Monday, Aug 2 2021 | Time 14:09 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
Sports Share

ಟಿ-20: ಇಂಗ್ಲೆಂಡ್ ಸರಣಿ ಗೆಲುವಿನ ನಗು

ಟಿ-20: ಇಂಗ್ಲೆಂಡ್ ಸರಣಿ ಗೆಲುವಿನ ನಗು
ಟಿ-20: ಇಂಗ್ಲೆಂಡ್ ಸರಣಿ ಗೆಲುವಿನ ನಗು

ಮ್ಯಾಚಿಸ್ಟರ್, ಜು.21 (ಯುಎನ್ಐ)- ಆತಿಥೇಯ ಇಂಗ್ಲೆಂಡ್, ಪ್ರವಾಸಿ ಪಾಕಿಸ್ತಾನ ತಂಡದ ವಿರುದ್ಧ ಮಂಗಳವಾರ ರಾತ್ರಿ ನಡೆದ ಮೂರನೇ ಹಾಗೂ ಅಂತಿಮ ಟಿ-2೦ ಅಂತಾರ್‍ಟ್ರಾಯ ಪಂದ್ಯದಲ್ಲಿ ಮೂರು ವಿಕೆಟ್ ಜಯ ದಾಖಲಿಸಿ ಸರಣಿಯನ್ನು 2-1 ರಿಂದ ತನ್ನದಾಗಿಸಿಕೊಂಡಿದೆ.ಜಯ ಗಳಿಸಲು ನಿಗದಿತ 2೦ ಓವರ್‌ಗಳಲ್ಲಿ 155 ರನ್ ಸೇರಿಸುವ ಗುರಿ ಪಡೆದ ಇಂಗ್ಲೆಂಡ್, ಎರಡು ಎಸೆತಗಳು ಬಾಕಿ ಇರುವಂತೆ 19.4 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಜಯದ ಗುರಿ ಮುಟ್ಟಿತು.ಇಂಗ್ಲೆಂಡ್ ಪರ ಜಾಸನ್ ರಾಯ್ ಮಿಂಚಿನ 64, ಡೆವಿಡ್ ಮಲಾನ್ 31, ಜೋಸ್ ಬಟ್ಲರ್ 21 ಹಾಗೂ ನಾಯಕ ಇಯಾನ್ ಮಾರ್ಗನ್ 21 ರನ್ ಮಾಡಿದರು.ಪಾಕಿಸ್ತಾನ ಪರ ಮೊಹಮ್ಮದ್ ಹಫೀಜ್ 28 ಕ್ಕೆ ಮೂರು, ಶಹದಾಬ್ ಖಾನ್, ಐಮದ್ ವಾಸಿಂ ಹಾಗೂ ಹಸನ್ ಅಲಿ ತಲಾ ಒಂದು ವಿಕೆಟ್ ಉರುಳಿಸಿದರು.ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ನಿಗದಿತ 2೦ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಸೇರಿಸಿತು.ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್ ಅಜೇಯ 76, ಫಖರ್ ಜಮಾನ್ 24 ಹಾಗೂ ಹಸನ್ ಅಲಿ ಅಜೇಯ 15 ರನ್ ಮಾಡಿದರು. ಇಂಗ್ಲೆಂಡ್ ಪರ ಅದಿಲ್ ರಶೀದ್ 35 ಕ್ಕೆ ನಾಲ್ಕು ವಿಕೆಟ್ ಉರುಳಿಸಿ ಯಶಸ್ಸಿ ಬೌಲರ್ ಎನಿಸಿದರು.ಮೊದಲ ಟಿ-2೦ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ದಾಖಲಿಸಿತ್ತು. ಎರಡು ಹಾಗೂ ಮೂರನೇ ಟಿ-2೦ ಪಂದ್ಯದಲ್ಲಿ ಜಯ ಪಡೆದ ಆತಿಥೇಯ ಇಂಗ್ಲೆಂಡ್ ಸರಣಿಯನ್ನು 2-1 ರಿಂದ ತನ್ನ ಮಡಿಲಿಗೆ ಹಾಕಿಕೊಂಡಿತು. ಇದಕ್ಕೂ ಮುನ್ನ ಆಡಲಾದ ಮೂರು ಏಕದಿನ ಪಂದ್ಯಗಳನ್ನು ಸರಣಿಯನ್ನು ಇಂಗ್ಲೆಂಡ್ 3-೦ ರಿಂದ ತನ್ನದಾಗಿಸಿಕೊಂಡು ಹಿರಿಮೆ ಮೆರೆದಿತ್ತು.ಸಂಕ್ಷಿಪ್ತ ಸ್ಕೋರ್ಪಾಕಿಸ್ತಾನ 2೦ ಓವರ್‌ಗಳಲ್ಲಿ 6 ವಿಕೆಟ್ಗೆ 154ಇಂಗ್ಲೆಂಡ್ 19.4 ಓವರ್‌ಗಳಲ್ಲಿ 7 ವಿಕೆಟ್ ಗೆ 155ಯುಎನ್ಐ ವಿಎನ್ಎಲ್ 1805

More News
ಟೋಕಿಯೋ ಒಲಿಂಪಿಕ್ಸ್ : ಹಾಕಿಯಲ್ಲಿ ಬ್ರಿಟನ್‍ ವಿರುದ್ಧ 3-1 ರಿಂದ ಜಯ ಸಾಧಿಸಿದ ಭಾರತ, ಸೆಮಿಫೈನಲ್ಸ್ ಗೆ ಲಗ್ಗೆ

ಟೋಕಿಯೋ ಒಲಿಂಪಿಕ್ಸ್ : ಹಾಕಿಯಲ್ಲಿ ಬ್ರಿಟನ್‍ ವಿರುದ್ಧ 3-1 ರಿಂದ ಜಯ ಸಾಧಿಸಿದ ಭಾರತ, ಸೆಮಿಫೈನಲ್ಸ್ ಗೆ ಲಗ್ಗೆ

01 Aug 2021 | 8:27 PM

ಟೋಕಿಯೋ, ಆ 1(ಯುಎನ್‍ಐ)- ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾನುವಾರ ನಡೆದ ಹಾಕಿಯ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಭಾರತೀಯ ತಂಡ ಗ್ರೇಟ್ ಬ್ರಿಟನ್‍ ವಿರುದ್ಧ 3-1 ಗೋಲಿನಿಂದ ಜಯಗಳಿಸುವುದರೊಂದಿಗೆ ಸೆಮಿಫೈನಲ್ಸ್ ಗೆ ಲಗ್ಗೆ ಹಾಕಿದೆ.

 Sharesee more..
ಬ್ಯಾಡ್ಮಿಂಟನ್: ಸಿಂಧು ಗೆ ಕಂಚು

ಬ್ಯಾಡ್ಮಿಂಟನ್: ಸಿಂಧು ಗೆ ಕಂಚು

01 Aug 2021 | 7:52 PM

ಟೋಕಿಯೊ, ಆ.1 (ಯುಎನ್ಐ)- ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಟೋಕಿಯೊ ಒಲಿಂಪಿಕ್ಸ್ 2020 ಯಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

 Sharesee more..

ಬಾಕ್ಸಿಂಗ್: ಸತೀಶ್ ಗೆ ನಿರಾಸೆ

01 Aug 2021 | 6:29 PM

 Sharesee more..
ಸುರಕ್ಷತಾ ನಿಯಮ ಉಲ್ಲಂಘನೆ, 8 ಜನರ  ಮಾನ್ಯತೆ ರದ್ದು

ಸುರಕ್ಷತಾ ನಿಯಮ ಉಲ್ಲಂಘನೆ, 8 ಜನರ ಮಾನ್ಯತೆ ರದ್ದು

01 Aug 2021 | 4:29 PM

ಟೋಕಿಯೊ, ಆಗಸ್ಟ್ 1( ಯುಎನ್ಐ) ಸುರಕ್ಷತಾ ನಿಯಮ ಉಲ್ಲಂಘನೆ ಮಾಡಿದ್ದಾಕ್ಕಾಗಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಸದ್ಯ 8 ಜನರ ಮಾನ್ಯತೆ ರದ್ದುಗೊಳಿಸಲಾಗಿದೆ ಎಂದು ಸಂಘಟನಾ ಸಮಿತಿಯ ಸಿಇಒ ತೋಶಿರೊ ಮುಟೊ ಹೇಳಿದ್ದಾರೆ.

 Sharesee more..
ದಕ್ಷಿಣ ಕೊರಿಯಾ: ಎರಡು ಲಕ್ಷದ ಸನಿಹ ಕೊರನಾ ಸೋಂಕಿತರು

ದಕ್ಷಿಣ ಕೊರಿಯಾ: ಎರಡು ಲಕ್ಷದ ಸನಿಹ ಕೊರನಾ ಸೋಂಕಿತರು

01 Aug 2021 | 4:24 PM

ಸೋಲ್, ಆ.1 (ಯುಎನ್ಐ) ದಕ್ಷಿಣ ಕೊರಿಯಾದಲ್ಲಿ, ಕಳೆದ 24 ಗಂಟೆಗಳಲ್ಲಿ 1,442 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾದ ನಂತರ ಸೋಂಕಿತರ ಸಂಖ್ಯೆ 1,99,787 ಕ್ಕೆ ಏರಿಕೆಯಾಗಿದೆ.

 Sharesee more..