Tuesday, Oct 22 2019 | Time 09:04 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Sports Share

ನೀರಜ್ ಚೋಪ್ರಾ ಮೇಲೆ ಎಲ್ಲರ ಕಣ್ಣು

ರಾಂಚಿ, ಅ.9 (ಯುಎನ್ಐ)- ಭಾರತದ ಸ್ಟಾರ್ ಜಾವಲಿನ್ ಥ್ರೊ ಪಟು ನೀರಜ್ ಚೋಪ್ರಾ ಅವರು ಒಂದು ವರ್ಷಕ್ಕೂ ಅಧಿಕ ವೇಳೆಯ ವಿಶ್ರಾಂತಿಯ ಬಳಿಕ ಟ್ರ್ಯಾಕ್ ಗೆ ಇಳಿಯಲಿದ್ದು, 59ನೇ ಅಂತಾರಾಷ್ಟ್ರೀಯ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಅಖಾಡ ಪ್ರವೇಶಿಸಲಿದ್ದಾರೆ.
ನೀರಜ್ ಅಲ್ಲದೆ, ದೇಶದ ಇತರ ಖ್ಯಾತ ಕ್ರೀಡಾಪಟುಗಳಾದ ಮೊಹಮ್ಮದ್ ಅನಸ್ ಯಾಹಿಯಾ ಮತ್ತು ವಿಕೆ ವಿಸ್ಮಯಾ, ಲಾಂಗ್ ಜಂಪರ್ ಶ್ರೀಶಂಕರ್, ಜಿನ್ಸನ್ ಜಾನ್ಸನ್ ಜಾನ್ಸನ್, ಜಾವೆಲಿನ್ ಥ್ರೋ ಅಥ್ಲೀಟ್ ಅನು ರಾಣಿ, ಫರತಾ ಧವಿಕಾ ದುತಿ ಚಂದ್ ಮತ್ತು ಅರ್ಜುನ ಅವಾರ್ಡಿ ಶಾಟ್‌ಪುಟರ್ ತಾಜಿಂದರ್ ಪಾಲ್ ಸಿಂಗ್ ಟೂರ್ ಕೂಡ ಆಕರ್ಷಣೆಯ ಕೇಂದ್ರವಾಗಲಿದ್ದಾರೆ.
ಇತ್ತೀಚೆಗೆ ದೋಹಾದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾರತವು 27 ಸದಸ್ಯರನ್ನು ಕಣಕ್ಕಿಳಿಸಿತ್ತು. ಇದರಲ್ಲಿ ಭಾರತ ಎರಡು ವಿಭಾಗಗಳಲ್ಲಿ ಒಲಿಂಪಿಕ್ ಅರ್ಹತೆ ಪಡೆದುಕೊಂಡಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸಾಧನೆ ನಿರಾಶಾದಾಯಕವಾಗಿತ್ತು.
ಯುಎನ್ಐ ವಿಎನ್ಎಲ್ 1912