Sunday, Jul 12 2020 | Time 23:38 Hrs(IST)
 • ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ 4 ವಿಕೆಟ್ ಜಯ
 • ಕೃಷಿ ಸಚಿವ ಬಿ ಸಿ ಪಾಟೀಲ್ ಒಂದು ವಾರ ಕ್ವಾರಂಟೈನ್ : ಸೋಂಕಿತರ ಸಂಪರ್ಕ ಹಿನ್ನಲೆ
 • ರಾಮನಗರ ಲಾಕ್‌ಡೌನ್‌ಗೆ ಎಚ್ ಡಿ ಕುಮಾರಸ್ವಾಮಿ ಸಲಹೆ
 • ಸೋಂಕಿತರಿಗೆ ಸೂಕ್ತ ಚಿಕಿತ್ಸೆ,ರೋಗ ಲಕ್ಷಣ ಪತ್ತೆಗಾಗಿ ತುರ್ತು ಸಹಾಯವಾಣಿ ಆರಂಭಿಸಲು ಸೂಚನೆ : ಡಾ ಸುಧಾಕರ್
 • ಕಾಂಗ್ರೆಸ್ ನಾಯಕತ್ವವನ್ನು ಭೇಟಿ ಮಾಡಲು ದೆಹಲಿಯಲ್ಲಿರುವ ಸಚಿನ್ ಪೈಲಟ್
 • 'ಕುವೆಂಪು ಹನುಮದ್ದರ್ಶನ' ಕೃತಿ ಲೋಕಾರ್ಪಣೆ ಮಾಡಿದ ಡಿಸಿಎಂ ಡಾ ಅಶ್ವಥ್ ನಾರಾಯಣ್
 • ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ
 • ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಕೊಲೆ
 • ಮಗಳಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಮಲತಂದೆ: ಪರಾರಿಯಾಗಿರುವ ಆರೋಪಿಗಾಗಿ ಶೋಧ
 • ಪೊಲೀಸರಿಗೆ ಕರೋನಾ ಸೋಂಕು ಹೆಚ್ಚಳ ತಡವಾಗಿ ಎಚ್ಚತ್ತ ಗೃಹ ಇಲಾಖೆ : ಸಿಬ್ಬಂದಿಗಳ ಕಾರ್ಯವಿಧಾನದಲ್ಲಿ ಬದಲಾವಣೆ
 • ರಾಜ್ಯದಲ್ಲಿ 2627 ಹೊಸ ಕೋವಿಡ್ ಪ್ರಕರಣಗಳು ವರದಿ, 71 ಸಾವು; ಸೋಂಕಿತರ ಸಖ್ಯೆ 38843ಕ್ಕೇರಿಕೆ
 • ರಾಜಕಾಲುವೆಗೆ ಬಿದ್ದ ಬಾಲಕಿಗಾಗಿ ಮುಂದುವರಿದ ಕಾರ್ಯಾಚರಣೆ: ಎರಡು ದಿನವಾದರೂ ಪತ್ತೆಯಿಲ್ಲ
 • ಕೊವಿಡ್‍: ಪರಪ್ಪನ ಅಗ್ರಹಾರ ಜೈಲಿನಲ್ಲಿ 56 ಕೈದಿಗಳಿಗೆ ಸೋಂಕು ದೃಢ
 • ಕೋವಿಡ್ ನಿಭಾಯಿಸಲು ಸರ್ಕಾರಕ್ಕೆ ಬೆಂಬಲ ನೀಡೋಣ, ಆದರೆ ಕೋವಿಡ್ ಕಾಲದ ಲೂಟಿಗಲ್ಲ; ಎಚ್‌ಡಿಕೆ
 • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಐವರು ಕೊರೊನಾದಿಂದ ಸಾವು: 46ಕ್ಕೇರಿದ ಸಾವಿನ ಸಂಖ್ಯೆ
business economy Share

ಜಾಗತಿಕ ಮಾರುಕಟ್ಟೆಗಳು ದುರ್ಬಲ: ಸೆನ್ಸೆಕ್ಸ್ 500ಅಂಕ ಕುಸಿತ

ಮುಂಬೈ, ಜೂನ್ 29 (ಯುಎನ್‌ಐ) ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ನಡುವೆ ಮಾರಾಟ ಒತ್ತಡದಿಂದ ಮುಂಬೈ

ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಬೆಳಗಿನ ವಹಿವಾಟಿನಲ್ಲಿ 506 ಅಂಕ ಕುಸಿದು 34,665.55 ಕ್ಕೆ ಇಳಿದಿದೆ.

ಭಾರತೀಯ ಆರ್ಥಿಕತೆಯು ತೀವ್ರ ಸಂಕಷ್ಟದಲ್ಲಿದೆ ಎಂದು ಸ್ಟಾಂಡರ್ಡ್‍ ಅಂಡ್‍ ಪೂರ್‍ ಸಂಸ್ಥೆಯ ವರದಿಯು ಸಹ ಹೂಡಿಕೆದಾರರ ಮನೋಭಾವವನ್ನು ಕುಗ್ಗಿಸಿದೆ.

ಪ್ರಸಕ್ತ ಆರ್ಥಿಕ ವರ್ಷ ಭಾರತದ ಆರ್ಥಿಕ ಬೆಳವಣಿಗೆ ಶೇ 5 ರಷ್ಟು ಕುಸಿಯುವ ಸಾಧ್ಯತೆ ಇದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 153 ಅಂಕ ಕುಸಿದು 10,230.85 ಕ್ಕೆ ಇಳಿದಿದೆ.

ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 34,958.90 ಮತ್ತು 34,665ರಲ್ಲಿತ್ತು.

ನಿಫ್ಟಿ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 10,325.90 ಮತ್ತು 10,230.85ರಲ್ಲಿತ್ತು.

ವಲಯ ಸೂಚ್ಯಂಕಗಳಾದ ಲೋಹ, ರಿಯಾಲ್ಟಿ, ಬ್ಯಾಂಕಿಂಗ್‍ ಮತ್ತು ಕೈಗಾರಿಕೆಗಳು ಹೆಚ್ಚಿನ ಕುಸಿತಕ್ಕೆ ಕಾರಣವಾಗಿವೆ.
30 ಕಂಪನೆನಿಗಳ ಷೇರುಗಳ ಪೈಕಿ 26 ಕುಸಿದಿದ್ದರೆ, 4 ಏರಿಕೆ ಕಂಡಿವೆ.
ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ ತೀವ್ರ ನಷ್ಟ ಕಂಡಿವೆ.

ಆದರೆ, ಐಟಿಸಿ, ನೆಸ್ಲೆ ಇಂಡಿಯಾ ಲಿಮಿಟೆಡ್, ಹಿಂದ್ ಯೂನಿಲಿವರ್, ಸನ್ ಫಾರ್ಮಾ ಉತ್ತಮ ಏರಿಕೆ ದಾಖಲಿಸಿವೆ. ಎಂಆರ್‌ಎಫ್, ಭಾರತ್ ಫೊರ್ಜ್, ಮತ್ತು ಜಿಎಂಆರ್ ಇನ್ಫ್ರಾ ಸೇರಿದಂತೆ ಒಟ್ಟು 586 ಕಂಪನಿಗಳು ಇಂದು ಮಾರ್ಚ್ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಲಿವೆ.

ಯುಎನ್‍ಐ ಎಸ್ಎಲ್ಎಸ್ 1136
More News
ಬಿಎಸ್ಎನ್ಎಲ್ ನಿಂದ ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆ !

ಬಿಎಸ್ಎನ್ಎಲ್ ನಿಂದ ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆ !

12 Jul 2020 | 5:50 PM

ನವದೆಹಲಿ, ಜುಲೈ 12 (ಯುಎನ್ಐ) ಟೆಲಿಕಾಂ ಕಂಪನಿಗಳು ಹಲವು ವಿಶೇಷ ಯೋಜನೆಗಳು ನೀಡುವ ಮೂಲಕ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸಲು ಪ್ರಯತ್ನಿಸುತ್ತಿವೆ .

 Sharesee more..
ಗಿನ್ನಿಸ್ ಪುಸ್ತಕದಲ್ಲಿ ಸ್ಥಾನ ಪಡೆದ ಭಾರತದ ಹುಲಿ ಸಮೀಕ್ಷೆ; ಜಾವಡೇಕರ್ ಮಾಹಿತಿ

ಗಿನ್ನಿಸ್ ಪುಸ್ತಕದಲ್ಲಿ ಸ್ಥಾನ ಪಡೆದ ಭಾರತದ ಹುಲಿ ಸಮೀಕ್ಷೆ; ಜಾವಡೇಕರ್ ಮಾಹಿತಿ

11 Jul 2020 | 5:47 PM

ನವದೆಹಲಿ, ಜು 11 (ಯುಎನ್ಐ) ಭಾರತದಲ್ಲಿ 2018ರಲ್ಲಿ ನಡೆಸಿದ ಅತಿದೊಡ್ಡ ಕ್ಯಾಮೆರಾ ಟ್ರ್ಯಾಪ್ ಹುಲಿ ಸಮೀಕ್ಷೆ 'ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದಿದೆ.

 Sharesee more..
ಕೋವಿಡ್ ಯೋಧರಿಗೆ ಯಮಹಾದಿಂದ

ಕೋವಿಡ್ ಯೋಧರಿಗೆ ಯಮಹಾದಿಂದ "ವಿಶೇಷ ಹಣಕಾಸು ಯೋಜನೆ" ಘೋಷಣೆ

10 Jul 2020 | 4:10 PM

ಮುಂಬೈ, ಜು 10 (ಯುಎನ್ಐ) ಪ್ರಮುಖ ಆಟೊಮೊಬೈಲ್ ಕಂಪನಿ ಯಮಹಾ ಮೋಟಾರ್ ಇಂಡಿಯಾ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ನೆರವಾಗುವ ಸಲುವಾಗಿ ಎಲ್ಲಾ ಅಧಿಕೃತ ಯಮಹಾ ಮಾರಾಟಗಾರರ ಮೂಲಕ ವಿಶೇಷ ಹಣಕಾಸು ಯೋಜನೆ ಘೋಷಿಸಿದೆ.

 Sharesee more..