Tuesday, Jun 25 2019 | Time 13:53 Hrs(IST)
 • ರೈತರಿಗೆ ಬೆಳೆ ವಿಮೆ ಆಯ್ಕೆಯಾಗಬೇಕೋ, ಕಡ್ಡಾಯವಾಗಬೇಕೋ? ಸಲಹೆಗಾಗಿ ರಾಜ್ಯಗಳಿಗೆ ಕೇಂದ್ರ ಮನವಿ
 • ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲಿದೆ: ಯಡಿಯೂರಪ್ಪ
 • ಜಪಾನ್ ನೊಂದಿಗಿನ ಭದ್ರತಾ ಒಪ್ಪಂದದಿಂದ ಹಿಂದೆ ಸರಿಯಲಿದೆಯೇ ಅಮೆರಿಕ?
 • ಕೃಷಿಗಿಂತ ಹೈನುಗಾರಿಕೆಯಲ್ಲಿ ಹೆಚ್ಚು ಸಂಪಾದನೆ; ಕೇಂದ್ರ ಸರ್ಕಾರ
 • ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ
 • ಭಾರತದ ವಿರುದ್ಧ ಪಾಕ್ ಸೋತ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತ್ತು !
 • ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
International Share

ಟೆಹ್ರಾನ್ ಭೇಟಿಗೂ ಮುನ್ನ ಇರಾನ್ ಸ್ಥಿತಿಗತಿ ಕುರಿತು ಟ್ರಂಪ್ ಜೊತೆ ಮಾತುಕತೆ ನಡೆಸಿದ ಜಪಾನ್ ಪ್ರಧಾನಿ

ಟೋಕಿಯೊ, ಜೂ 11 (ಯುಎನ್ಐ) ಜಪಾನ್ ಪ್ರಧಾನಿ ಶಿಂಜೊ ಅಬೆ ತಮ್ಮ ಟೆಹ್ರಾನ್ ಪ್ರವಾಸಕ್ಕೂ ಮುನ್ನ ಇರಾನ್ ಸ್ಥಿತಿಗತಿ ಕುರಿತು ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ.
ಉಭಯ ನಾಯಕರು ದೂರವಾಣಿ ಮೂಲಕ ಪರಸ್ಪರ ಪ್ರಾದೇಶಿಕ ಸಮಸ್ಯೆಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಇರಾನ್ ಸ್ಥಿತಿಗತಿ ಕುರಿತು ಕೂಡ ಚರ್ಚಿಸಿದ್ದಾರೆ ಎಂದು ಮುಖ್ಯ ಸಂಪುಟ ಕಾರ್ಯದರ್ಶಿ ಯೋಶಿಹೈಡ್ ಸುಗ ಹೇಳಿದ್ದಾರೆ.
ಬುಧವಾರ ಶಿಂಜೊ ಅಬೆ ಟೆಹ್ರಾನ್ ಗೆ ಭೇಟಿ ನೀಡಲಿದ್ದು, ಟೇಕಿಯೋ ಫುಕುಡಾ ನಂತರ ಆ ದೇಶಕ್ಕೆ ಭೇಟಿ ನೀಡುವ ಎರಡನೇ ಪ್ರಧಾನಿಯಾಗಿದ್ದಾರೆ. ಈ ವೇಳೆ ಪ್ರಮುಖ ನಾಯಕ ಅಯಾತುಲ್ಲಾ ಅಲಿ ಖೊಮೋನಿ ಮತ್ತು ಇರಾನ್ ಅಧ್ಯಕ್ಷ ಹಾಸನ್ ರೌಹಾನಿ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.
ಪರಮಾಣು ಕಾರ್ಯಕ್ರಮ ಹಿನ್ನೆಲೆಯಲ್ಲಿ ಇರಾನ್ ಹಾಗೂ ಅಮೆರಿಕದ ನಡುವೆ ಆತಂಕ ಹೆಚ್ಚಿದ ಸಂದರ್ಭದಲ್ಲಿಯೇ ಜಪಾನ್ ಪ್ರಧಾನಿ ಟೆಹ್ರಾನ್ ಪ್ರವಾಸ ಕೈಗೊಳ್ಳುತ್ತಿದ್ದಾರೆ. ರಾಜತಾಂತ್ರಿಕವಾಗಿ ಸೂಕ್ಷ್ಮ ವಿಷಯವಾಗಿರುವುದರಿಂದ ಉಭಯ ನಾಯಕರು 20 ನಿಮಿಷಗಳ ವರೆಗೆ ದೂರವಾಣಿ ಮೂಲಕ ನಡೆಸಿದ ಚರ್ಚೆಯ ಮಾಹಿತಿಯನ್ನು ನೀಡಲು ಜಪಾನ್ ಅಧಿಕಾರಿಗಳು ನಿರಾಕರಿಸಿದ್ದಾರೆ.
ಇರಾನ್ ಜೊತೆ ಸಾಂಪ್ರದಾಯಿಕ ಸೌಹಾರ್ಧಯುತ ಸಂಬಂಧಗಳನ್ನು ಹೊಂದಿರುವ ಜಪಾನ್, ಮಾತುಕತೆ ನಡೆಸಲು ಇರಾನ್ ಅನ್ನು ಉತ್ತೇಜಿಸುವ ತನ್ನ ಉದ್ದೇಶವನ್ನು ಪುನರುಚ್ಚರಿಸಿದೆ. ಮೇ ಕೊನೆಯಲ್ಲಿ ಜಪಾನ್ ಪ್ರವಾಸ ವೇಳೆ ಟ್ರಂಪ್ ಅವರು ಈ ರೀತಿಯ ಪ್ರಯತ್ನಗಳನ್ನು ಬೆಂಬಲಿಸಿದ್ದರು.
ಕಳೆದ ವರ್ಷ ಇರಾನ್ ಜೊತೆಗಿನ 2015ರ ಅಂತಾರಾಷ್ಟ್ರೀಯ ಪರಮಾಣು ಒಪ್ಪಂದವನ್ನು ಹಿಂಪಡೆಯುವ ಹಾಗೂ ಆರ್ಥಿಕ ನಿರ್ಬಂಧಗಳನ್ನು ಹೇರುವ ಟ್ರಂಪ್ ಅವರ ನಿರ್ಧಾರವು ಇರಾನ್ ತನ್ನ ಕೆಲ ಬದ್ಧತೆಗಳನ್ನು ಅಮಾನತುಗೊಳಿಸುವಂತೆ ಪ್ರೇರೇಪಿಸಿತು.
ಮೇ ತಿಂಗಳಲ್ಲಿ, ಪರಮಾಣು ಒಪ್ಪಂದದಡಿಯಲ್ಲಿ ಅನುಮತಿಕ್ಕಿಂತ ಹೆಚ್ಚು ಉತ್ಕೃಷ್ಟವಾದ ಯುರೇನಿಯಂ ಅನ್ನು ಇಟ್ಟುಕೊಳ್ಳುವುದಾಗಿ ಹೇಳಿದ್ದ ಇರಾನ್, ಹೊಸ ಷರತ್ತುಗಳ ಕುರಿತು ಮಾತುಕತೆ ನಡೆಸಲು 60 ದಿನಗಳ ಕಾಲಾವಧಿ ನೀಡಿತ್ತು.
ಇದರಿಂದ ಎರಡು ದೇಶಗಳ ಮಧ್ಯದ ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಂಡು ವಾಷಿಂಗ್ಟನ್ ಇತ್ತೀಚೆಗೆ ಪರ್ಷಿಯನ್ ಗಲ್ಫ್ ಗೆ ವೈಮಾನಿಕ ದಾಳಿ ತಂಡ ಹಾಗೂ ಬಾಂಬ್ ದಾಳಿ ತಂಡವನ್ನು ಕಳುಹಿಸಿಕೊಟ್ಟು ಹೆಚ್ಚುವರಿ ಪಡೆಯನ್ನು ಕಳುಹಿಸಲು ಅಮೆರಿಕ ನಿರ್ಧರಿಸಿತ್ತು.
ಯುಎನ್ಐ ಡಿವಿ ವಿಎನ್ 1651
More News

ಶಾಲೆಯ ಗೋಡೆ ಕುಸಿದು ಆರು ಮಕ್ಕಳ ಸಾವು

24 Jun 2019 | 7:19 PM

 Sharesee more..
ಉತ್ತರ ಇರಾಕ್ ನಲ್ಲಿ ಸೇನಾ ಕಾರ್ಯಾಚರಣೆ: 14 ಐಎಸ್ ಉಗ್ರರ ಹತ್ಯೆ

ಉತ್ತರ ಇರಾಕ್ ನಲ್ಲಿ ಸೇನಾ ಕಾರ್ಯಾಚರಣೆ: 14 ಐಎಸ್ ಉಗ್ರರ ಹತ್ಯೆ

24 Jun 2019 | 4:33 PM

ಬಾಗ್ದಾದ್, ಜೂನ್ 24 (ಕ್ಸಿನ್ಹುವಾ) ಇರಾಕ್ ಉತ್ತರ ಪ್ರಾಂತ್ಯದ ಕಿರ್ಕುಕ್ ನಲ್ಲಿ ಅಮೆರಿಕ ಹಾಗೂ ಇರಾಕಿ ಭಯೋತ್ಪಾದನಾ ನಿಗ್ರಹದಳ ಜಂಟಿಯಾಗಿ ಸೋಮವಾರ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ 14 ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.

 Sharesee more..