನ್‍ಐ ಎಸ್ ಎಲ್‍ ಎಸ್ 2039
More News
ಆತ್ಮಾಹುತಿ ಬಾಂಬ್ ದಾಳಿ, ಸಾವಿನ ಸಂಖ್ಯೆ 30 ಕ್ಕೆ ಏರಿಕೆ

ಆತ್ಮಾಹುತಿ ಬಾಂಬ್ ದಾಳಿ, ಸಾವಿನ ಸಂಖ್ಯೆ 30 ಕ್ಕೆ ಏರಿಕೆ

25 Oct 2020 | 5:30 PM

ಕಾಬೂಲ್, ಅಕ್ಟೋಬರ್ 25 (ಯುಎನ್ಐ) ಅಫಘಾನ್ ರಾಜಧಾನಿಯ ಶಿಕ್ಷಣ ಕೇಂದ್ರವೊಂದರ ಬಳಿ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 30 ಕ್ಕೆ ಏರಿಕೆಯಾಗಿದ್ದು, ಈ ದುರಂತದಲ್ಲಿ ಇತರೆ 70 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ಸ್ಪುಟ್ನಿಕ್ ಗೆ ತಿಳಿಸಿವೆ.

 Sharesee more..
ಸ್ಯಾಮ್ ಸಂಗ್ ಅಧ್ಯಕ್ಷ ಲೀ ಕುನ್-ಹೀ ನಿಧನ

ಸ್ಯಾಮ್ ಸಂಗ್ ಅಧ್ಯಕ್ಷ ಲೀ ಕುನ್-ಹೀ ನಿಧನ

25 Oct 2020 | 3:00 PM

ಮಾಸ್ಕೋ, ಅ.25 (ಸ್ಪುಟ್ನಿಕ್) ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಅಧ್ಯಕ್ಷ ಲೀ ಕುನ್-ಹೀ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು ಎಂದು ಸೌತ್ ಕೊರಿಯಾ ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

 Sharesee more..