Saturday, May 30 2020 | Time 05:09 Hrs(IST)
  • ಅತೃಪ್ತರ ಮನವೊಲಿಕೆಗೆ ಮುಂದಾದ ಮುಖ್ಯಮಂತ್ರಿ : ಸಭೆ ನಡೆಸಿದ ಶಾಸಕರಿಗೆ ಸಿಎಂ ಬುಲಾವ್ !
  • ಅತೃಪ್ತರ ಮನವೊಲಿಕೆಗೆ ಮುಂದಾದ ಮುಖ್ಯಮಂತ್ರಿ : ಸಭೆ ನಡೆಸಿದ ಶಾಸಕರಿಗೆ ಸಿಎಂ ಬುಲಾವ್ !
business economy Share

ಟಿಸಿಐ ಎಕ್ಸ್‌ಪ್ರೆಸ್ ಲಿಮಿಟೆಡ್ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟ

ಬೆಂಗಳೂರು, ನ.8 (ಯುಎನ್ಐ) ಹೆಸರಾಂತ ಸರಕು ಸಾಗಣಿಕೆ ಸಂಸ್ಥೆಯಾದ ಟಿಸಿಐ ಎಕ್ಸ್ ಪ್ರೆಸ್ ಲಿಮಿಟೆಡ್ 2019 ರ ಎರಡನೇ ತ್ರೈಮಾಸಿಕದಲ್ಲಿ ಶೇಕಡ 9.3ರಷ್ಟು ಆದಾಯ ಮತ್ತು ಶೇಕಡ 60.6 ಲಾಭ ಬೆಳವಣಿಗೆಯನ್ನು ದಾಖಲಿಸಿದೆ.
ಈ ತ್ರೈಮಾಸಿಕದಲ್ಲಿ 271 ಕೋಟಿ ರೂಪಾಯಿ ಕಾರ್ಯಾಚರಣೆ ಆದಾಯವನ್ನು ಗಳಿಸಿದರೆ ಇದೇ ಅವಧಿಯ ಹಿಂದಿನ ವರ್ಷದಲ್ಲಿ 248 ರೂಪಾಯಿ ಆದಾಯ ಗಳಿಸಿತ್ತು. ಹಣಕಾಸು ವರ್ಷ 2020 ರ ಎರಡನೇ ತ್ರೈಮಾಸಿಕದಲ್ಲಿ 26 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಇದೇ ಸಮಯದಲ್ಲಿ ಕಳೆದ ವರ್ಷ ಸಂಸ್ಥೆಯು 16 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಈ ಮೂಲಕ ಸಂಸ್ಥೆಯು 60.6 ರಷ್ಟು ಬೆಳವಣಿಗೆ ಕಂಡಿದೆ.
ಲಾಭದ ಮಾರ್ಜಿನ್ ಹಣಕಾಸು ವರ್ಷ 2020 ರಲ್ಲಿ ಶೇಕಡ 9.6 ದಾಖಲಿಸಿದರೆ ಇದೇ ಸಂದರ್ಭದಲ್ಲಿ ಕಳೆದ ವರ್ಷ ಶೇಕಡ 6.6 ದಾಖಲಿಸಿತ್ತು. ಆಡಳಿತ ಮಂಡಳಿಯು 1.5 ರೂಪಾಯಿ ಪ್ರತಿ ಷೇರಿಗೆ ಮಧ್ಯಂತರ ಡಿವಿಡೆಂಟ್ ಘೋಷಿಸಿದೆ.
“ಟಿಸಿಐ ಎಕ್ಸ್ ಪ್ರೆಸ್ ಕಾರ್ಯಾಚರಣೆ ಆದಾಯ 271 ಕೋಟಿ ರೂಪಾಯಿ ಗಳಿಸಿದೆ ಎಂದು ಘೋಷಣೆ ಮಾಡಲು ಸಂತಸ ಆಗುತ್ತಿದೆ. ಶೇಕಡ 9.3 ರಷ್ಟು ಹೆಚ್ಚಳ ಕಂಡಿದೆ. ಸಂಸ್ಥೆಯು ಈ ಸಾಲಿನಲ್ಲಿ 26 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಶೇಕಡ 60.6 ರಷ್ಟು ಹೆಚ್ಚಳ ಕಂಡಿದೆ. ಸಣ್ಣ ಮತ್ತು ಮದ್ಯಮ ಉದ್ಯಮದ ಗ್ರಾಹಕರ ಹೆಚ್ಚಳದ ಪರಿಣಾಮ ಆದಾಯ ಹೆಚ್ಚಾಗಿದೆ ಹಾಗೆಯೇ ಕಾರ್ಯಾಚರಣೆಯ ಕ್ಷಮತೆಯಿಂದ ಲಾಭದ ಮಾರ್ಜಿನ್ ನಲ್ಲಿ ಹೆಚ್ಚಳ ಕಂಡಿದೆ” ಎಂದು ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದರ್ ಅಗರ್ವಾಲ್ ತಿಳಿಸಿದ್ದಾರೆ.
ಯುಎನ್ಐ ಎಎಚ್ 1021
More News
ಮೋದಿ ಸರ್ಕಾರದ ಒಂದು ವರ್ಷ ಪೂರ್ಣ; ಗುರುವಾರ ದೇಶಾದ್ಯಂತ ಬಿಜೆಪಿ ರ್ಯಾಲಿ

ಮೋದಿ ಸರ್ಕಾರದ ಒಂದು ವರ್ಷ ಪೂರ್ಣ; ಗುರುವಾರ ದೇಶಾದ್ಯಂತ ಬಿಜೆಪಿ ರ್ಯಾಲಿ

28 May 2020 | 10:58 PM

ನವದೆಹಲಿ, ಮೇ 28 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಒಂದು ವರ್ಷದ ಪೂರೈಕೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಗುರುವಾರ ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲಿ ವಾಸ್ತವ ರ್ಯಾಲಿ ನಡೆಸಲು ನಿಶ್ಚಯಿಸಿದೆ.

 Sharesee more..