Tuesday, Jan 21 2020 | Time 23:00 Hrs(IST)
 • ಸೌಹಾರ್ದತೆಯನ್ನು ಕೆಡಿಸುವ ರೇಣುಕಾಚಾರ್ಯ ಹೇಳಿಕೆ: ಎಸ್‍ಡಿಪಿಐ
 • ವುಹಾನ್‌ ವೈರಸ್‌: ಏಳು ವಿಮಾನ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ
 • ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
 • ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದವರನ್ನು ಪಕ್ಷದಿಂದ ಅಮಾನತುಗೊಳಿಸಿದ ದಿನೇಶ್ ಗುಂಡೂರಾವ್
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
business economy Share

ಡಬ್ಲ್ಯುಟಿಒನಲ್ಲಿ ಅಭಿವೃದ್ಧಿಶೀಲ ದೇಶದ ಸ್ಥಾನಮಾನ ಕಾಪಾಡಿಕೊಳ್ಳಲು ಚೀನಾ, ಭಾರತ ಸಮ್ಮತಿ

ಡಬ್ಲ್ಯುಟಿಒನಲ್ಲಿ ಅಭಿವೃದ್ಧಿಶೀಲ ದೇಶದ ಸ್ಥಾನಮಾನ ಕಾಪಾಡಿಕೊಳ್ಳಲು ಚೀನಾ, ಭಾರತ ಸಮ್ಮತಿ
ಡಬ್ಲ್ಯುಟಿಒನಲ್ಲಿ ಅಭಿವೃದ್ಧಿಶೀಲ ದೇಶದ ಸ್ಥಾನಮಾನ ಕಾಪಾಡಿಕೊಳ್ಳಲು ಚೀನಾ, ಭಾರತ ಸಮ್ಮತಿ

ಬೀಜಿಂಗ್, ಆಗಸ್ಟ್ 13 (ಯುಎನ್‌ಐ) ವಿಶ್ವ ವಾಣಿಜ್ಯ ಸಂಸ್ಥೆ(ಡಬ್ಲ್ಯುಟಿಒ)ನಲ್ಲಿ ಉಭಯ ದೇಶಗಳು ತಮ್ಮ ಅಭಿವೃದ್ಧಿಶೀಲ ದೇಶದ ಸ್ಥಾನಮಾನ ಮತ್ತು ನ್ಯಾಯಸಮ್ಮತ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕೆ ಭಾರತ ಮತ್ತು ಚೀನಾ ಒಪ್ಪಿವೆ.

ಅಭಿವೃದ್ಧಿಶೀಲ ರಾಷ್ಟ್ರಗಳ ನೇಮಕವನ್ನು ಬದಲಿಸುವಂತೆ ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡಬ್ಲ್ಯುಟಿಒ ಮೇಲೆ ಒತ್ತಡ ಹೇರಿದ್ದರು. ಚೀನಾ ಮತ್ತು ಭಾರತದಂತಹ ದೇಶಗಳು ನ್ಯಾಯವಲ್ಲದ ರೀತಿಯಲ್ಲಿ ಆದ್ಯತೆಯ ಲಾಭವನ್ನು ಪಡೆಯುತ್ತಿವೆ. ಈ ಹಿನ್ನೆಲೆಯಲ್ಲಿ 'ಅಭಿವೃದ್ಧಿ ಹೊಂದುತ್ತಿರುವ ದೇಶ' ಸ್ಥಾನಮಾನವನ್ನು ಈ ದೇಶಗಳು ತ್ಯಜಿಸಬೇಕು ಎಂದು ಟ್ರಂಪ್‌ ಹೇಳಿದ್ದರು.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ನಡುವೆ ಸೋಮವಾರ ನಡೆದ ಮಾತುಕತೆಯಲ್ಲಿ ಈ ವಿಷಯ ಪ್ರಸ್ತಾಪಕ್ಕೆ ಬಂದಿತ್ತು.

'ತಮ್ಮ ಅಭಿವೃದ್ಧಿಶೀಲ ದೇಶದ ಸ್ಥಾನಮಾನವನ್ನು ಕಾಪಾಡಿಕೊಳ್ಳುವುದು ಉಭಯ ದೇಶಗಳ ಉದ್ದೇಶವಾಗಿದೆ. ಅಲ್ಲದೆ, ಡಬ್ಲ್ಯುಟಿಒನಲ್ಲಿ ತಮ್ಮ ಅಭಿವೃದ್ಧಿ ಮತ್ತು ಕಾನೂನುಬದ್ಧ ಹಿತಾಸಕ್ತಿಗಳ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು ಎರಡೂ ದೇಶಗಳ ಸಮಾನ ಉದ್ದೇಶವಾಗಿದೆ.' ಎಂದು ಕ್ಸಿನ್ಹುವಾ ವರದಿ ಮಾಡಿದೆ.

ವಿದೇಶಾಂಗ ಸಚಿವಾಲಯದ ಹೇಳಿಕೆಯಂತೆ, ಜೈಶಂಕರ್ ಅವರು ಚೀನಾದೊಂದಿಗೆ ಭಾರತದ ವಾಣಿಜ್ಯ ಕೊರತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ಆತಂಕಕಾರಿ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.

ದೇಶೀಯ ಚೀನೀ ಮಾರುಕಟ್ಟೆಯಲ್ಲಿ ನಮ್ಮಔಷಧೀಯ ಮತ್ತು ಐಟಿ ಉತ್ಪನ್ನಗಳು ಮತ್ತು ಸೇವೆಗಳಿಗೆ ಹೆಚ್ಚಿನ ಪ್ರವೇಶವನ್ನು ಕಲ್ಪಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಚೀನಾದ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.

ಯುಎನ್‌ಐ ಎಸ್‌ಎಲ್ಎಸ್‌ ಕೆವಿಆರ್ 1901

More News

ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಇಳಿಕೆ

21 Jan 2020 | 5:19 PM

 Sharesee more..

ಸೆನ್ಸೆಕ್ಸ್ 205 10 ಅಂಕ ಇಳಿಕೆ

21 Jan 2020 | 4:19 PM

 Sharesee more..

ಸೆನ್ಸೆಕ್ಸ್‌ 128 ಅಂಕ ಕುಸಿತ

21 Jan 2020 | 12:03 PM

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಇಳಿಕೆ

21 Jan 2020 | 12:03 PM

 Sharesee more..