Friday, Dec 13 2019 | Time 02:45 Hrs(IST)
Entertainment Share

ದೋಸ್ತಾನಾಕ್ಕಿಂತ ಭಿನ್ನವಾದ ದೋಸ್ತಾನಾ-2: ಕರಣ್

ಮುಂಬೈ, ಡಿ 2 (ಯುಎನ್ಐ) ತಮ್ಮ ಸೂಪರ್ ಹಿಟ್ ದೋಸ್ತಾನಾ ಗಿಂತಲೂ ದೋಸ್ತಾನಾ-2 ಚಿತ್ರ ವಿಭಿನ್ನವಾಗಿರಲಿದೆ ಎಂದು ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಕರಣ್ ಜೋಹರ್, 2008ರಲ್ಲಿ ತೆರೆಕಂಡಿದ್ದ ದೋಸ್ತಾನಾ ಚಿತ್ರದ ಅವತರಣಿಕೆ ಚಿತ್ರ ಹೊರತರುವಲ್ಲಿ ಮಗ್ನರಾಗಿದ್ದಾರೆ.
ದೋಸ್ತಾನಾ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ, ನಟರಾದ ಜಾನ್ ಅಬ್ರಾಹಿಂ , ಅಭಿಷೇಕ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಇತ್ತೀಚೆಗಷ್ಟೇ ದೋಸ್ತಾನಾ-2 ಚಿತ್ರದ ಚಿತ್ರೀಕರಣ ಪಂಜಾಬ್ ನಲ್ಲಿ ನಡೆದಿತ್ತು.
ದೋಸ್ತಾನಾ - 2 ಚಿತ್ರದ ಕುರಿತು ಮಾತನಾಡಿದ ಕರಣ್, ಒಂದು ದೋಸ್ತಾನಾವು ಇನ್ನೊಂದು ದೋಸ್ತಾನಾದ ಕಥೆಯಾಗಿದೆ. 2008ರಲ್ಲಿ ದೋಸ್ತಾನಾ ಬಿಡುಗಡೆಗೊಂಡಿದ್ದು, 2020ರಲ್ಲಿ ದೋಸ್ತಾನಾ -2 ಚಿತ್ರ ಬಿಡುಗಡೆಗೊಳ್ಳಲಿದೆ ಎಂದರು.
ಚಿತ್ರವನ್ನು ನೈಜವಾಗಿ ತೋರಿಸಲು ಪ್ರಯತ್ನಿಸುತ್ತಿದ್ದು, ನಾಟಕೀಯತೆಗೆ ಆಸ್ಪದ ಇಲ್ಲ ಎಂದು ಮಾಹಿತಿ ನೀಡಿದರು.
ಯುಎನ್ಐ ಪಿಕೆ ವಿಎನ್ 1801
More News

ಮೇಕ್ ಅಪ್ ಕಂಡು ದಂಗಾದ ದೀಪಿಕಾ

12 Dec 2019 | 6:34 PM

 Sharesee more..

ಸನ್ನಿ ಡಿಯೋಲ್ ಆದ ಸನ್ನಿ!

12 Dec 2019 | 6:31 PM

 Sharesee more..
‘ಒಡೆಯ’ನ ದರ್ಶನಕ್ಕೆ ಜನಸಾಗರ: ಡಿ ಬಾಸ್ ಅಭಿಮಾನಿಗಳ ದಿಲ್‌ಖುಷ್

‘ಒಡೆಯ’ನ ದರ್ಶನಕ್ಕೆ ಜನಸಾಗರ: ಡಿ ಬಾಸ್ ಅಭಿಮಾನಿಗಳ ದಿಲ್‌ಖುಷ್

12 Dec 2019 | 6:25 PM

ಬೆಂಗಳೂರು, ಡಿ ೧೨ (ಯುಎನ್‌ಐ) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ’ಒಡೆಯ’ ಚಿತ್ರ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿದೆ ಚಿತ್ರಮಂದಿರಗಳತ್ತ ಜನಸಾಗರವೇ ಹರಿದುಬಂದಿದೆ

 Sharesee more..

ರಜಿನಿಕಾಂತ್ @೬೯ : ಶುಭ ಕೋರಿದ ತೆಂಡೂಲ್ಕರ್

12 Dec 2019 | 4:36 PM

 Sharesee more..
ಕಥೆಗಾರನ ಸುತ್ತ 'ಸಿಲ್ವರ್ ಫಿಶ್’

ಕಥೆಗಾರನ ಸುತ್ತ 'ಸಿಲ್ವರ್ ಫಿಶ್’

11 Dec 2019 | 5:38 PM

ಬೆಂಗಳೂರು, ಡಿ ೧೦ (ಯುಎನ್‌ಐ) ಕಥೆಗಾರನೊಬ್ಬನ ದ್ವಿಮುಖ ವರ್ತನೆಯ ಮೇಲೆ ಬೆಳಕು ಚೆಲ್ಲುವ ಚಿತ್ರ ’ಸಿಲ್ವರ್ ಫಿಶ್’ ತೆರೆಗೆ ಬರಲು ಸಜ್ಜಾಗಿದೆ.

 Sharesee more..