Tuesday, Oct 22 2019 | Time 09:44 Hrs(IST)
  • ಸಂಸದ ಜಲೀಲ್ ಮೇಲೆ ಹಲ್ಲೆಗೆ ಯತ್ನ: ಎನ್‌ಸಿಪಿ ಅಭ್ಯರ್ಥಿ ಸೇರಿ ಮೂವರ ಬಂಧನ
  • ಇಂದು ಬ್ಯಾಂಕ್ ನೌಕರರ ಮುಷ್ಕರ; ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ
  • ಇಸ್ಲಾಮಿಕ್‍ ಸ್ಟೇಟ್‍ ಉಗ್ರರ ದಾಳಿ: ನಾಲ್ವರು ಪೊಲೀಸರು ಬಲಿ
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Entertainment Share

ನಗೋಕೆ ಸಿಗಲಿದೆ ಇನ್ನೊಂದು ಚಾನ್ಸ್: ಜಗ್ಗೇಶ್, ಗುರುಪ್ರಸಾದ್ ಜೋಡಿಯಿಂದ 'ರಂಗನಾಯಕ’

ಬೆಂಗಳೂರು, ಅ ೦೯(ಯುಎನ್) ಕಥೆ ಇನ್ನೂ ರೆಡಿಯಿಲ್ಲ, ಪಾತ್ರಧಾರಿಗಳು ಆಯ್ಕೆಯಾಗಿಲ್ಲ, ಆದರೆ ಟೀಸರ್ ಮಾತ್ರ ಹೊರಬಂದಿದೆ ಚಿತ್ರ ಯಾವುದು ಗೊತ್ತಾ? ನವರಸ ನಾಯಕ ಜಗ್ಗೇಶ್ ಮಠ ಗುರುಪ್ರಸಾದ್ ಕಾಂಬಿನೇಷನ್ನಿನ ’ರಂಗನಾಯಕ’ ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ಹಾಗೂ ಗುರುಪ್ರಸಾದ್ ಹೇಳಿಕೊಂಡಂತೆ ವಿಜಯದಶಮಿಯಿಂದು ’ರಂಗನಾಯಕ’ಟೀಸರ್ ಬಿಡುಗಡೆಗೊಳಿಸಿದ್ದು, ಮತ್ತೊಂದು ನಗಿಸೋ ಸಿನಿಮಾ ವೀಕ್ಷಿಸುವ ಅವಕಾಶ ಸಿಗಲಿದೆ ಎಂಬ ಭರವಸೆಯನ್ನು ಪ್ರೇಕ್ಷಕರಲ್ಲಿ ಮೂಡಿಸಿದ್ದಾರೆ ಇದು ಅಖಂಡ ಹತ್ತು ವರ್ಷಗಳ ನಂತರದ ಪುನರ್ಮಿಲನ. ಮಠ ಮತ್ತು ಎದ್ದೇಳು ಮಂಜುನಾಥದಂಥಾ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು ಗುರುಪ್ರಸಾದ್ ಮತ್ತು ಜಗ್ಗೇಶ್ ಜೋಡಿ. ಈ ಎರಡು ಚಿತ್ರಗಳು ಅದೆಂಥಾ ಕ್ರೇಜ್ ಸೃಷ್ಟಿಸಿದ್ದವೆಂದರೆ, ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮತ್ತೊಂದು ಚಿತ್ರಕ್ಕಾಗಿ ಪ್ರೇಕ್ಷಕರೇ ಬೇಡಿಕೆ ಇಡಲಾರಂಭಿಸಿದ್ದರು ಆದರೆ ಈ ಎರಡು ಚಿತ್ರಗಳ ನಂತರದಲ್ಲಿ ಗುರು ಮತ್ತು ಜಗ್ಗೇಶ್ ನಡುವೆ ವೈಮನಸ್ಯ ಹೊಗೆಯಾಡಿತ್ತೆಂಬ ರೂಮರುಗಳೂ ತೇಲಿ ಬರುತ್ತಾ ಹತ್ತು ವರ್ಷಗಳ ಕಾಲ ಇಬ್ಬರೂ ದೂರಾಗಿದ್ದರು ಇದೀಗ ರಂಗನಾಯಕ ಮೂಲಕ ಅವರು ಮತ್ತೆ ಒಂದಾಗಿರೋದೇ ಪ್ರೇಕ್ಷಕರಲ್ಲಿ ಖುಷಿ ಮೂಡಿಸಿದೆ ರಂಗನಾಯಕ ಮೂಲಕ ಈ ಜೋಡಿ ಮತ್ತೊಂದು ಸೂಪರ್ ಹಿಟ್ ಚಿತ್ರ ಕೊಡುವ ಎಲ್ಲ ಲಕ್ಷಣಗಳೂ ಆರಂಭಿಕವಾಗಿಯೇ ಕಾಣಿಸಲಾರಂಭಿಸಿದೆ. ಅಂದಹಾಗೆ ಇದು ಸಂಪೂರ್ಣವಾಗಿ ಮನೋರಂಜನಾತ್ಮಕ ಚಿತ್ರ. ಗುರು ಮತ್ತು ಜಗ್ಗೇಶ್ ಜೊತೆಯಾಗುತ್ತಾರೆಂದರೆ ಹೊಟ್ಟೆ ಹುಣ್ಣಾಗುವಂತೆ ನಗಿಸೋ ನಿರೀಕ್ಷೆ ಎಲ್ಲರಲ್ಲಿಯೂ ಮೂಡಿಕೊಳ್ಳುತ್ತೆ. ಅದಕ್ಕೆ ತಕ್ಕುದಾದ ಕಥೆಯನ್ನೇ ಗುರುಪ್ರಸಾದ್ ಕೂಡಾ ಹೊಸೆದಿದ್ದಾರಂತೆ. ಅದರ ಗುಣ ಲಕ್ಷಣಗಳು ಟೀಸರ್ ಮೂಲಕ ಜಾಹೀರಾಗಿದೆ. ಯುಎನ್‌ಐ ಎಸ್‌ಎ ವಿಎನ್ ೧೭೩೮