Monday, Aug 2 2021 | Time 13:48 Hrs(IST)
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
Entertainment Share

ದೀಕ್ಷಿತ್ ಸೂಪರ್ ಆ್ಯಕ್ಷನ್ ಹೀರೋ : ನಿರ್ದೇಶಕ ಶ್ರೀವತ್ಸ ಶ್ಲಾಘನೆ

ಬೆಂಗಳೂರು, ಜುಲೈ 20(ಯುಎನ್ಐ) ರವಿ ಶ್ರೀವತ್ಸ ನಿರ್ದೆಶನದ ಡೆಡ್ಲಿ ಸೋಮ 3 ಚಿತ್ರೀಕರಣ ಕಳೆದ 8 ದಿನಗಳಿಂದ ಭರದಿಂದ ಸಾಗಿದೆ. ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಸೂಪರ್ ಆ್ಯಕ್ಷನ್ ಹೀರೋ ಪರಿಚಯವಾಗಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ, ಡೆಡ್ಲಿ 3 ನಾಯಕ ನಟ ದೀಕ್ಷಿತ್ ನನ್ನು ನಿರ್ದೇಶಕ ಶ್ರೀವತ್ಸ ಮತ್ತು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಹಾಡಿ ಹೊಗಳಿದರು. “ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡವೆಂದು ಸಾಹಸ ದೃಶ್ಯಗಳಿಗಾಗಿ ಡ್ಯೂಪ್ ಕಲಾವಿದರು ಸಿದ್ಧರಾಗಿದ್ದರು. ಆದರೆ ಬೈಕ್ ಮೇಲೆ ಡೈವ್ ಹೊಡೆಯುವ ದೃಶ್ಯ ಹಾಗೂ ಗ್ಲಾಸ್ ಬ್ರೇಕ್ ಮಾಡುವ ದೃಶ್ಯದಲ್ಲಿಯೂ ಸ್ವತಃ ದೀಕ್ಷಿತ್ ನಟಿಸಿದರು” ಎಂದರು.

“ಗ್ಲಾಸ್ ಬ್ರೇಕ್ ಮಾಡುವ ವೇಳೆ ದೀಕ್ಷಿತ್ ಮೂಗಿನ ಮೇಲ್ಭಾಗಕ್ಕೆ ಗಾಯವಾಗಿ 3 ಹೊಲಿಗೆ ಹಾಕಬೇಕಾದ ಪರಿಸ್ಥಿತಿ ಎದುರಾಯಿತು. ಚಿಕಿತ್ಸೆ ಪಡೆದ ಬಳಿಕ ವಿಶ್ರಾಂತಿಯನ್ನೂ ತೆಗೆದುಕೊಳ್ಳದೆ ನೇರವಾಗಿ ಚಿತ್ರೀಕರಣಕ್ಕೆ ಹಾಜರಾದರು. ಸ್ಯಾಂಡಲ್ ವುಡ್ ನಲ್ಲಿ ಎಲ್ಲ ನಾಯಕ ನಟರೂ ಸಾಹಸ ದೃಶ್ಯಗಳಲ್ಲಿ ಚೆನ್ನಾಗಿಯೇ ನಟಿಸುತ್ತಾರೆ. ಆದರೆ ನಾನು ಕಂಡ ಇತ್ತೀಚಿನ ನಟರಲ್ಲಿ ವಿನೋದ್ ಪ್ರಭಾಕರ್ ಬಿಟ್ಟರೆ ದೀಕ್ಷಿತ್ ಸೂಪರ್” ಎಂದು ದೀಕ್ಷಿತ್ ಕಾರ್ಯವೈಖರಿಗೆ ಶ್ರೀವತ್ಸ ಮೆಚ್ಚುಗೆ ವ್ಯಕ್ತಪಡಿಸಿದರು.
ಡೆಡ್ಲಿ 3 ಚಿತ್ರವು ಡೆಡ್ಲಿ ಸೋಮ ಚಿತ್ರದ ಮುಂದುವರಿದ ಸರಣಿಯಾಗಿದ್ದು, ನಾಯಕ ನಟಿಯಾಗಿ ಪದವಿ ಪೂರ್ವ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಯಶಾ ಶ್ರೀನಿವಾಸ್ ಅಭಿನಯಿಸುತ್ತಿದ್ದಾರೆ.
ಯುಎನ್ಐ ಎಸ್ಎ 1720
There is no row at position 0.