Sunday, Aug 25 2019 | Time 01:31 Hrs(IST)
International Share

ಟರ್ಕಿ ಎಫ್ -35 ಯುದ್ಧ ವಿಮಾನ ಖರೀದಿ ಸಾಧ್ಯವಿಲ್ಲ: ಟ್ರಂಪ್

ವಾಷಿಂಗ್ಟನ್, ಜುಲೈ 17 (ಸ್ಫುಟ್ನಿಕ್) ಟರ್ಕಿ 100ಕ್ಕಿಂತ ಹೆಚ್ಚು ಎಫ್-35 ಯುದ್ಧ ವಿಮಾನಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಂಗಳವಾರ ತಿಳಿಸಿದ್ದಾರೆ.
100 ಕ್ಕೂ ಹೆಚ್ಚು ಎಫ್ -35 ಯುದ್ಧ ವಿಮಾನಗಳನ್ನು ಖರೀದಿಸುವ ಕುರಿತು ಟರ್ಕಿ ಪ್ರಸ್ತಾಪ ಕಳುಹಿಸಿದೆ ಎಂದು ಅವರು ತಿಳಿಸಿದರು.

ಟರ್ಕಿ, ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಸುವುದರಿಂದ, ಇನ್ನು ಮುಂದೆ 100ಕ್ಕಿಂತ ಹೆಚ್ಚು ಎಫ್ -35 ಯುದ್ಧವಿಮಾನಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಯುಎನ್ಐ ಪಿಕೆ ಜಿಎಸ್‍ಆರ್ 8:58