Tuesday, Sep 29 2020 | Time 13:04 Hrs(IST)
 • ಬಾಬ್ರಿ ಮಸೀದಿ ದ್ವಂಸ ಪ್ರಕರಣ: ನಾಳೆ ಅಂತಿಮ ತೀರ್ಪು, ಭದ್ರತೆ ಬಿಗಿ ಗೊಳಿಸಲು ರಾಜ್ಯಗಳಿಗೆ ಕೇಂದ್ರ ಆದೇಶ
 • ಮೂವರು ದರೋಡೆಕೋರರು ಬಂಧನ
 • ದೇಶದಲ್ಲಿ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ ಅಮ್ನೆಸ್ಟಿ ಇಂಟರ್ ನ್ಯಾಷನಲ್
 • ಸೂಪರ್‌ ಓವರ್‌ನಲ್ಲಿ ಯಾರ್ಕರ್‌, ನಿಧಾನಗತಿಯ ಎಸೆತಗಳು ನನ್ನ ತಂತ್ರವಾಗಿತ್ತು: ನವದೀಪ್‌ ಸೈನಿ
 • ಪೂಂಚ್‌ನಲ್ಲಿ ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ
 • ಇಶಾನ್‌ ಕಿಶಾನ್‌ ಸೂಪರ್‌ ಓವರ್‌ನಲ್ಲಿ ಫ್ರೆಶ್‌ ಆಗಿ ಕಾಣಿಸಲಿಲ್ಲ: ರೋಹಿತ್‌ ಶರ್ಮಾ
 • ಸುಶಾಂತ್ ಸಾವಿನ ಕುರಿತು ಏಮ್ಸ್ ಮಹತ್ವದ ವರದಿ
 • ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ಸುಖಬೀರ್
 • ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಯುವತಿ ಸಾವು
 • ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್
 • ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ
 • ವಿಶ್ವ ಹೃದಯ ದಿನ: ಹೃದಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದ ಸಲಹೆ
 • ಜಾಗತಿಕ ಕೋವಿಡ್ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು 'ಸಂಕಟ ಮೈಲಿಗಲ್ಲು'- ವಿಶ್ವಸಂಸ್ಥೆ ಮುಖ್ಯಸ್ಥ ಗುಟೇರಸ್
 • ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಉಮಾ ಭಾರತಿ
 • ನಮಾಮಿ ಗಂಗೆ : 6 ಬೃಹತ್ ಯೋಜನೆಗಳಿಗೆ ಮೋದಿ ಚಾಲನೆ
Entertainment Share

ನನ್ನ ಸ್ಥಾನದಲ್ಲಿ ಶ್ವೇತಾ ಅಥವಾ ಅಭಿಷೇಕ್ ಇದ್ದಿದ್ದರೆ ಹೀಗೇ ಮಾತನಾಡುತ್ತಿದ್ದಿರಾ: ಜಯಾ ಬಚ್ಚನ್ ಗೆ ಕಂಗನಾ ಕುಟುಕು

ನವದೆಹಲಿ, ಸ 15(ಯುಎನ್‍ಐ) ಬಾಲಿವುಡ್ ನಲ್ಲಿ ಮಾದಕ ವ್ಯಸನದ ನಂಟು ಕುರಿತು, “ಕೆಲವು ನಟ ನಟಿಯರ ನಡೆಯಿಂದಾಗಿ ಇಡೀ ಚಿತ್ರರಂಗ ಕಳಂಕಿತವಾಗಿದೆ” ಎಂದು ಸಂಸತ್ತಿನಲ್ಲಿ ಸಮಾಜವಾದಿ ಪಕ್ಷದ ರಾಜ್ಯಸಾಭಾ ಸದಸ್ಯೆ ಜಯಾ ಬಚ್ಚನ್ ಮಾಡಿರುವ ಆರೋಪಕ್ಕೆ ನಟಿ ಕಂಗನಾ ರನೌತ್ ತಿರುಗೇಟು ನೀಡಿದ್ದಾರೆ.

“ನನ್ನ ಸ್ಥಾನದಲ್ಲಿ ನಿಮ್ಮ ಮಗ ಅಭಿಷೇಕ್​ ಅಥವಾ ಮಗಳು ಶ್ವೇತಾ ಇದಿದ್ದರೂ ಇದೇ ರೀತಿ ಮಾತನಾಡುತ್ತಿದ್ದಿರಾ. ಟೀನೇಜ್​ನಲ್ಲಿದ್ದಾಗ ಡ್ರಗ್ಸ್ ಕೊಟ್ಟು, ಹಲ್ಲೆ ಮಾಡಿ ಲೈಂಗಿಕ ದೌರ್ಜನ ಮಾಡಿದ್ದರೆ ಹೀಗೆ ಹೇಳುತ್ತಿದ್ರಾ ಜಯಾ ಅವರೇ” ಎಂದು ಪ್ರಶ್ನಿಸಿದ್ದಾರೆ.

ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಜಯಾ ಬಚ್ಚನ್ ಅವರು ಬಾಲಿವುಡ್‌ನಲ್ಲಿ ಮಾದಕ ವ್ಯಸನದ ಕುರಿತು ಮಾತನಾಡುತ್ತಾ, ಚಿತ್ರರಂಗವನ್ನು ಕೆಣಕಲು ಸಂಚು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
"ಕೆಲವು ಜನರು ಇರುವುದರಿಂದ, ನೀವು ಇಡೀ ಉದ್ಯಮದ ಚಿತ್ರಣವನ್ನು ಕೆಡಿಸಲು ಸಾಧ್ಯವಿಲ್ಲ. ನಿನ್ನೆ ಲೋಕಸಭೆಯ ನಮ್ಮ ಸದಸ್ಯರೊಬ್ಬರು ಚಲನಚಿತ್ರೋದ್ಯಮದವರಾಗಿದ್ದಾರೆ ಎಂದು ನಾನು ನಾಚಿಕೆಪಡುತ್ತೇನೆ. ಇದು ನಾಚಿಕೆಗೇಡಿನ ಸಂಗತಿ" ಎಂದಿದ್ದಾರೆ.

"ಚಲನಚಿತ್ರದಂತಹ ಮನರಂಜನಾ ಉದ್ಯಮದಲ್ಲಿ ತಮ್ಮ ಹೆಸರನ್ನು ಮಾಡಿದ ಜನರು ಇದನ್ನು ಕೊಳಚೆ ಎಂದು ಕರೆದಿರುವುದನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಈ ರೀತಿಯ ಭಾಷೆಯನ್ನು ಬಳಸದಂತೆ ಸರ್ಕಾರ ಅಂತಹ ಜನರಿಗೆ ಹೇಳುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಆಶಿಸಿದ್ದಾರೆ.

ಇದಕ್ಕೆ ಕಿಡಿಕಾರಿರುವ ಕಂಗನಾ ಸರಣಿ ಟ್ವೀಟ್ ಗಳನ್ನ ಮಾಡಿದ್ದು, “ನನ್ನ ಸ್ಥಾನದಲ್ಲಿ ನಿಮ್ಮ ಮಗಳು ಶ್ವೇತಾ ಇದ್ದಿದ್ದರೆ, ಹದಿಹರೆಯದಲ್ಲಿ ಥಳಿಸಿ, ಮಾದಕ ದ್ರವ್ಯ ಮತ್ತು ಕಿರುಕುಳ ನೀಡಲಾಗಿದ್ದರೆ ನೀವು ಅದೇ ಮಾತನ್ನು ಹೇಳುತ್ತೀರಾ? ಅಭಿಷೇಕ್ ಗೆ ನಿರಂತರವಾಗಿ ಬೆದರಿಸುವಿಕೆ ಮತ್ತು ಕಿರುಕುಳದ ಬಗ್ಗೆ ದೂರು ನೀಡಿದರೆ ಮತ್ತು ಒಂದು ದಿನ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ ಹೀಗೇ ಹೇಳುತ್ತೀರಾ? ನಮಗೂ ಸಹಾನುಭೂತಿ ತೋರಿಸಿ” ಎಂದು ಮನವಿ ಮಾಡಿದ್ದಾರೆ.
"ದೇಶದ ಅನೇಕ ಉತ್ಪಾದನಾ ಸಂಸ್ಥೆಗಳಲ್ಲಿ ಮಹಿಳೆಯರು ದೂರು ನೀಡಲು ಸರಿಯಾದ ಮಾನವ ಸಂಪನ್ಮೂಲ ಇಲಾಖೆಗಳಿಲ್ಲ, ಪ್ರತಿದಿನ ತಮ್ಮ ಪ್ರಾಣವನ್ನೇ ಪಣಕ್ಕಿಡುವವರಿಗೆ ಸುರಕ್ಷತೆ ಅಥವಾ ವಿಮೆ ಇಲ್ಲ, 8 ಗಂಟೆಗಳ ಶಿಫ್ಟ್ ನಿಯಮಗಳಿಲ್ಲ" ಎಂದು ಕಂಗನಾ ಹೇಳಿದ್ದಾರೆ.
ಕಲಾವಿದರಿಗಾಗಿ ಕೇಂದ್ರ ಸರ್ಕಾರದಿಂದ ನಾನು ಬಯಸುವ ಸುಧಾರಣೆಗಳ ಸಂಪೂರ್ಣ ಪಟ್ಟಿ ನನ್ನ ಬಳಿ ಇದೆ. ಪ್ರಧಾನಿಯವರನ್ನು ಭೇಟಿಯಾದಾಗ ಈ ಕುರಿತು ಚರ್ಚಿಸುತ್ತೇನೆ " ಎಂದಿದ್ದಾರೆ.

ಯುಎನ್‍ಐ ಎಸ್‍ಎ 1741
More News
'ಕಾಲಚಕ್ರ' 4 ಗೆಟಪ್ ನಲ್ಲಿ ವಸಿಷ್ಠ ಸಿಂಹ: ಸದ್ಯದಲ್ಲೇ ಟೀಸರ್ ಬಿಡುಗಡೆ

'ಕಾಲಚಕ್ರ' 4 ಗೆಟಪ್ ನಲ್ಲಿ ವಸಿಷ್ಠ ಸಿಂಹ: ಸದ್ಯದಲ್ಲೇ ಟೀಸರ್ ಬಿಡುಗಡೆ

28 Sep 2020 | 8:56 PM

ಬೆಂಗಳೂರು, ಸೆ 27 (ಯುಎನ್ಐ) ವಸಿಷ್ಠ ಎನ್ ಸಿಂಹ ನಾಯಕರಾಗಿ ನಟಿಸಿರುವ, ರಶ್ಮಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಕಾಲಚಕ್ರ' ಚಿತ್ರದ ವಿಭಿನ್ನ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

 Sharesee more..
ಮಂಜುನಾಥನ ಸನ್ನಿಧಿಯಲ್ಲಿ 'ಶಂಭೋ ಶಿವ ಶಂಕರ' ಚಿತ್ರಕ್ಕೆ ಚಾಲನೆ

ಮಂಜುನಾಥನ ಸನ್ನಿಧಿಯಲ್ಲಿ 'ಶಂಭೋ ಶಿವ ಶಂಕರ' ಚಿತ್ರಕ್ಕೆ ಚಾಲನೆ

28 Sep 2020 | 8:53 PM

ಬೆಂಗಳೂರು, ಸೆ 28 (ಯುಎನ್ಐ) ಅಘನ್ಯ ಪಿಕ್ಚರ್ಸ್ ಅವರ 'ಶಂಭೋ ಶಿವ ಶಂಕರ' ಚಿತ್ರದ ಮುಹೂರ್ತ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ.

 Sharesee more..

ಕುಮಾರ್ ಬಂಗಾರಪ್ಪ ಜನ್ಮದಿನ : ದಚ್ಚು ಹಾರೈಕೆ

28 Sep 2020 | 3:53 PM

 Sharesee more..