Monday, Jan 20 2020 | Time 20:08 Hrs(IST)
 • ಡೆತ್ ನೋಟ್ ಆರೋಪ ಆಧರಿಸಿ ವ್ಯಕ್ತಿಯನ್ನು ಅಪರಾಧಿಯೆಂದು ಪರಿಗಣಿಸಲಾಗದು: ಹೈಕೋರ್ಟ್
 • ಟಿಪ್ಪು ಜಯಂತಿ ರದ್ದತಿ ಆದೇಶ ಮರುಪರಿಶೀಲಿಸಲು ಕಾಲಾವಕಾಶ ಬೇಕು; ಸರ್ಕಾರ
 • 175 ಕಿ ಮೀ ವೇಗವಾಗಿ ಬೌಲಿಂಗ್ ಮಾಡಿದ 17ರ ಪ್ರಾಯದ ವೇಗಿ !
 • ಆಸ್ಟ್ರೇಲಿಯಾ ಓಪನ್: ಸೆರೇನಾ, ಜೊಕೊವಿಚ್, ಫೆಡರರ್ ಶುಭಾರಂಭ
 • ಪಕ್ಷ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯಲು ತೀವ್ರ ಪ್ರಯತ್ನ- ಜೆ ಪಿ ನಡ್ಡಾ
 • ಕೆಪಿಸಿಸಿ ಅಧ್ಯಕ್ಷರ ಶೀಘ್ರ ನೇಮಕಾತಿಗೆ ಹೈಕಮಾಂಡ್‍ಗೆ ಪತ್ರ: ಕಾರ್ಯಾಧ್ಯಕ್ಷರ ನೇಮಕಕ್ಕೆ ಪರಮೇಶ್ವರ್ ಆಕ್ಷೇಪ
 • ಸರ್ಕಾರ ಮತ್ತು ಪೊಲೀಸರು ಸೇರಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ :ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ
 • ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ನಳಿನ್ ಕುಮಾರ್ ಕಟೀಲ್ ಅಭಿನಂದನೆ
 • 1 12 ಕೋಟಿ ಅಂಕಪಟ್ಟಿ ಡಿಜಿಟಲ್ ಲಾಕರ್ ನಲ್ಲಿ : ಸುರೇಶ್ ಕುಮಾರ್
 • ಏಕದಿನ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ವಿರಾಟ್, ಬುಮ್ರಾ
 • ನಡ್ಡಾ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಾರೆ- ಮೋದಿ
 • ಸಾವಿನ ದವಡೆಯಲ್ಲಿ ಮಾಜಿ ಭೂಗತ ದೊರೆ ಮುತ್ತಪ್ಪ ರೈ :ಉಳಿದ ಬದಕು ಸಮಾಜಸೇವೆಗಾಗಿ ಮೀಸಲು
 • ಕೇಂದ್ರ ಬಜೆಟ್ ಹಿನ್ನೆಲೆ; ಹಣಕಾಸು ಸಚಿವಾಲಯದಿಂದ 'ಹಲ್ವಾ ' ಸಮಾರಂಭ
 • ಪರೀಕ್ಷಾ ಪೇ ಚೆರ್ಚಾ ವಿದ್ಯಾರ್ಥಿಗಳಿಗೆ ಪ್ರೇರಣೆ: ಸುರೇಶ್ ಕುಮಾರ್
 • ಅನಾರೋಗ್ಯ ಹಿನ್ನೆಲೆ: ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುತ್ತಪ್ಪ ರೈ
Health -Lifestyle Share

ದಕ್ಷಿಣ ಏಷ್ಯಾದಲ್ಲಿ ಹೆಚ್ಚಿದ ಹಸಿವಿನ ಪ್ರಮಾಣ : ವಿಶ್ವಸಂಸ್ಥೆ ವರದಿ ಬಹಿರಂಗ

ವಿಶ್ವಸಂಸ್ಥೆ, ಜುಲೈ 16 (ಯುಎನ್‌ಐ) ವಿಶ್ವದಾದ್ಯಂತ ಹಸಿವಿನ ಪ್ರಮಾಣ ಹೆಚ್ಚುತ್ತಿದೆ; 2018 ರಲ್ಲಿ 820 ದಶಲಕ್ಷಕ್ಕೂ ಹೆಚ್ಚು ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಬಹಿರಂಗಪಡಿಸಿದೆ; ದಕ್ಷಿಣ ಏಷ್ಯಾದಲ್ಲಿ ಅಪೌಷ್ಠಿಕತೆಯ ಪ್ರಮಾಣ ಉಳಿದ ಕಡೆಗಿಂತ ಹೆಚ್ಚಾಗಿದೆ ಎಂದು ಹೊಸ ಅಂಕಿ ಅಂಶಗಳು ತಿಳಿಸಿವೆ.

ದಶಕಗಳ ಸ್ಥಿರ ಕುಸಿತದ ನಂತರ, ಅಪೌಷ್ಟಿಕತೆಯ ಪ್ರಮಾಣ 2015 ರಿಂದ ಹೆಚ್ಚಾಗುತ್ತಾ ಬಂದಿದೆ ಎಂದು ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಸೋಮವಾರ ಪ್ರಕಟಿಸಲಾದ "ದಿ ಸ್ಟೇಟ್ ಆಫ್ ಫುಡ್ ಸೆಕ್ಯುರಿಟಿ ಅಂಡ್ ನ್ಯೂಟ್ರಿಷನ್ ಇನ್ ದಿ ವರ್ಲ್ಡ್ 2019" ವರದಿಯಲ್ಲಿ ಈ ಅಂಶಗಳು ಬಹಿರಂಗವಾಗಿವೆ.
ಕಳೆದ ಮೂರು ವರ್ಷಗಳಲ್ಲಿ ಈ ಅನುಪಾತವು ಶೇಕಡಾ 11 ಕ್ಕಿಂತ ಸ್ವಲ್ಪ ಮಟ್ಟಿಗೆ ಬದಲಾಗದೆ ಇದ್ದರೂ, ಹಸಿವಿನಿಂದ ಬಳಲುತ್ತಿರುವ ಜನರ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗಿದ್ದು, ಇದು 2018 ರಲ್ಲಿ 821.6 ದಶಲಕ್ಷ ತಲುಪಿದೆ ಎಂದೂ ವರದಿ ಹೇಳಿದೆ.

ಅಂಕಿ ಅಂಶದನ್ವಯ 2017 ರಲ್ಲಿ 811.7 ದಶಲಕ್ಷ; 2016 ರಲ್ಲಿ 796.5 ದಶಲಕ್ಷ ಮತ್ತು 2015 ರಲ್ಲಿ 785.4 ದಶಲಕ್ಷ ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದು 2018 ರಲ್ಲಿ ಇದರ ಪ್ರಮಾಣ ಪ್ರಮಾಣ ಇನ್ನೂ ಹೆಚ್ಚಾಗಿದೆ.

ಈ ವರದಿಯನ್ನು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ), ಯುಎನ್ ಮಕ್ಕಳ ನಿಧಿ (ಯುನಿಸೆಫ್), ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ ಮತ್ತು ವಿಶ್ವ ಆಹಾರ ಕಾರ್ಯಕ್ರಮದ ಅಂತಾರಾಷ್ಟ್ರೀಯ ನಿಧಿ ಸಿದ್ಧಪಡಿಸಿದೆ.

ಈ ಸಮಯದಲ್ಲಿ ಮಾತನಾಡಿದ ಎಫ್‌ಎಒ ಮಹಾನಿರ್ದೇಶಕ ಜೋಸ್ ಗ್ರಾಜಿಯಾನೊ ಡಾ ಸಿಲ್ವಾ, "ಮಧ್ಯಮ ಅಥವಾ ತೀವ್ರವಾದ ಆಹಾರ ಅಭದ್ರತೆಯನ್ನು ಅಳೆಯಲು ಈ ವರ್ಷ ಆಹಾರ ಅಸುರಕ್ಷಿತ ಅನುಭವ ಮಾಪನ (ಎಫ್‌ಐಇಎಸ್) ಎಂಬ ಹೊಸ ಮಾನದಂಡ ಬಳಸಲಾಗಿದೆ ಎಂದು ಅವರು ಹೇಳಿದರು.
ಏಷ್ಯಾದಲ್ಲಿ, ಕಳೆದ ಐದು ವರ್ಷಗಳಲ್ಲಿ ಹೆಚ್ಚಿನ ಪ್ರಗತಿಯ ಹೊರತಾಗಿಯೂ, ದಕ್ಷಿಣ ಏಷ್ಯಾದಲ್ಲಿ ಅಪೌಷ್ಠಿಕತೆ ಇನ್ನೂ ವ್ಯಾಪಕವಾಗಿದೆ. ದಕ್ಷಿಣ ಏಷ್ಯಾದಲ್ಲಿ ಪ್ರಮಾಣ ಶೇಕಡ 14.7 ರಷ್ಟಿದೆ. ನಂತರದ ಸ್ಥಾನದಲ್ಲಿರುವ ಪಶ್ಚಿಮ ಏಷ್ಯಾದಲ್ಲಿ ಹಸಿವಿನ ಪ್ರಮಾಣ ಶೇಕಡ 12.4 ರಷ್ಟಿದೆ ಎಂದೂ ವರದಿ ಹೇಳಿದೆ.
ಯುಎನ್ಐ ಕೆಎಸ್ಆರ್ ಜಿಎಸ್ಆರ್ 1202
More News
ವಾಗ್ಮೀ, ಕವಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪ್ರಧಾನಿಯಾಗಿ ಹತ್ತು ಹಲವು ಆಯಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ

ವಾಗ್ಮೀ, ಕವಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪ್ರಧಾನಿಯಾಗಿ ಹತ್ತು ಹಲವು ಆಯಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ

25 Dec 2019 | 4:06 PM

ನವದೆಹಲಿ, ಡಿ 25 [ಯುಎನ್ಐ] ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಬದುಕು, ಬರಹ, ರಾಜಕೀಯ ಜೀವನ ಕುರಿತು ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವರಾಗಿದ್ದ ಸಂದರ್ಭದಲ್ಲಿ ಈಗಿನ ಉಪ ರಾಷ್ಟ್ರಪತಿ ಎಂ.

 Sharesee more..

ಉತ್ತರ ಯೆಮೆನ್‍: ಹಂದಿ ಜ್ವರಕ್ಕೆ 8 ಜನರ ಸಾವು

19 Dec 2019 | 10:36 AM

 Sharesee more..