Monday, Mar 1 2021 | Time 19:22 Hrs(IST)
 • 'ಅನುಗ್ರಹ’ ಯೋಜನೆ ಮರು ಜಾರಿಗೊಳಿಸಿದಿದ್ದರೆ, ಹೋರಾಟ; ಸಿದ್ದರಾಮಯ್ಯ ಎಚ್ಚರಿಕೆ
 • ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ: ಜೂ 21ರಿಂದ ಜು 5ರವರೆಗೆ ಪರೀಕ್ಷೆ
 • ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬೋನಿಗೆ ಬಿದ್ದ ಹೆಣ್ಣು ಹುಲಿ
 • ವಿಮಾನ ನಿಲ್ದಾಣದಲ್ಲಿ ಧರಣಿ ಮುಂದುವರಿಸಿರುವ ಚಂದ್ರಬಾಬುನಾಯ್ಡು
 • ನನಗೇಕೆ ಕೋವಿಡ್ ಲಸಿಕೆ ಯುವ ಜನರಿಗೆ ನೀಡಿ: ಮಲ್ಲಿಕಾರ್ಜುನ ಖರ್ಗೆ
 • ಅಮಿತ್ ಶಾ ವಿರುದ್ದ ಕ್ರಿಮಿನಲ್ ದಾವೆ ಹೂಡುವೆ ; ಮಾಜಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ
 • ರೇಣಿಗುಂಟ ವಿಮಾನ ನಿಲ್ದಾಣದಲ್ಲಿ ಚಂದ್ರಬಾಬು ನಾಯ್ಡು ಪೊಲೀಸ್ ವಶಕ್ಕೆ: ಟಿಡಿಪಿ ಮುಖಂಡರಿಂದ ಖಂಡನೆ
 • ಪ್ರಧಾನಿ ಮೋದಿ ಉದಾಹರಣೆಯಾಗಿ ನಿಂತಿದ್ದಕ್ಕೆ ಧನ್ಯವಾದಗಳು ; ಡಾ|| ಹರ್ಷವರ್ಧನ್
 • ಕೊವಿಡ್ -19 ಲಸಿಕೆ ಅಭಿಯಾನಕ್ಕೆ ಎಸ್ ಬಿಐನಿಂದ 11 ಕೋಟಿ ರೂ ನೆರವು
 • ಪ್ರಧಾನಿ ಮೋದಿಗೆ ಕೋವಾಕ್ಸಿನ್ ಲಸಿಕೆ ಕೋವಿಶೀಲ್ಡ್ ಪರಿಣಾಮಕಾರಿತ್ವದ ಬಗ್ಗೆ ಸಂಸದ ಒವೈಸಿ ಅನುಮಾನ
 • ಈಶಾನ್ಯ ಆಫ್ಘಾನಿಸ್ತಾನದಲ್ಲಿ ರಕ್ಷಣಾ ಪಡೆಗಳಿಂದ 30 ತಾಲಿಬಾನ್ ಉಗ್ರರ ಹತ್ಯೆ
 • ಸೂರತ್ಕಲ್ ಬೀಚ್ ನಲ್ಲಿ ಮುಳುಗಿ ಶಿವಮೊಗ್ಗ ಬಾಲಕ ಸಾವು
 • ದೇಶದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ 97 07: ಗುಣಮುಖರಾದವರ ಸಂಖ್ಯೆ 1 07ಕ್ಕೆ ಏರಿಕೆ
 • ಚಂದ್ರಬಾಬು ನಾಯ್ಡು ಪೋಲಿಸ್ ವಶಕ್ಕೆ, ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ
 • ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ, ಗ್ರಾಹಕರ ಜೇಬಿಗೆ ನಿತ್ಯವೂ ಕತ್ತರಿ…!
Sports Share

ಟಿ-20: ಆಸ್ಟ್ರೇಲಿಯಾ ಮಣಿಸಿದ ನ್ಯೂಜಿಲೆಂಡ್

ನವದೆಹಲಿ, ಫೆ.22 (ಯುಎನ್ಐ)- ಭರವಸೆಯ ಆಟಗಾರ ಡೆವೊನ್ ಕಾನ್ವೇ ಅವರ ಅಜೇಯ 99 ರನ್ ಗಳ ಮತ್ತು ಅನುಭವಿ ವೇಗದ ಬೌಲರ್ ಟಿಮ್ ಸೌಥಿ (10 ಕ್ಕೆ 2) ಮತ್ತು ಲೆಗ್ ಸ್ಪಿನ್ನರ್ ಇಶ್ ಸೋಧಿ (28 ಕ್ಕೆ 4) ಅವರ ಅದ್ಭುತ ಬೌಲಿಂಗ್ ನೆರವಿನಿಂದ ಸೋಮವಾರ ನ್ಯೂಜಿಲೆಂಡ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿ, ಐದು ಪಂದ್ಯಗಳಲ್ಲಿ 1-0 ಮುನ್ನಡೆ ಸಾಧಿಸಿತು.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನ್ಯೂಜಿಲೆಂಡ್ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 184 ರನ್‌ ಸೇರಿಸಿತು. ಆಸ್ಟ್ರೇಲಿಯಾ 17.3 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್ ಆಗಿತ್ತು. ಕಾನ್ವೇ ಭರ್ಜರಿ ಪ್ರದರ್ಶನದ ಬಲದಿಂದ ಪಂದ್ಯ ಪ್ರಶಸ್ತಿಯನ್ನು ಪಡೆದರು.
ಕಾನ್ವೇ ಕೇವಲ 59 ಎಸೆತಗಳಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಅಜೇಯ 99 ರನ್ ಗಳಿಸಿದರು. ಗ್ಲೆನ್ ಫಿಲಿಪ್ಸ್ 30 ಮತ್ತು ಜೇಮ್ಸ್ ನೀಶಮ್ 26 ರನ್ ಸೇರಿಸಿ ತಂಡಕ್ಕೆ ಆಧಾರವಾದರು. ನಾಯಕ ಕೇನ್ ವಿಲಿಯಮ್ಸನ್ 12 ರನ್ ಗೆ ಔಟಾದರು.
ಆಸ್ಟ್ರೇಲಿಯಾ ಪರ ಡೇನಿಯಲ್ ಸ್ಯಾಮ್ಸ್ 40 ರನ್‌ಗಳಿಗೆ ಎರಡು ವಿಕೆಟ್ ಮತ್ತು ಐಪಿಎಲ್‌ನಲ್ಲಿ 14 ಕೋಟಿ ರೂ.ಗಳ ವೇಗದ ಬೌಲರ್ ಜೀ ರಿಚರ್ಡ್‌ಸನ್ 31 ರನ್‌ಗಳಿಗೆ ಎರಡು ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 131 ರನ್‌ಗಳಿಗೆ ಸರ್ವ ಪತನ ಕಂಡಿತು.
ನಾಯಕ ಆರನ್ ಫಿಂಚ್ ಕೇವಲ ಒಂದು ರನ್ ಗಳಿಗೆ ಪೆವಿಲಿಯನ್‌ಗೆ ಮರಳಿದರು, ಐಪಿಎಲ್‌ನಲ್ಲಿ 14.25 ಕೋಟಿ ಮೌಲ್ಯದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐದು ಎಸೆತಗಳಲ್ಲಿ ಒಂದು ರನ್ ಗಳಿಸಿ ನಿರಾಸೆ ಅನುಭವಿಸಿದರು. ಮಿಚೆಲ್ ಮಾರ್ಷ್ 33 ಎಸೆತಗಳಲ್ಲಿ 45 ರನ್ ಗಳಿಸಿದರು ಮತ್ತು ಆಷ್ಟನ್ ಎಗ್ಗರ್ 13 ಎಸೆತಗಳಲ್ಲಿ 23 ರನ್ ಗಳಿಸಿದರು.
ಕೊನೆಯ ಬ್ಯಾಟ್ಸ್‌ಮನ್ ಆಡಮ್ ಜಂಪಾ ಔಟಾಗದೆ 13 ರನ್ ಗಳಿಸಿದರು, ಇಲ್ಲದಿದ್ದರೆ ಆಸ್ಟ್ರೇಲಿಯಾದ ಎಂಟು ವಿಕೆಟ್‌ಗಳು 99 ರನ್‌ಗಳಿಗೆ ಕುಸಿಯಿತು. ನ್ಯೂಜಿಲೆಂಡ್ ಪರ ಸೋಧಿ ನಾಲ್ಕು ಓವರ್‌ಗಳಲ್ಲಿ 28 ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸಿ ಆಸ್ಟ್ರೇಲಿಯಾದ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು.
ಯುಎನ್ಐ ವಿಎನ್ಎಲ್ 1742.
More News

ವಿಜಯ್ ಹಜಾರೆ: ಸಮರ್ಥ್, ದೇವದತ್ ಶತಕದ ವೈಭವ

28 Feb 2021 | 6:30 PM

 Sharesee more..

ಶೂಟಿಂಗ್ ಸ್ಕೀಟ್: ಭಾರತಕ್ಕೆ ಕಂಚು

28 Feb 2021 | 6:08 PM

 Sharesee more..
ನಾಲ್ಕನೇ ಟೆಸ್ಟ್ ಗೆ ಬುಮ್ರಾ ಅಲಭ್ಯ

ನಾಲ್ಕನೇ ಟೆಸ್ಟ್ ಗೆ ಬುಮ್ರಾ ಅಲಭ್ಯ

27 Feb 2021 | 9:14 PM

ನವದೆಹಲಿ, ಫೆ.27 (ಯುಎನ್ಐ)- ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯುವುದಿಲ್ಲ.

 Sharesee more..

ಶ್ರೇಯಸ್ ಶತಕ: ಮುಂಬೈ ಅಗ್ರ ಸ್ಥಾನ ಭದ್ರ

27 Feb 2021 | 8:50 PM

 Sharesee more..