Friday, Sep 18 2020 | Time 16:42 Hrs(IST)
  • ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ಕಿರೀಟ ಗೆಲ್ಲಬೇಕು: ಕೆವಿನ್ ಪೀಟರ್ಸನ್
  • ಸೊಮಾಲಿಯಾ ಅಧ್ಯಕ್ಷರಿಂದ ಹೊಸ ಪ್ರಧಾನಿ ನೇಮಕ
  • ಕಾಂಗ್ರೆಸ್‌ ರೈತರ ದಾರಿ ತಪ್ಪಿಸುತ್ತಿದೆ; ಮೋದಿ
  • ಕೃಷಿ ಮಾರುಕಟ್ಟೆ ಸುಧಾರಣೆಗಳಿಂದ ರೈತರು ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಲು ಸಹಕಾರಿ-ಪ್ರಧಾನಿ ಮೋದಿ
  • ಐಪಿಎಲ್‌ 2020: ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್‌ ಕಿಂಗ್ಸ್ ನಡುವೆ ಆರಂಭಿಕ ಪಂದ್ಯ ನಾಳೆ
  • ಕೃಷಿ ವಿಧೇಯಕಗಳಿಗೆ ಲೋಕಸಭೆ ಅಂಗೀಕಾರ ಐತಿಹಾಸಿಕ :ಪ್ರಧಾನಿ ಮೋದಿ
  • ಐಪಿಎಲ್ 2020: ರಾಯಲ್‌ ಚಾಲೆಂಜರ್ಸ್‌ ನೂತನ ಹಾಡು ಬಿಡುಗಡೆ
  • ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ : ವಿವಿಧ ಯೋಜನೆಗಳಿಗೆ ಅನುಮೋದನೆ ಕೋರಿ ಮನವಿ
  • ಗೋಂದಿ ಯೋಜನೆ ಅಡಿ ಕೆರೆಗಳಿಗೆ ನೀರು: ಸಚಿವ ಸಿ ಟಿ ರವಿ
  • ರೈತರು ಪಂಜಾಬ್ ನ ಆತ್ಮ, ಅದರ ಮೇಲಿನ ದಾಳಿ ಸಹಿಸಲು ಸಾಧ್ಯವಿಲ್ಲ; ನವಜ್ಯೋತ್ ಸಿಂಗ್ ಸಿಧು
  • ಈ ವರ್ಷದ ಐಪಿಎಲ್‌ ಟೂರ್ನಿ ತುಂಬಾ ವಿಶೇಷತೆಯಿಂದ ಕೂಡಿದೆ: ವಿರೇಂದ್ರ ಸೆಹ್ವಾಗ್‌
  • ಮುಂಬೈ ಇಂಡಿಯನ್ಸ್‌ ತಂಡದ ಓಪನರ್ಸ್‌ ಯಾರೆಂದು ಬಹಿರಂಗ ಪಡಿಸಿದ ಜಯವರ್ಧನೆ
  • ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್
  • ನೆರೆ ಪರಿಹಾರ ಕೈಗೊಳ್ಳಲು ಹೆಚ್ಚಿನ ನೆರವು ನೀಡಿ: ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಮನವಿ
  • ರೈಲ್ವೆ ಖಾಸಗೀಕರಣ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ: ಪಿಯೂಷ್ ಗೋಯಲ್
International Share

ಜಪಾನ್‌ನ ಹೊಸ ಪ್ರಧಾನಿಯಾಗಿ ಯೊಶಿಹಿಡೆ ಅಧಿಕೃತ ಆಯ್ಕೆ

ಟೋಕಿಯೊ, ಸೆ 16 (ಯುಎನ್‌ಐ) ಜಪಾನ್‌ನ ಪ್ರಧಾನ ಮಂತ್ರಿಯಾಗಿ ಯೊಶಿಹಿಡೆ ಸುಗಾ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರ ಮುಖ್ಯ ಸಂಪುಟ ಕಾರ್ಯದರ್ಶಿಯಾಗಿದ್ದ ಸುಗಾ ಅವರನ್ನು ಸಂಸತ್ತಿನ ಕೆಳಮನೆ ಚುನಾಯಿಸಿದೆ. ಕೆಳಮನೆಯಲ್ಲಿ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ ಬಹುಮತ ಹೊಂದಿದೆ.
ಜಪಾನ್‌ನ ಆರ್ಥಿಕ ಸ್ಥಿತಿಯು ಮುಖ್ಯವಾಗಿ ಕೋವಿಡ್‌ನ ಸಮಯದಲ್ಲಿ ದೊಡ್ಡ ಸವಾಲು ಎದುರಿಸುತ್ತಿದ್ದು, ಇದಕ್ಕೆ ಆರ್ಥಿಕ ಕಾರ್ಯತಂತ್ರವನ್ನು ಒಳಗೊಂಡಂತೆ ಅಬೆ ಅವರು ಜಾರಿಗೆ ಅನೇಕ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಸುಗಾ ವಾಗ್ದಾನ ಮಾಡಿದ್ದಾರೆ.
ಮಂಗಳವಾರ ಬೆಳಿಗ್ಗೆ ನಿರ್ಗಮಿತ ಜಪಾನ್‍ ಪ್ರಧಾನಿ ಶಿಂಜೊ ಅಬೆ ಅವರ ಸಚಿವ ಸಂಪುಟ ವಿಸರ್ಜನೆಗೊಂಡಿತು. ಇದರೊಂದಿಗೆ ಅಬೆ ಅವರ ಸುಮಾರು ಎಂಟು ವರ್ಷಗಳ ದಾಖಲೆಯ ಆಡಳಿತಾವಧಿ ಕೊನೆಗೊಂಡಿದೆ.
ಈ ವಾರ ನಡೆದ ಪಕ್ಷದ ಚುನಾವಣೆಯಲ್ಲಿ ಸುಗಾ ಗೆಲುವು ಖಚಿತಪಡಿಸುವಲ್ಲಿ ಅವರ ಬೆಂಬಲಕ್ಕೆ ನಿರ್ಣಾಯಕವಾಗಿದ್ದ ಅಬೆ, ತಮ್ಮ ಅಧಿಕಾರಾವಧಿಯ ಕೊನೆಯ ದಿನದಂದು ಪ್ರಧಾನಿ ಕಚೇರಿಗೆ ಪ್ರವೇಶಿಸಿ ಜಪಾನ್ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಸಂಸತ್‍ನ ಸದಸ್ಯರಾಗಿ ಹೊಸ ಸರ್ಕಾರವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಅಬೆ ವಾಗ್ದಾನ ಮಾಡಿದ್ದಾರೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.
ಯುಎನ್‍ಐ ಎಸ್ಎಲ್ಎಸ್ 1128