Friday, Apr 10 2020 | Time 08:52 Hrs(IST)
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
Health -Lifestyle Share

ಛತ್ತೀಸ್‍ಗಡ: ಎರಡು ಹೊಸ ಕೊರೋನಾ ಸೋಂಕು ಪ್ರಕರಣ ದಾಖಲು

ರಾಯಪುರ, ಮಾ 25 (ಯುಎನ್‍ಐ) ಛತ್ತೀಸ್ ಗಡದಲ್ಲಿ ಬುಧವಾರ ಕೊರೋನಾ ಸೋಂಕಿನ ಇನ್ನೆರಡು ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3ಕ್ಕೇರಿದೆ.
ಇತ್ತೀಚೆಗೆ ಲಂಡನ್ ನಿಂದ ಮರಳಿದ್ದ ರಾಯಪುರದ ಯುವಕನಲ್ಲಿ ಸೋಂಕು ದೃಢಪಟ್ಟಿದ್ದು, ಆತ ಇಲ್ಲಿನ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಇದೇ ವೇಳೆ ರಾಜ್ ನಂದಗಾಂವ್ ನ ಯುವಕ ಕೂಡ ಸೋಂಕಿತನಾಗಿದ್ದು, ಈತ ಎರಡು ದಿನಗಳ ಹಿಂದೆ ಬ್ಯಾಂಕಾಕ್ ನಿಂದ ಹಿಂತಿರುಗಿದ್ದರು.
ಈ ಇಬ್ಬರು ಸೋಂಕಿತರಿಗೂ ಸೂಕ್ತ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.
ಛತ್ತೀಸ್ ಗಡದ ಮೊದಲ ಸೋಂಕಿತ ವ್ಯಕ್ತಿ ಈಗಾಗಲೇ ರಾಯಪುರದ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುಎನ್‍ಐ ಎಸ್‍ಎ ವಿಎನ್ 1927
More News
ಕದನವಿರಾಮಕ್ಕೆ ಸೌದಿ ಒಕ್ಕೂಟ ನಿರ್ಧಾರ: ವಿಶ್ವಸಂಸ್ಥೆ ಸ್ವಾಗತ

ಕದನವಿರಾಮಕ್ಕೆ ಸೌದಿ ಒಕ್ಕೂಟ ನಿರ್ಧಾರ: ವಿಶ್ವಸಂಸ್ಥೆ ಸ್ವಾಗತ

09 Apr 2020 | 3:57 PM

ಮಾಸ್ಕೋ, ಏ 09 (ಸ್ಪುಟ್ನಿಕ್) ಯೆಮನ್‌ನಲ್ಲಿ ಎರಡು ವಾರಗಳ ಕದನ ವಿರಾಮಕ್ಕಾಗಿ ಸೌದಿ ನೇತೃತ್ವದ ಒಕ್ಕೂಟ ಹೊರಡಿಸಿದ ಪ್ರಕಟಣೆಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸ್ವಾಗತಿಸಿದ್ದು, ಇದು ಯುದ್ಧ ಪೀಡಿತ ದೇಶದಲ್ಲಿ ಶಾಂತಿ ತಲುಪಲು ಸಹಾಯ ಮಾಡುತ್ತದೆ ಮತ್ತು ಕೋವಿಡ್-19 ವಿರುದ್ಧ ಹೋರಾಡುವ ಪ್ರಯತ್ನಗಳಿಗೆ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.

 Sharesee more..

ಬಾರಾಮುಲ್ಲಾ: ಜೈಷೆ ಮೊಹಮ್ಮದ್ ಉಗ್ರನ ಸೆರೆ

09 Apr 2020 | 1:56 PM

 Sharesee more..