Friday, Sep 18 2020 | Time 16:43 Hrs(IST)
  • ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ಕಿರೀಟ ಗೆಲ್ಲಬೇಕು: ಕೆವಿನ್ ಪೀಟರ್ಸನ್
  • ಸೊಮಾಲಿಯಾ ಅಧ್ಯಕ್ಷರಿಂದ ಹೊಸ ಪ್ರಧಾನಿ ನೇಮಕ
  • ಕಾಂಗ್ರೆಸ್‌ ರೈತರ ದಾರಿ ತಪ್ಪಿಸುತ್ತಿದೆ; ಮೋದಿ
  • ಕೃಷಿ ಮಾರುಕಟ್ಟೆ ಸುಧಾರಣೆಗಳಿಂದ ರೈತರು ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಲು ಸಹಕಾರಿ-ಪ್ರಧಾನಿ ಮೋದಿ
  • ಐಪಿಎಲ್‌ 2020: ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್‌ ಕಿಂಗ್ಸ್ ನಡುವೆ ಆರಂಭಿಕ ಪಂದ್ಯ ನಾಳೆ
  • ಕೃಷಿ ವಿಧೇಯಕಗಳಿಗೆ ಲೋಕಸಭೆ ಅಂಗೀಕಾರ ಐತಿಹಾಸಿಕ :ಪ್ರಧಾನಿ ಮೋದಿ
  • ಐಪಿಎಲ್ 2020: ರಾಯಲ್‌ ಚಾಲೆಂಜರ್ಸ್‌ ನೂತನ ಹಾಡು ಬಿಡುಗಡೆ
  • ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ : ವಿವಿಧ ಯೋಜನೆಗಳಿಗೆ ಅನುಮೋದನೆ ಕೋರಿ ಮನವಿ
  • ಗೋಂದಿ ಯೋಜನೆ ಅಡಿ ಕೆರೆಗಳಿಗೆ ನೀರು: ಸಚಿವ ಸಿ ಟಿ ರವಿ
  • ರೈತರು ಪಂಜಾಬ್ ನ ಆತ್ಮ, ಅದರ ಮೇಲಿನ ದಾಳಿ ಸಹಿಸಲು ಸಾಧ್ಯವಿಲ್ಲ; ನವಜ್ಯೋತ್ ಸಿಂಗ್ ಸಿಧು
  • ಈ ವರ್ಷದ ಐಪಿಎಲ್‌ ಟೂರ್ನಿ ತುಂಬಾ ವಿಶೇಷತೆಯಿಂದ ಕೂಡಿದೆ: ವಿರೇಂದ್ರ ಸೆಹ್ವಾಗ್‌
  • ಮುಂಬೈ ಇಂಡಿಯನ್ಸ್‌ ತಂಡದ ಓಪನರ್ಸ್‌ ಯಾರೆಂದು ಬಹಿರಂಗ ಪಡಿಸಿದ ಜಯವರ್ಧನೆ
  • ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್
  • ನೆರೆ ಪರಿಹಾರ ಕೈಗೊಳ್ಳಲು ಹೆಚ್ಚಿನ ನೆರವು ನೀಡಿ: ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಮನವಿ
  • ರೈಲ್ವೆ ಖಾಸಗೀಕರಣ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ: ಪಿಯೂಷ್ ಗೋಯಲ್
Sports Share

ಟೆನಿಸ್: ಯುವ ಆಟಗಾರನ ಎದುರು ಸೋತ ವಾವ್ರಿಂಕ

ರೋಮ್, ಸೆ.16 (ಯುಎನ್ಐ)- ಸ್ಥಳಿಯ ಯುವ ಆಟಗಾರ ಲೊರೆಂಜೊ ಮುಸೆಟ್ಟಿ ಅವರ ಎದುರು ವಿಶ್ವದ ಸ್ಟಾರ್ ಆಟಗಾರ ಸ್ಟಿಟ್ಜರ್ ಲ್ಯಾಂಡ್ ನ ಸ್ಟಾನಿಸ್ಲಾಸ್ ವಾವ್ರಿಂಕ ಇಟಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೋತು ನಿರಾಸೆ ಅನುಭವಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಾವ್ರಿಂಕ 0-6, 6-7 ರಿಂದ ಲೊರೆಂಜೊ ಮುಸೆಟ್ಟಿ ಅವರ ವಿರುದ್ಧ ಸೋಲು ಅನುಭವಿಸಿದ್ದಾರೆ.

ಭರ್ಜರಿ ಪ್ರದರ್ಶನ ನೀಡಿದ ಆತಿಥೇಯ ಸ್ಟಾರ್ ಆಟಗಾರ, ವಾವ್ರಿಂಕ ಅವರನ್ನು ಮಣಿಸಿದರು. ಲೊರೆಂಜೊ ಮುಸೆಟ್ಟಿ ಎರಡು ನೇರ ಸೆಟ್ ಗಳಲ್ಲಿ ಜಯ ಸಾಧಿಸಿ ಮುನ್ನಡೆದರು.

12 ನೇ ಶ್ರೇಯಾಂಕದ ಡೆನಿಸ್ ಶಪೋವೊಲೊವ್ 6-2, 6-3ರಿಂದ ಅರ್ಜೆಂಟೀನಾದ ಗೈಡೋ ಪೆಲ್ಲಾ ಅವರನ್ನು ಸೋಲಿಸಿದರು. ಇಟಲಿಯ ಮಾರ್ಕೊ ಸೆಚಿನಾಟೊ 3-6, 7-6 (7), 6-2ರಲ್ಲಿ ಬ್ರಿಟನ್‌ನ ಕೈಲ್ ಎಡ್ಮಂಡ್ ಅವರನ್ನು ಮಣಿಸಿದರು.

ಒಂಬತ್ತನೇ ಶ್ರೇಯಾಂಕಿತ ಸ್ಪೇನ್‌ನ ಗಾರ್ಬೈನ್ ಮುಗುರುಜಾ 6-3, 6-3ರಿಂದ ಅಮೆರಿಕದ ಸ್ಲೋಯೆನ್ ಸ್ಟೀಫನ್ಸ್‌ರನ್ನು, ಮಾಜಿ ಫ್ರೆಂಚ್ ಓಪನ್ ವಿಜೇತ ಸ್ವೆಟ್ಲಾನಾ ಕುಜ್ನೆಟ್ಸೊವಾ 3-6, 7-6 (3), 6-3 ಯುಎಸ್ನ ಬರ್ನಾರ್ಡಾ ಪೆರಾರನ್ನು ಸದೆಬಡೆದರು.

ಯುಎನ್ಐ ವಿಎನ್ಎಲ್ 1235