Tuesday, Jun 25 2019 | Time 13:00 Hrs(IST)
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
 • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
 • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
 • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
 • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
 • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
 • ತುರ್ತುಪರಿಸ್ಥಿತಿ ವಿರೋಧಿಸಿದ ನಾಗರಿಕರು, ನಾಯಕರಿಗೆ ಪ್ರಧಾನಿ, ಅಮಿತ್ ಶಾ ಗೌರವ
 • ಇಂದಿನಿಂದ ಮೈಕ್ ಪೊಂಪಿಯೋ ಮೂರು ದಿನಗಳ ಭಾರತ ಭೇಟಿ
Health -Lifestyle Share

ನಿಫಾ ಸೋಂಕು ಹಿನ್ನೆಲೆ; ರಾಜ್ಯಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮಕ್ಕೆ ಆರೋಗ್ಯ ಇಲಾಖೆ ಸೂಚನೆ

ನಿಫಾ ಸೋಂಕು ಹಿನ್ನೆಲೆ; ರಾಜ್ಯಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮಕ್ಕೆ ಆರೋಗ್ಯ ಇಲಾಖೆ ಸೂಚನೆ
ನಿಫಾ ಸೋಂಕು ಹಿನ್ನೆಲೆ; ರಾಜ್ಯಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮಕ್ಕೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು, ಜೂನ್ 4 (ಯುಎನ್ಐ) ಕೇರಳದಲ್ಲಿ 23 ವರ್ಷದ ವ್ಯಕ್ತಿಯಲ್ಲಿ ನಿಫಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೂಡ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಚಾಮರಾಜನಗರ, ಮೈಸೂರು, ಕೊಡಗು,ದಕ್ಷಿಣ ಕನ್ನಡ , ಉತ್ತರ ಕನ್ನಡ , ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಿಫಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಆರೋಗ್ಯ ಇಲಾಖೆ ಜಿಲ್ಲಾ ಕೇಂದ್ರಗಳಿಗೆ ಸೂಚನೆ ನೀಡಿದೆ.ಜಿಲ್ಲಾ ಮಟ್ಟದಲ್ಲಿ ಪಶು ಇಲಾಖೆಯನ್ನು ಒಳಗೊಂಡಂತೆ ಅಂತರ ಇಲಾಖೆ ಸಮಿತಿ ಸಭೆ ನಡೆಸಿ ಅಗತ್ಯ ಕ್ರಮಗಳ ಕುರಿತು ಚರ್ಚಿಸಬೇಕು. ಸೋಂಕು ಕಾಣಿಸಿಕೊಂಡ ವ್ಯಕ್ತಿಗಳ ಚಿಕಿತ್ಸೆಗೆ ಎರಡು ಹಾಸಿಗೆಗಳನ್ನು ಪ್ರತ್ಯೇಕವಾಗಿರಿಸಬೇಕು. ತುರ್ತು ನಿಗಾ ಘಟಕ ಹೊಂದಿರುವ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು. ಎಲ್ಲಾ ಜಿಲ್ಲಾ ಆರೋಗ್ಯ ಕೇಂದ್ರಗಳಿಂದ ಕಡ್ಡಾಯವಾಗಿ ನಿಯಮಿತ ವರದಿ ಸಲ್ಲಿಸಬೇಕು. ಆಶಾ ಕಾರ್ಯಕರ್ತರು ಹಾಗೂ ವೈದ್ಯಕೀಯ ಸಹಾಯಕರಿಗೆ ನಿಫಾ ಸೋಂಕಿನ ಕುರಿತು ಮಾಹಿತಿ ನೀಡಬೇಕು. ಶಂಕಿತ ಸೋಂಕಿನ ಮಾದರಿಗಳನ್ನು ತಪಾಸಣೆಗಾಗಿ ಪುಣೆಯ ಎನ್ ಐ ವಿ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ.ಮೊದಲು ಆಗ್ನೇಯ ಏಷಿಯಾದ ಮಲೇಶಿಯನ್ ಗ್ರಾಮದಲ್ಲಿ ಪ್ರಪ್ರಥಮವಾಗಿ ನಿಫಾ ಸೋಂಕು ಕಾಣಿಸಿಕೊಂಡಿತ್ತು. 1998ರಿಂದ ಇಲ್ಲಿಯವರೆಗೆ ಒಟ್ಟು 477 ಜನರು ಸೋಂಕಿಗೆ ಗುರಿಯಾಗಿದ್ದು, 248 ಜನರು ಮೃತಪಟ್ಟಿದ್ದಾರೆ. ಕೇರಳದಲ್ಲಿ ಹೆಚ್ಚಾಗಿ ಈ ಸೋಂಕು ಕಾಣಿಸಿಕೊಳ್ಳುತ್ತದೆ. 2018ರಲ್ಲಿ 18 ಸೋಂಕಿತ ವ್ಯಕ್ತಿಗಳು ಪತ್ತೆಯಾಗಿದ್ದು, 16 ಜನರು ಮೃತಪಟ್ಟಿದ್ದಾರೆ. ನಿಫಾ ಸೋಂಕು ಶೇ.40ರಿಂದ 70ರವರೆಗೆ ಮಾರಣಾಂತಿಕವಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಆರೋಗ್ಯ ಇಲಾಖೆ ಸೋಂಕು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಮಾಹಿತಿ ನೀಡಿದೆ.ಮಾಡಬೇಕಾದ್ದು-ನಿಫಾ ಸೋಂಕು ಹರಡುವಂತಹ ಹಂದಿ, ಕುದುರೆ, ನಾಯಿ , ಬೆಕ್ಕುಗಳಂತಹ ಪ್ರಾಣಿಗಳನ್ನು ಪ್ರತ್ಯೇಕವಾಗಿರಿಸಿ- ಸೋಂಕು ಶಂಕಿತ ವ್ಯಕ್ತಿಗಳನ್ನು ಜನರ ಸಂಪರ್ಕದಿಂದ ಪ್ರತ್ಯೇಕವಾಗಿರಿಸಿ- ಸೋಂಕಿತ ವ್ಯಕ್ತಿಗಳು ಬಳಸುವ ಬಟ್ಟೆ, ಸ್ನಾನದ ಗೃಹ ಹಾಗೂ ಶೌಚಾಲಯಗಳನ್ನು ಪ್ರತ್ಯೇಕವಾಗಿರಿಸಿ, ನಿಯಮಿತವಾಗಿ ಸ್ವಚ್ಚಗೊಳಿಸಿ

-ಸೋಂಕಿತ ವ್ಯಕ್ತಿಗಳೊಂದಿಗೆ ಹಸ್ತ ಲಾಘವ ಮಾಡಬಾರದು. ಒಂದೊಮ್ಮೆ ಮಾಡಿದಲ್ಲಿ ತಮ್ಮ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಿ-ರೋಗಿಗಳನ್ನು ಉಪಚರಿಸುವಾಗ ಮುಖಗವಸು(ಮಾಸ್ಕ್) ಹಾಗೂ ಕೈಗವಸು ಕಡ್ಡಾಯವಾಗಿ ಧರಿಸಿ- ಎಲ್ಲಾ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಅಥವಾ ಬೇಯಿಸಿ ತಿನ್ನಿ- ಫ್ಲೂ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ನಡೆಸಿ- ನೆರವಿಗಾಗಿ ಸಹಾಯವಾಗಿ 104ಕ್ಕೆ ಕರೆ ಮಾಡಿಏನು ಮಾಡಬಾರದು?

- ಪ್ರಾಣಿಗಳು ಹಾಗೂ ಪಕ್ಷಿಗಳು ಕಚ್ಚಿರುವ ಹಣ್ಣನ್ನು ತಿನ್ನಬೇಡಿ

- ಬಾವುಲಿಗಳು ಅತಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಲ್ಲಿ ಸಂಗ್ರಹಿಸಿರುವ ನೀರು ಕುಡಿಯಬೇಡಿ

- ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ

- ರೋಗಿಯ ಜೊಲ್ಲು, ಬೆವರು, ಮೂತ್ರ ಇತ್ಯಾದಿ ಶರೀರ ಸ್ರಾವದೊಂದಿಗೆ ಸಂಪರ್ಕ ತಪ್ಪಿಸಿ ಯುಎನ್ಐ ಎಸ್ಎಚ್ ವಿಎನ್ 1950

More News
ಯೋಗ-ಜ್ಞಾನಿಗಳು ಕಂಡಂತೆ

ಯೋಗ-ಜ್ಞಾನಿಗಳು ಕಂಡಂತೆ

15 Jun 2019 | 4:15 PM

(ಜೂನ್ 21ರಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಇಡೀ ವಿಶ್ವವೇ ಅದರ ತಯಾರಿಯಲ್ಲಿದೆ.

 Sharesee more..

ಯೋಗ-ಜ್ಞಾನಿಗಳು ಕಂಡಂತೆ

14 Jun 2019 | 2:25 PM

 Sharesee more..
ಯೋಗ-ಜ್ಞಾನಿಗಳು ಕಂಡಂತೆ

ಯೋಗ-ಜ್ಞಾನಿಗಳು ಕಂಡಂತೆ

13 Jun 2019 | 3:45 PM

(ಜೂನ್ 21ರಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಇಡೀ ವಿಶ್ವವೇ ಅದರ ತಯಾರಿಯಲ್ಲಿದೆ.

 Sharesee more..
ವಾಯ್ಲಾದಿಂದ ನೂತನ ಆಭರಣಗಳ ಸರಣಿ ‘ಬನಾರಸ್’ ಅನಾವರಣ

ವಾಯ್ಲಾದಿಂದ ನೂತನ ಆಭರಣಗಳ ಸರಣಿ ‘ಬನಾರಸ್’ ಅನಾವರಣ

11 Jun 2019 | 4:28 PM

ಬೆಂಗಳೂರು ಜೂ 11 (ಯುಎನ್ಐ) ಬನಾರಸ್ ನ ನದಿ ದಂಡೆಯಲ್ಲಿನ ಜೀವನದಿಂದ ಸ್ಪೂರ್ತಿ ಪಡೆದ ಫ್ಯಾಷನ್ ಆಭರಣಗಳ ಬ್ರಾಂಡ್ ವಾಯ್ಲಾ ತನ್ನ ನೂತನ ಆಕ್ಸಿಡೈಸ್ಡ್ ಆಭರಣಗಳ ಸಂಗ್ರಹ ‘ಬನಾರಸ್’ ಅನ್ನು ಬಿಡುಗಡೆ ಮಾಡಿದೆ.

 Sharesee more..