Saturday, May 30 2020 | Time 05:16 Hrs(IST)
  • ಅತೃಪ್ತರ ಮನವೊಲಿಕೆಗೆ ಮುಂದಾದ ಮುಖ್ಯಮಂತ್ರಿ : ಸಭೆ ನಡೆಸಿದ ಶಾಸಕರಿಗೆ ಸಿಎಂ ಬುಲಾವ್ !
  • ಅತೃಪ್ತರ ಮನವೊಲಿಕೆಗೆ ಮುಂದಾದ ಮುಖ್ಯಮಂತ್ರಿ : ಸಭೆ ನಡೆಸಿದ ಶಾಸಕರಿಗೆ ಸಿಎಂ ಬುಲಾವ್ !
International Share

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮನೆಯ ಮೇಲೆ ವಿಮಾನ ಪತನ; ಪೈಲಟ್ ಸಾವು

ಲಾಸ್ ಏಂಜಲೀಸ್, ನವೆಂಬರ್ 8 (ಕ್ಸಿನ್ಹುವಾ) ದಕ್ಷಿಣ ಕ್ಯಾಲಿಫೋರ್ನಿಯಾದ ಗುಡ್ಡಗಾಡು ಪ್ರದೇಶದ ಮನೆಯೊಂದರ ಮೇಲೆ ಸಣ್ಣ ವಿಮಾನ ಅಪಘಾತಕ್ಕೀಡಾದ ಪರಿಣಾಮ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯ ಮೇಲ್ಛಾವಣಿಗೆ ಬೆಂಕಿ ಹೊತ್ತಿಕೊಂಡಿದೆ. ವಿಮಾನದಲ್ಲಿದ್ದ ಏಕೈಕ ಪೈಲಟ್‌ಗೆ ಗಂಭೀರ ಗಾಯಗಳಾಗಿತ್ತು. ಬಳಿಕ ಅವರು ಮೃತಪಟ್ಟರು ಎಂದು ಸ್ಯಾನ್ ಬರ್ನಾರ್ಡಿನೊ ಕೌಂಟಿ ಅಗ್ನಿಶಾಮಕ ಇಲಾಖೆ ಅಗ್ನಿಶಾಮಕ ದಳದವರು ತಿಳಿಸಿದ್ದಾರೆ.
ಬೆಳಗ್ಗೆ ಸಣ್ಣ ವಿಮಾನವು ಕೇಬಲ್ ವಿಮಾನ ನಿಲ್ದಾಣದಿಂದ ಹೊರಟಿತ್ತು. ಬಳಿಕ ಮನೆಗೆ ನುಗ್ಗಿತ್ತು. ವಿಮಾನವು ಅತ್ಯಂತ ಕೆಳಹಂತದಲ್ಲಿ ಹಾರಾಟ ನಡೆಸುತ್ತಿದ್ದವು. ಆಕಾಶದಿಂದ ಧುಮುಕುವ ಮುನ್ನ ತೀಕ್ಷ್ಣವಾದ ಯು-ಟರ್ನ್ ಮಾಡಿದಾಗ ಅದು ಪತನಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮನೆಯೊಳಗಿದ್ದ ಒಬ್ಬ ವ್ಯಕ್ತಿ ಮತ್ತು ಅವನ ಮಗ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ಕೆಟಿಎಲ್‌ಎ 5 ಟಿವಿ ಕೇಂದ್ರ ವರದಿ ಮಾಡಿದೆ.
ಹಠಾತ್ ಸ್ಫೋಟದ ಶಬ್ಧ ಕೇಳಿತು, ಹೊರಗೆ ಬಂದು ನೋಡಿದಾಗ ವಿಮಾನ ಪತನಗೊಂಡಿರುವುದು ಕಂಡಿದೆ ಎಂದು ನೆರೆಯ ಮನೆಯವರು ತಿಳಿಸಿದ್ದಾರೆ.
ಪತನಗೊಂಡ ಸಣ್ಣ ವಿಮಾನವು ಏಕ-ಎಂಜಿನ್ ಸಿರಸ್ ಎಸ್ಆರ್ -22 ಎಂದು ತಿಳಿದುಬಂದಿದೆ. ಅಪಘಾತದ ಕಾರಣ ತಿಳಿದುಬಂದಿಲ್ಲ ಮತ್ತು ತನಿಖೆ ನಡೆಯುತ್ತಿದೆ.
ಯುಎನ್ಐ ಎಎಚ್ 925