Monday, Feb 24 2020 | Time 15:59 Hrs(IST)
 • ಮೂರು ಶತಕೋಟಿ ಡಾಲರ್ ರಕ್ಷಣಾ ಒಪ್ಪಂದಕ್ಕೆ ನಾಳೆ ಸಹಿ: ಟ್ರಂಪ್
 • ಬನ್ನೇರುಘಟ್ಟ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕುಗ್ಗಿಸುವ ಪ್ರಸ್ತಾವನೆಗೆ ಬೆಂಗಳೂರು ಪ್ರತಿಷ್ಠಾನ ವಿರೋಧ
 • ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿ ಅವರಿಗೆ ಟ್ರಂಪ್, ಮೆಲಾನಿಯಾ ಗೌರವ ನಮನ ಸಲ್ಲಿಕೆ
 • ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೆ ನೂರು ಕೋಟಿ : ದೇಶಕ್ಕೆ ಲಾಭವಿಲ್ಲ -ರಾಜ್ಭರ್
 • ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಲು ಯುವಜನತೆಗೆ ಉಪರಾಷ್ಟ್ರಪತಿ ಕರೆ
 • ಡಿ ವೈ ಪಾಟೀಲ್ ಟಿ20 ಆಡಲು ಸಜ್ಜಾದ ಹಾರ್ದಿಕ್ ಪಾಂಡ್ಯ
 • ಕಾರನ್ನು ವಿದ್ಯುತ್ ಕಂಬಕ್ಕೆ ಗುದ್ದಿ, ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾದ ಶಾಸಕರ ಮೊಮ್ಮಗ
 • ರಸ್ತೆ ಅಪಘಾತ: ಇಬ್ಬರು ಸಾವು
 • ವಿಚಾರಣೆಗೆ ಹಾಜರಾಗುವಂತೆ ವಾರಿಸ್ ಪಠಾಣ್ ಗೆ ನೋಟಿಸ್
 • ಟ್ರಂಪ್ ಆಗಮನದಿಂದ ಯಾವುದೇ ಪ್ರಯೋಜನವಿಲ್ಲ: ಸಿದ್ದರಾಮಯ್ಯ
 • ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಸರಿಯಲ್ಲ: ಕೆ ಬಿ ಕೋಳಿವಾಡ
 • ಮಾರ್ಚ್ 5 ರಿಂದ 7ರವರೆಗೆ ಹೊನ್ನಾಳಿಯಲ್ಲಿ ರಾಜ್ಯಮಟ್ಟದ ಕೃಷಿಮೇಳ
 • ಬೌದ್ಧಿಕವಾಗಿಯೂ ಸರ್ಕಾರ ದಿವಾಳಿ: ಸಿ ಟಿ ರವಿ ವಿರುದ್ಧ ಸಿದ್ದರಾಮಯ್ಯ ಟೀಕಾಪ್ರಹಾರ
 • ಅರಣ್ಯ ಸಚಿವ ಆನಂದ್ ಸಿಂಗ್‌ ರಿಂದ ರಾಜ್ಯಕ್ಕೆ 20 55 ಕೋಟಿ ನಷ್ಟ: ತಕ್ಷಣ ಸಂಪುಟದಿಂದ ವಜಾಗೊಳಿಸಿ- ಉಗ್ರಪ್ಪ ಒತ್ತಾಯ
 • ಮಲೇಷಿಯಾ ಪ್ರಧಾನಿ ಮಹತಿರ್ ಮೊಹಮದ್ ರಾಜೀನಾಮೆ
Health -Lifestyle Share

ಚೈನಾ : 121 ಹೊಸ ಸಾವಿನ ಪ್ರಕರಣ ದಾಖಲು, 5,090 ಸೋಂಕಿನ ಪ್ರಕರಣ ದೃಢ

ಬೀಜಿಂಗ್, ಫೆ 14 (ಕ್ಸಿನುವಾ) ಚೀನಾದ 31 ಪ್ರಾಂತೀಯ ಮಟ್ಟದ ಪ್ರದೇಶಗಳು ಮತ್ತು ಕ್ಸಿನ್‌ಜಿಯಾಂಗ್ ಉತ್ಪಾದನೆ ಮತ್ತು ನಿರ್ಮಾಣ ದಳದಿಂದ ಗುರುವಾರ 5,090 ಹೊಸ ದೃಢೀಕೃತ ಕೊರೊನಾವೈರಸ್ ಸೋಂಕು ಮತ್ತು 121 ಸಾವುಗಳ ವರದಿಗಳು ಬಂದಿವೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸಾವುಗಳಲ್ಲಿ, 116 ಹುಬೈ ಪ್ರಾಂತ್ಯದಲ್ಲಿ, ಎರಡು ಹೀಲಾಂಗ್‌ಜಿಯಾಂಗ್‌ನಲ್ಲಿ ಮತ್ತು ಒಂದು ಅನುಕ್ರಮವಾಗಿ ಅನ್ಹುಯಿ, ಹೆನಾನ್ ಮತ್ತು ಚಾಂಗ್‌ಕಿಂಗ್‌ನಲ್ಲಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಇತ್ತೀಚಿನ ವರದಿಗಳಪ್ರಕಾರ ಪ್ರಾಂತ್ಯದಲ್ಲಿ ಒಟ್ಟು ದೃಡಪಡಿಸಿದ ಪ್ರಕರಣಗಳ ಸಮಖ್ಯೆ 51,986 ಕ್ಕೆ ಏರಿಕೆಯಾಗಿದೆ.
ಪ್ರಾಂತೀಯ ರಾಜಧಾನಿಯಾದ ವುಹಾನ್ ಒಟ್ಟು 35,991 ಪ್ರಕರಣಗಳನ್ನು ದಾಖಲಿಸಿದ್ದು, ಇದರಲ್ಲಿ 14,031 ಪ್ರಾಯೋಗಿಕವಾಗಿ ರೋಗನಿರ್ಣಯ ಮಾಡಲಾಗಿದೆ.

3,689 ಶಂಕಿತ ಪ್ರಕರಣಗಳನ್ನು ಗುರುವಾರ ತಳ್ಳಿಹಾಕಿದ ನಂತರ ಹುಬೈನಲ್ಲಿ 6,169 ಶಂಕಿತ ಪ್ರಕರಣಗಳಿವೆ ಎಂದೂ ಆಯೋಗ ಹೇಳಿದೆ.

ಆಸ್ಪತ್ರೆಗೆ ದಾಖಲಾದ 36,719 ರೋಗಿಗಳಲ್ಲಿ, 7,593 ಮಂದಿ ಇನ್ನೂ ತೀವ್ರ ಸ್ಥಿತಿಯಲ್ಲಿದ್ದರೆ, ಇವರ ಪೈಕಿ ಇನ್ನೂ 1,685 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದೆ.
ಯುಎನ್‍ಐ ಎಸ್‍ಎ ವಿಎನ್ 1105