Wednesday, Dec 11 2019 | Time 02:23 Hrs(IST)
  • ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿದ್ದಾರೆ : ಆರ್ ಅಶೋಕ್ ಲೇವಡಿ
International Share

ಜೋರ್ಡಾನ್‍ನಲ್ಲಿ ಬೆಂಕಿ ದುರಂತ: ಸುಮಾರು 13 ಪಾಕ್ ಪ್ರಜೆಗಳು ಸಾವು

ಅಮ್ಮಾನ್, ಡಿ 2(ಯುಎನ್‍ಐ)- ಜೋರ್ಡಾನ್ ರಾಜಧಾನಿಯಾದ ಇಲ್ಲಿಂದ 45 ಕಿ.ಮೀ ದೂರದಲ್ಲಿನ ದಕ್ಷಿಣ ಶುನೇ ಪ್ರದೇಶದಲ್ಲಿ ಮನೆಯೊಂದರಲ್ಲಿ ಸೋಮವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಒಟ್ಟು 13 ಪಾಕಿಸ್ತಾನ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ನಾಗರಿಕ ರಕ್ಷಣಾ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪಾಕಿಸ್ತಾನದ ಎರಡು ಕುಟಂಬಗಳ ಕೃಷಿ ತೋಟದ ಮನೆಯಲ್ಲಿ ವಾಸಿಸುತ್ತಿದ್ದವು ಎಂದು ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ತೀವ್ರವಾಗಿ ಸುಟ್ಟ ಗಾಯಗಳಿಂದ 13 ಮಂದಿ ಮೃತಪಟ್ಟಿದ್ದು, ಇತರ ಮೂವರು ಸಹ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

ಘಟನೆ ಕುರಿತು ತನಿಖೆಗಾಗಿ ಇಲಾಖೆ ಸಮಿತಿಯೊಂದನ್ನು ರಚಿಸಿದೆ.
ಜೋರ್ಡಾನ್‍ನಲ್ಲಿ ಸುಮಾರು 8,000 ಪಾಕಿಸ್ತಾನೀಯರು ನೆಲೆಸಿದ್ದ ಕೃಷಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್ 1540
More News
ಜ್ವಾಲಾಮುಖಿ ಸ್ಫೋಟಕ್ಕೆ ಕನಿಷ್ಠ  24  ಸಾವು,  ಹಲವರ ನಾಪತ್ತೆ ?

ಜ್ವಾಲಾಮುಖಿ ಸ್ಫೋಟಕ್ಕೆ ಕನಿಷ್ಠ 24 ಸಾವು, ಹಲವರ ನಾಪತ್ತೆ ?

10 Dec 2019 | 8:01 PM

ವೆಲಿಂಗ್ಟನ್ , ಡಿ10 (ಯುಎನ್ಐ) ನ್ಯೂಜಿಲೆಂಡಿನಲ್ಲಿ ಪ್ರಸಿದ್ಧ ವೈಟ್ ಐಲ್ಯಾಂಡ್ ಜ್ವಾಲಾಮುಖಿ ಸ್ಫೋಟ ದುರಂತದಲ್ಲಿ , ಕನಿಷ್ಠ 24 ಜನರು ಮೃತಪಟ್ಟಿದ್ದಾರೆ ಎಂದೂ ಶಂಕಿಸಲಾಗಿದ್ದು , ಹಲವರು ಕಾಣೆಯಾಗಿದ್ದಾರೆ, ಇನ್ನು ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

 Sharesee more..

ಚಿಲಿ ವಾಯುಪಡೆಯ ವಿಮಾನ ಪತನ

10 Dec 2019 | 10:15 AM

 Sharesee more..