Monday, Sep 16 2019 | Time 19:53 Hrs(IST)
 • ಕೆಬಿಸಿ; ಕೋಟಿ ರೂಪಾಯಿ ಗೆದ್ದ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಕಾರ್ಯಕರ್ತೆ
 • ಮತದಾರ ಪಟ್ಟಿ ಪರಿಷ್ಕರಣಾ ಆಂದೋಲನ; ಸೇರ್ಪಡೆ, ತಿದ್ದುಪಡಿಗೆ ಅವಕಾಶ- ಅನಿಲ್ ಕುಮಾರ್
 • ಭಾಷೆ, ಸಂಸ್ಕೃತಿ ಹೆಸರಲ್ಲಿ ಸಂಘರ್ಷ ಸೃಷ್ಟಿಸುವುದು ಬಿಜೆಪಿ ಕೆಲಸ : ದಿನೇಶ್ ಗುಂಡೂರಾವ್
 • ಕಾಂಗ್ರೆಸ್ ಪಕ್ಷ ಮುಳಗುತ್ತಿರುವ ಹಡಗು: ಎಂ ಪಿ ರೇಣುಕಾಚಾರ್ಯ ಲೇವಡಿ
 • ಆಪ್‍ನಿಂದ ವಾರ್ಡ್ ನಿರ್ವಹಣಾ ಕೈಪಿಡಿ ಬಿಡುಗಡೆ
 • ಬಿಬಿಎಂಪಿ ಆಯುಕ್ತರ ಅಧಿಕಾರ ಮೊಟಕು; ವಿಶೇಷ, ಹೆಚ್ಚುವರಿ ಆಯುಕ್ತರಿಗೆ ಹೆಚ್ಚಿನ ಹೊಣೆ- ನಗರಾಭಿವೃದ್ಧಿ ಇಲಾಖೆ ಆದೇಶ
 • ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು
 • ಸರ್ಕಾರದ ಕಿರುಕುಳದಿಂದ ಕೊಡೆಲಾ ಆತ್ಮಹತ್ಯೆ: ಚಂದ್ರಬಾಬು ನಾಯ್ಡು ಆರೋಪ
 • ಕಳುವಾದ ಮೊಬೈಲ್ ಫೊನ್ ಪತ್ತೆಗೆ ಹೊಸ ತಂತ್ರ !
 • ಮೋಟಾರು ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ 19ರಂದು ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ
 • ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬೆಂಗಳೂರು ನಗರ ಉಳಿಸಿಕೊಂಡ ಮುಖ್ಯಮಂತ್ರಿ
 • ವಿಧಾನಸಭೆಗೆ ಮಧ್ಯಂತರ ಚುನಾವಣೆ ಶತಸಿದ್ಧ: ಸ್ವತಂತ್ರವಾಗಿ ಜೆಡಿಎಸ್ ಸ್ಪರ್ಧೆ
 • ಐಸಿಸಿ ಟೆಸ್ಟ್ ಶ್ರೇಯಾಂಕ: ಸ್ಮಿತ್‌ಗೆ ಅಗ್ರಸ್ಥಾನ, ದ್ವಿತೀಯ ಸ್ಥಾನದಲ್ಲಿ ಕೊಹ್ಲಿ
 • ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಫಾರೂಕ್ ಅಬ್ದುಲ್ಲಾ ಬಂಧನ: ಕೇಂದ್ರ ಸರ್ಕಾರ
 • ರೈಲು ನಿಲ್ದಾಣಗಳ ಮೇಲಿನ ಯಾವುದೇ ದಾಳಿ ತಡೆಯಲು ಹೆಚ್ಚಿನ ಭದ್ರತಾ ವ್ಯವಸ್ಥೆ
business economy Share

ಜನವರಿ 2020 ರಿಂದ ಹೊಸ ಜಿಎಸ್‌ಟಿ ರಿಟರ್ನ್ ಸಲ್ಲಿಕೆ ನಮೂನೆ

ನವದೆಹಲಿ, ಜೂನ್ 11 (ಯುಎನ್ಐ) ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿ ಅಡಿ ತೆರಿಗೆ ಪಾವತಿದಾರರಿಗಾಗಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು ಮತ್ತು 2020 ರ ಜನವರಿಯಿಂದ ಜಿಎಸ್‌ಟಿ ಅಡಿಯ ಮಾರಾಟ ವಿವರಗಳನ್ನು ಸಲ್ಲಿಸಲು ಹೊಸ ಜಿಎಸ್‌ಟಿಆರ್ 1 ನಮೂನೆ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಹೊಸ ವ್ಯವಸ್ಥೆಗೆ ಬದಲಾವಣೆ ತರಲು ಹಂತ ಹಂತದ ಪರಿಷ್ಕರಣಾ ವ್ಯವಸ್ಥೆ ಜಾರಿಗೆ ತರಲಾಗುವುದು. ಅಂತೆಯೇ ಮಾಸಿಕ ಲೆಕ್ಕ ಪತ್ರ ವಿವರ ಸಲ್ಲಿಕೆ ಜಿಎಸ್‌ಟಿಆರ್ - 3 ಬಿ ಅನ್ನು ಸಹ ಹಂತ ಹಂತವಾಗಿ ಸಲ್ಲಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು.
ಬಳಕೆದಾರರಿಗೆ ಈ ಬಗ್ಗೆ ತಿಳಿಯುವಂತಾಗಲು ಮತ್ತು ಅವರ ಪ್ರತಿಕ್ರಿಯೆ ತಿಳಿಯಲು 2019ರ ಮೇ ತಿಂಗಳಲ್ಲಿ ಹೊಸ ಆಫ್‌ಲೈನ್ ಟೂಲ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಆನ್‌ಲೈನ್ ಮಾದರಿಯಲ್ಲಿ ಹೇಗೆ ಕಾಣುವುದೇ, ಹೇಗೆ ಕಾರ್ಯನಿರ್ವಹಿಸುವುದೋ ಅದನ್ನು ಪ್ರತಿಬಿಂಬಿಸುತ್ತದೆ.
ಹೊಸ ಅರ್ಜಿ ಸಲ್ಲಿಕೆ ನಮೂನೆಯಲ್ಲಿ ಮೂರು ಪ್ರಮುಖ ಅಂಶಗಳಿವೆ - ಒಂದು ಪ್ರಮುಖ ರಿಟರ್ನ್ (ಜಿಎಸ್‌ಟಿಆರ್ - 1) ಮತ್ತು ಎರಡು ಇತರ ಉಪ ಅರ್ಜಿ (ಜಿಎಸ್‌ಟಿ ಅನೆಕ್ಸ್ 2).
2019 ರ ಜುಲೈ ತಿಂಗಳಿನಿಂದ ಅನೆಕ್ಸ್ 1 ಆಫ್‌ಲೈನ್‌ ಟೂಲ್ ಮುಖಾಂತರ ಜಿಎಸ್‌ಟಿ ನೋಂದಾಯಿತರು ಬಿಲ್ ಗಳ ಮಾಹಿತಿಯನ್ನು ಸಲ್ಲಿಸಬಹುದಾಗಿದೆ. ಬಳಕೆದಾರರಿಗೆ ಈ ವ್ಯವಸ್ಥೆ ಪರಿಚಿತವಾಗಲು ಆಫ್‌ಲೈನ್ ಟೂಲ್‌ ಪರೀಕ್ಷಾರ್ಥವಾಗಿ ನೀಡಲಾಗಿದೆ.
ಅಲ್ಲದೇ ಬಳಕೆದಾರರು ಖರೀದಿ ವಿವರಗಳ ಮಾಹಿತಿಯನ್ನು ಪ್ರಯೋಗಾರ್ಥ ಸಂದರ್ಭದಲ್ಲಿ ಜಿಎಸ್‌ಟಿ ಅನೆಕ್ಸ್ 2 ರ ಆಫ್‌ಲೈನ್ ಸಾಧನದ ಮೂಲಕ ಪಡೆಯಬಹುದಾಗಿದೆ. ಸಾಮಾನ್ಯ ವೇದಿಕೆಯಡಿ ಖರೀದಿ ವಿವರಗಳನ್ನು ಸಹ ನೋಡಬಹುದಾಗಿದೆ. 2019 ರ ಆಗಸ್ಟ್‌ ನಿಂದ ತಮ್ಮ ಖರೀದಿ ವಿವರಗಳಿಗೂ ಮಾರಾಟಗಾರರು ನೀಡಿರುವ ವಿವರಗಳನ್ನು ತಾಳೆ ಹಾಕಿ ಯಾವುದೇ ತಪ್ಪುಗಳಿದ್ದಲ್ಲಿ ಗುರುತಿಸಬಹುದಾಗಿದೆ.
ಜುಲೈ 2019 ರಿಂದ ಸೆಪ್ಟೆಂಬರ್ 2019 ರ ಅವಧಿಯಲ್ಲಿ ಮೂರು ತಿಂಗಳಿಗೆ ಹೊಸ ರಿಟರ್ನ್ ಸಲ್ಲಿಕೆ ವ್ಯವಸ್ಥೆ (ಅನೆಕ್ಸ್ 1 ಮತ್ತು 2) ಪ್ರಯೋಗಾರ್ಥವಾಗಿ ಜಿಎಸ್‌ಟಿ ನೋಂದಾಯಿತರಿಗೆ ಅದರ ಬಗ್ಗೆ ಅರಿವಾಗಲು ನೀಡಲಾಗಿದೆ. ಈ ಅವಧಿಯಲ್ಲಿ ತೆರಿಗೆ ನೋಂದಾಯಿತರು ಎಂದಿನಂತೆ ಜಿಎಸ್‌ಟಿಆರ್ 1 ಮತ್ತು ಜಿಎಸ್‌ಟಿಆರ್ 3 ಬಿ ಗಳನ್ನು ಸಲ್ಲಿಸಬೇಕಿದೆ.
ಈ ರಿಟರ್ನ್‌ಗಳನ್ನು ಸಲ್ಲಿಸದೇ ಇದ್ದಲ್ಲಿ ಜಿಎಸ್‌ಟಿ ನಿಯಮಾವಳಿ ಅಡಿಯಲ್ಲಿ ದಂಡ ವಿಧಿಸಲಾಗುವುದು.
2019 ರ ಅಕ್ಟೋಬರ್ ನಿಂದ ಜಿಎಸ್‌ಟಿ ಅನೆಕ್ಸ್ 1 ಅನ್ನು ಕಡ್ಡಾಯ ಮಾಡಲಾಗುವುದು. ಜಿಎಸ್‌ಟಿಆರ್ 1 ಬದಲಿಗೆ ಜಿಎಸ್‌ಟಿ ಅನೆಕ್ಸ್ 1 ಜಾರಿಗೆ ಬರಲಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಐದು ಕೋಟಿಗಿಂತ ಹೆಚ್ಚು ವಹಿವಾಟು ಹೊಂದಿರುವವರು ಮಾಸಿಕ ಜಿಎಸ್‌ಟಿ - ಅನೆಕ್ಸ್ 1 ಅನ್ನು ಅಕ್ಟೋಬರ್ ಕಡ್ಡಾಯವಾಗಿ ಸಲ್ಲಿಸಬೇಕಿದೆ.
ತ್ರೈಮಾಸಿಕವಾಗಿ ಜಿಎಸ್‌ಟಿಆರ್ 1 ರಿಟರ್ನ್ ಸಲ್ಲಿಸುತ್ತಿರುವವರು ಜನವರಿ 2020 ರಿಂದ ಅಕ್ಟೋಬರ್ - ಡಿಸೆಂಬರ್ 2019ರ ತ್ರೈಮಾಸಿಕದ ಹೊಸ ನಮೂನೆಯ ರಿಟರ್ನ್ ಸಲ್ಲಿಸಬೇಕಿದೆ.
ಜಿಎಸ್‌ಟಿ ಅನೆಕ್ಸ್ 1 ಅನ್ನು ನಿಯಮಿತವಾಗಿ ಬೃಹತ್ ಮತ್ತು ಸಣ್ಣ ತೆರಿಗೆ ಪಾವತಿದಾರರು ಅಕ್ಟೋಬರ್ 2019 ರಿಂದ ಸಲ್ಲಿಸಬೇಕಿದೆ. ಅದೇ ರೀತಿ ಜಿಎಸ್‌ಟಿ ಅನೆಕ್ಸ್ 2 ರಲ್ಲಿನ ಮಾಹಿತಿಯನ್ನು ಸಹ ನೋಡಬಹುದಾಗಿದೆ. ಆದರೆ ಅದರಲ್ಲಿ ಯಾವುದೇ ಪರಿಷ್ಕರಣೆಗೆ ಅವಕಾಶವಿರುವುದಿಲ್ಲ.
ಅಕ್ಟೋಬರ್ ಮತ್ತು ನವೆಂಬರ್ 2019 ರ ಅವಧಿಗೆ ಬೃಹತ್ ತೆರಿಗೆ ಪಾವತಿದಾರರು ಎಂದಿನಂತೆ ಜಿಎಸ್‌ಟಿಆರ್ - 3 ಬಿ ಮತ್ತು 1 ಅನ್ನು ಮಾಸಿಕವಾಗಿ ಸಲ್ಲಿಸಬೇಕಿದ್ದು, ಡಿಸೆಂಬರ್ 2019ರ ತಮ್ಮ ಮೊದಲ ಜಿಎಸ್‌ಟಿ ರಿಟ್ - 1 ಅನ್ನು 2020 ರ ಜನವರಿ 20 ರೊಳಗೆ ಸಲ್ಲಿಸಬೇಕು.
ಕಿರು ಪ್ರಮಾಣದ ತೆರಿಗೆ ಪಾವತಿದಾರರು ಜಿಎಸ್‌ಟಿಆರ್ - 3 ಬಿ ಅರ್ಜಿ ಸಲ್ಲಿಕೆ ಬದಲಿಗೆ 2019 ರ ಅಕ್ಟೋಬರ್ ನಿಂದ ಜಿಎಸ್‌ಟಿ ಪಿಎಂಟಿ - 08 ಅನ್ನು ಸಲ್ಲಿಸಬೇಕಿದೆ. 2019 ರ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ತ್ರೈಮಾಸಿಕದ ಜಿಎಸ್‌ಟಿ - ರಿಟ್ - 1 ಅನ್ನು 2020ರ ಜನವರಿ 20 ರೊಳಗೆ ಸಲ್ಲಿಸಬೇಕು.
ಅಕ್ಟೋಬರ್ ನಿಂದ ಡಿಸೆಂಬರ್ 2019 ರ ಅವಧಿಯ ಹೆಚ್ಚುವರಿ ತೆರಿಗೆ ಹಿಂಪಡೆಯುವಿಕೆಗೆ ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಸೂಚನೆಗಳನ್ನು ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಯುಎನ್‌ಐ ಜಿಎಸ್ಆರ್ ಡಿವಿ 2339
More News
ಮೈಸೂರು ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಕ ಪ್ರಮಾಣ ಏರಿಕೆ

ಮೈಸೂರು ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಕ ಪ್ರಮಾಣ ಏರಿಕೆ

15 Sep 2019 | 4:44 PM

ಮೈಸೂರು, ಸೆಪ್ಟೆಂಬರ್ 15 (ಯುಎನ್‌ಐ) ದೇಶೀಯ ಮತ್ತು ಪ್ರವಾಸಿಗರ ವಾಯುಯಾನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉಡಾನ್ 3 ಯೋಜನೆಯಡಿ ನಿರ್ಮಿಸಲಾದ ಮೈಸೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರ ಪ್ರಮಾಣ ಹೆಚ್ಚಾಗಿದ್ದು, ಇತರ ನಗರಗಳಿಗೆ ಹೆಚ್ಚಿನ ವಿಮಾನಗಳನ್ನು ಸಂಪರ್ಕಿಸಲಾಗಿದೆ.

 Sharesee more..

ವಿದೇಶಿ ವಿನಿಮಯ 1 ಶತಕೋಟಿ ಡಾಲರ್‌ ಏರಿಕೆ

15 Sep 2019 | 12:27 PM

 Sharesee more..