Wednesday, Mar 3 2021 | Time 20:02 Hrs(IST)
  • ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಅಧಿವೇಶನ: ಬೆಲೆ ಏರಿಕೆ, ಬಿಜೆಪಿ ಆಂತರಿಕ ಕಚ್ಚಾಟ, ಮೀಸಲಾತಿ ವಿಚಾರಗಳಲ್ಲಿ ಸರ್ಕಾರವನ್ನು ತರಾಟೆಗೆ ತೆರೆದುಕೊಳ್ಳಲು ವಿಪಕ್ಷ ಸಜ್ಜು
  • ಮೇಲ್ಮನೆಯಲ್ಲಿ ಸುಗಮ ಕಲಾಪಕ್ಕೆ ಸಭಾಪತಿ ಹೊರಟ್ಟಿ ಪೂರ್ವಭಾವಿ ಸಭೆ:ಸದಸ್ಯರಿಗೆ ಸೂಚನೆ
  • ವನ್ಯಜೀವಿಗಳನ್ನು ಕಾಪಾಡಿ, ಸಂರಕ್ಷಿಸುವಂತೆ ಜನರಿಗೆ ಉಪರಾಷ್ಟ್ರಪತಿ, ಪ್ರಧಾನಿ ಕರೆ
  • ‘ಸಂಘ’ ಅರ್ಥಮಾಡಿಕೊಳ್ಳಲು ರಾಹುಲ್ ಗಾಂಧಿಗೆ ಇನ್ನೂ ಬಹಳಷ್ಟು ಸಮಯಬೇಕಿದೆ; ಜಾವಡೇಕರ್
  • 'ಚಿನ್ನಮ್ಮ' ಶಶಿಕಲಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಅಣ್ಣಾ ಡಿಎಂಕೆ ಮೇಲೆ ಬಿಜೆಪಿ ನಾಯಕರ ಒತ್ತಡ ?
  • ಆಪಾದನೆ ಬಂದ ಮಾತ್ರಕ್ಕೆ ಅಪರಾಧಿಯಲ್ಲ:ಬಿಸಿಪಾ
  • ನವೀಕರಿಸಬಹುದಾದ ಇಂಧನ ವಲಯಲ್ಲಿ ಭಾರತ, ಫ್ರಾನ್ಸ್ ನಡುವೆ ಸಹಕಾರ ಕುರಿತ ಒಪ್ಪಂದಕ್ಕೆ ಸಚಿವ ಸಂಪುಟ ಒಪ್ಪಿಗೆ
  • ರಾಸಲೀಲೆ ಪ್ರಕರಣ:ರಮೇಶ್ ಜಾರಕಿಹೊಳಿ ರಾಜೀನಾಮೆ
  • ಮದರಸಾಗಳಲ್ಲಿ ಭಗವದ್ಗೀತೆ, ರಾಮಾಯಣ !
  • ಹತ್ರಾಸ್ ಪ್ರಕರಣ: ಮುಖ್ಯ ಆರೋಪಿ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಣೆ
  • ಕೋವಿಡ್ ಲಸಿಕೆ ಹಾಕಿಸಿಕೊಂಡ: ರಾಷ್ಟ್ರಪತಿ ರಾಮನಾಥ್ ಕೋವಿಂದ್
  • ಲಡಾಖ್ಗೆ ಕಾಶ್ಮೀರ ಸಂಪರ್ಕಿಸುವ ಹೆದ್ದಾರಿ ಬಂದ್: ವೈಮಾನಿಕವಾಗಿ 500 ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಳಾಂತರ
  • ನಟ ತಾಪ್ಸಿ ಪನ್ನು , ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಆಸ್ತಿಗಳ ಮೇಲೆ ಐಟಿ ದಾಳಿ
  • ದೇಶಾದ್ಯಂತ ಇದುವರೆಗೆ 1 56 ಕೋಟಿ ಜನರಿಗೆ ಕೋವಿಡ್ ಲಸಿಕೆ
  • ಆ ದೇಶದಲ್ಲಿ ಒಂದೇ ದಿನ 1,641 ಮಂದಿ ಸಾವು
Entertainment Share

ಡಿಟಿಎಸ್​ -ಡೇರ್​ ಟು ಸ್ಲೀಪ್ ಕನ್ನಡ, ತೆಲುಗು ಚಿತ್ರದಲ್ಲಿ ‘ಆ ದಿನಗಳು’ ಚೇತನ್

ಡಿಟಿಎಸ್​ -ಡೇರ್​ ಟು ಸ್ಲೀಪ್  ಕನ್ನಡ, ತೆಲುಗು ಚಿತ್ರದಲ್ಲಿ ‘ಆ ದಿನಗಳು’ ಚೇತನ್
ಡಿಟಿಎಸ್​ -ಡೇರ್​ ಟು ಸ್ಲೀಪ್ ಕನ್ನಡ, ತೆಲುಗು ಚಿತ್ರದಲ್ಲಿ ‘ಆ ದಿನಗಳು’ ಚೇತನ್

ಬೆಂಗಳೂರು, ಫೆ 23 (ಯುಎನ್ಐ) ಎಸ್​ಎಸ್​ ಸ್ಟುಡಿಯೋ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಡಿಟಿಎಸ್-ಡೇರ್ ಟು ಸ್ಲೀಪ್ ಚಿತ್ರಕ್ಕೆ ನಾಯಕನಾಗಿ ‘ಆ ದಿನಗಳು’ ಸಿನಿಮಾ ಖ್ಯಾತಿಯ ಚೇತನ್ ಆಯ್ಕೆಯಾಗಿದ್ದು, ಬುಧವಾರ ಫೆ. 24ರಂದು ಅವರ ಜನ್ಮದಿನದಂದು ಸಿನಿಮಾ ಬಗ್ಗೆ ಚಿತ್ರತಂಡ ಅದ್ದೂರಿಯಾಗಿ ಘೋಷಿಸಲು ಮುಂದಾಗಿದೆ.

ಈಗಾಗಲೇ 100 CRORES ಸಿನಿಮಾ ನಿರ್ಮಾಣ ಮಾಡಿದ್ದ ತಂಡವೇ ಡಿಟಿಎಸ್ ಚಿತ್ರವನ್ನೂ ನಿರ್ಮಾಣ ಮಾಡುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಡಿಟಿಎಸ್​ ಸಿನಿಮಾ ನಿರ್ಮಾಣವಾಗುತ್ತಿದೆ.

ತೆಲುಗಿನ ಸಾಯಿ ಕಾರ್ತಿಕ್ ಮತ್ತು ಶ್ರೀಕಾಂತ್ ದೀಪಾಲ ಡಿಟಿಎಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಅಭಿರಾಮ್ ಫಿಲ್ಲ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಚೇತನ್​ ಜತೆಗೆ ತೆಲುಗಿನ ಖ್ಯಾತ ಹಾಸ್ಯ ನಟ ಸುನೀಲ್​, ಒಟ್ಟಿಗೆ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಫೆ. 22ರಿಂದ ಚಿತ್ರೀಕರಣವೂ ಶುರುವಾಗಿದೆ.

ಪಕ್ಕಾ ಆ್ಯಕ್ಷನ್​ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ಸುನೀಲ್​ ಖಡಕ್ ಪೊಲೀಸ್ ಅಧಿಕಾರಿಯಾದರೆ, ಚೇತನ್​ ಅಷ್ಟೇ ಪ್ರಧಾನವಾದ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ನಾಲ್ಕು ಸಾಹಸ ದೃಶ್ಯಗಳಿರುವ ಈ ಸಿನಿಮಾದ ಬಹುತೇಕ ಶೂಟಿಂಗ್​ ದುಬೈ, ಥಾಯ್ಲೆಂಡ್​ ಸೇರಿ ಹಲವೆಡೆ ನಡೆಯಲಿದೆ. ಬೆಂಗಳೂರು ಮತ್ತು ಹೈದರಾಬಾದ್​ನಲ್ಲಿಯೂ ನಡೆಯಲಿದೆ.

ಇನ್ನು ಈ ಚಿತ್ರಕ್ಕೆ ಬಾಲಿವುಡ್​ ನಟಿಯರನ್ನು ಚಿತ್ರತಂಡ ಕರೆತಂದಿದೆ. ಡೋನಲ್ ಮತ್ತು ನತಾಶಾ ನಾಯಕಿಯರಾಗಿ ನಟಿಸುತ್ತಿದ್ದು, ಈಗಾಗಲೇ ಇವರೂ ಸಹ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. 24ರಂದು ಅಧಿಕೃತವಾಗಿ ಚಿತ್ರ ಸೆಟ್ಟೇರಲಿದ್ದು, ಸಿನಿಮಾ ಘೋಷಣೆ ಮಾಡಲಿದ್ದಾರೆ ನಿರ್ಮಾಪಕರು. ಇನ್ನುಳಿದಂತೆ ಕಬೀರ್ ಸಿಂಗ್, ಕೃಷ್ಣ ಮುರಳಿ, ಚರಣ್, ಶಕಲಕಾ ಶಂಕರ್, ಚಿತ್ರಂ ಶ್ರೀನು, ಗೆಟಪ್​ ಸೀನು, ರವಿ ವರ್ಮಾ, ರಾಕೇಂದು ಮೌಳಿ ತಾರಾಗಣದಲ್ಲಿದ್ದಾರೆ. ಸಾಯಿ ಕಾರ್ತಿಕ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಯುಎನ್ಐ ಎಸ್ಎ 1307

ಯುಎನ್ಐ ಎಸ್ಎ 1305

More News

ಮಾರ್ಚ್ 19ಕ್ಕೆ “ಒಂದು ಗಂಟೆಯ ಕಥೆ”

03 Mar 2021 | 4:18 PM

 Sharesee more..

ಈ ವಾರ ತೆರೆಗೆ "ಹೀರೋ"

03 Mar 2021 | 1:28 PM

 Sharesee more..
‘ಸೆಪ್ಟೆಂಬರ್ 10’ ಟೀಸರ್ ಬಿಡುಗಡೆ

‘ಸೆಪ್ಟೆಂಬರ್ 10’ ಟೀಸರ್ ಬಿಡುಗಡೆ

02 Mar 2021 | 9:05 PM

ಬೆಂಗಳೂರು, ಮಾ 02 (ಯುಎನ್‍ಐ) ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಸಾಯಿಪ್ರಕಾಶ್ ಮೊದಲಬಾರಿಗೆ ಸೋಷಿಯಲ್ ಮೆಸೇಜ್ ಇರುವ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.

 Sharesee more..