Friday, Sep 18 2020 | Time 15:39 Hrs(IST)
 • ಐಪಿಎಲ್‌ 2020: ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್‌ ಕಿಂಗ್ಸ್ ನಡುವೆ ಆರಂಭಿಕ ಪಂದ್ಯ ನಾಳೆ
 • ಕೃಷಿ ವಿಧೇಯಕಗಳಿಗೆ ಲೋಕಸಭೆ ಅಂಗೀಕಾರ ಐತಿಹಾಸಿಕ :ಪ್ರಧಾನಿ ಮೋದಿ
 • ಐಪಿಎಲ್ 2020: ರಾಯಲ್‌ ಚಾಲೆಂಜರ್ಸ್‌ ನೂತನ ಹಾಡು ಬಿಡುಗಡೆ
 • ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ : ವಿವಿಧ ಯೋಜನೆಗಳಿಗೆ ಅನುಮೋದನೆ ಕೋರಿ ಮನವಿ
 • ಗೋಂದಿ ಯೋಜನೆ ಅಡಿ ಕೆರೆಗಳಿಗೆ ನೀರು: ಸಚಿವ ಸಿ ಟಿ ರವಿ
 • ರೈತರು ಪಂಜಾಬ್ ನ ಆತ್ಮ, ಅದರ ಮೇಲಿನ ದಾಳಿ ಸಹಿಸಲು ಸಾಧ್ಯವಿಲ್ಲ; ನವಜ್ಯೋತ್ ಸಿಂಗ್ ಸಿಧು
 • ಈ ವರ್ಷದ ಐಪಿಎಲ್‌ ಟೂರ್ನಿ ತುಂಬಾ ವಿಶೇಷತೆಯಿಂದ ಕೂಡಿದೆ: ವಿರೇಂದ್ರ ಸೆಹ್ವಾಗ್‌
 • ಮುಂಬೈ ಇಂಡಿಯನ್ಸ್‌ ತಂಡದ ಓಪನರ್ಸ್‌ ಯಾರೆಂದು ಬಹಿರಂಗ ಪಡಿಸಿದ ಜಯವರ್ಧನೆ
 • ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್
 • ನೆರೆ ಪರಿಹಾರ ಕೈಗೊಳ್ಳಲು ಹೆಚ್ಚಿನ ನೆರವು ನೀಡಿ: ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಮನವಿ
 • ರೈಲ್ವೆ ಖಾಸಗೀಕರಣ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ: ಪಿಯೂಷ್ ಗೋಯಲ್
 • ಅಶೋಕ್ ಗಸ್ತಿ ಬದುಕಿದ್ದಾಗಲೇ ಸಂತಾಪ ಸೂಚಿಸಿದ್ದೆ: ರಾಜ್ಯಸಭೆಯಲ್ಲಿ ಎಂ ವೆಂಕಯ್ಯ ನಾಯ್ಡು
 • ಕೆಆರ್ ಎಸ್ ಪಕ್ಷದ ‘ಚಲಿಸು ಕರ್ನಾಟಕ’ ಸೈಕಲ್ ಯಾತ್ರೆ ತಾತ್ಕಾಲಿಕ ಸ್ಥಗಿತ
 • ರೈತರನ್ನು ತಪ್ಪು ದಾರಿಗೆಎಳೆಯುತ್ತಿರುವ ವಿಪಕ್ಷಗಳು: ಪ್ರಧಾನಿ ಕಿಡಿ
 • ಸೆ‌ 21ರಿಂದ ಶಾಲೆ ತೆರೆಯಲಿದೆ; ತರಗತಿ ಪ್ರಾರಂಭ ಇಲ್ಲ; ಸಚಿವ ಎಸ್ ಸುರೇಶ್ ಕುಮಾರ್
business economy Share

ದೇಶದಲ್ಲೆ ಪ್ರಥಮ ಬಾರಿಗೆ ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಹೊಂದಿದ ಎಂಜಿ ಗ್ಲೋಸ್ಟರ್‌

ಬೆಂಗಳೂರು, ಸೆ.15 (ಯುಎನ್ಐ) ಎಂಜಿ ಮೋಟಾರ್‌ ಇಂಡಿಯಾ ಸಂಸ್ಥೆಯು ದೇಶದಲ್ಲೆ ಪ್ರಥಮ ಬಾರಿಗೆ ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಹೊಂದಿದ ಎಂಜಿ ಗ್ಲೋಸ್ಟರ್‌ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ.
ಸಂಪರ್ಕಿತ ಕಾರು ತಂತ್ರಜ್ಞಾನದ ಭವಿಷ್ಯವನ್ನು ಗ್ರಾಹಕರಿಗೆ ತರಲು ಎಂಜಿ ಮೋಟಾರ್ ಇಂಡಿಯಾ ನಿರಂತರವಾಗಿ ಪ್ರಯತ್ನಿಸುತ್ತಿದೆ. ಎಂಜಿ ಹೊಸ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಸ್ಮಾರ್ಟ್ ಚಲನಶೀಲತೆಯ ಹೊಸ ತರಂಗವನ್ನು ತರಲು ಎಂಜಿ ಮೋಟಾರ್‌ ಇಂಡಿಯಾ ಉತ್ಸುಕವಾಗಿದೆ.
ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಎನ್ನುವುದು ಸಕ್ರಿಯ ಸುರಕ್ಷತಾ ವ್ಯವಸ್ಥೆಯಾಗಿದ್ದು ವಾಹನವನ್ನು ನಿಧಾನಗೊಳಿಸುವ ಮೂಲಕ ಮತ್ತು ಸುರಕ್ಷಿತ ದೂರವನ್ನು ಕಾಪಾಡಿಕೊಳ್ಳುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಎಂಜಿ ಗ್ಲೋಸ್ಟರ್‌ನ ಮತ್ತೊಂದು ಹೈಟೆಕ್ ಸ್ವಾಯತ್ತ ವೈಶಿಷ್ಟ್ಯವಾದ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಬಹಿರಂಗಗೊಳಿಸಲಾಗಿದೆ. ಎಂಜಿ ಗ್ಲೋಸ್ಟರ್ ಬಿಎಂಡಬ್ಲ್ಯು ಮತ್ತು ವೋಲ್ವೋ ಕಾರುಗಳಂತಹ ಬುದ್ಧಿವಂತ ವೈಶಿಷ್ಟ್ಯಗಳನ್ನು ಹೊಂದಿದೆ
ಎಂಜಿ ಗ್ಲೋಸ್ಟರ್‌ನ ಸ್ವಾಯತ್ತ ವೈಶಿಷ್ಟ್ಯಗಳಲ್ಲಿ ಫ್ರಂಟ್ ಕೊಲಿಷನ್ ವಾರ್ನಿಂಗ್ (ಎಫ್‌ಸಿಡಬ್ಲ್ಯೂ), ಬ್ಲೈಂಡ್ ಸ್ಪಾಟ್ ಮಾನಿಟರ್ (ಬಿಎಸ್‌ಎಂ) ಮತ್ತು ಆಟೋ ಪಾರ್ಕ್ ಅಸಿಸ್ಟ್ (ಎಪಿಎ) ಮತ್ತು ಲೇನ್ ಡಿಪಾರ್ಚರ್ ವಾರ್ನಿಂಗ್ (ಎಲ್‌ಡಿಡಬ್ಲ್ಯೂ) ಸೇರಿವೆ. ಫೆಬ್ರವರಿಯಲ್ಲಿ ಆಟೋ ಎಕ್ಸ್ ಪೋ 2020 ರಲ್ಲಿ ಈ ಕಾರನ್ನು ಮೊದಲು ಪ್ರದರ್ಶಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಯುಎನ್ಐ ಎಎಚ್ 1616
More News
ಚಿಲ್ಲರೆ ಮಾರಾಟಗಾರರಿಗಾಗಿಯೇ ಸಂಬಂಧಂ 2020 ಡಿಜಿಟಲ್ ರೂಪದಲ್ಲಿ ಆರಂಭ

ಚಿಲ್ಲರೆ ಮಾರಾಟಗಾರರಿಗಾಗಿಯೇ ಸಂಬಂಧಂ 2020 ಡಿಜಿಟಲ್ ರೂಪದಲ್ಲಿ ಆರಂಭ

16 Sep 2020 | 9:09 PM

ಮುಂಬೈ, ಸೆ. 16 (ಯುಎನ್ಐ) ಮುಂಬರುವ ಹಬ್ಬದ ಋತುವಿಗೆ ಮನೆ ಅಥವಾ ಕಚೇರಿಗಳಿಂದಲೇ ಸುರಕ್ಷಿತವಾಗಿ ಆನ್ ಲೈನ್ ಖರೀದಿ ಮಾಡಲು ಅತ್ಯುತ್ತಮ ಅವಕಾಶ ಇಲ್ಲಿದೆ. ಇದು ರೀಟೇಲ್ ಮಾರಾಟಗಾರರಿಗೆ ಮಾತ್ರ ಆಯೋಜಿಸಲಿರುವ ಟ್ರೇಡ್ ಶೋ. ಕೊರೊನಾವನ್ನು ಗಮನದಲ್ಲಿಟ್ಟುಕೊಂಡು, AJIO ಬಿಜಿನೆಸ್ ನಿಂದ ವಾರ್ಷಿಕ ಮೆಗಾ ಟ್ರೇಡ್ ಶೋ ನಡೆಸಲಿದೆ.

 Sharesee more..