Sunday, Jan 19 2020 | Time 05:01 Hrs(IST)
Entertainment Share

ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಜಗ್ಗೇಶ್ ಗೆ ಕೊಟ್ಟ ಮಾತೇನು?

ಬೆಂಗಳೂರು, ಅ ೦೯ (ಯುಎನ್‌ಐ) ಅದು ಜಗ್ಗೇಶ್, ಗುರುಪ್ರಸಾದ್ ಜೋಡಿಯ ’ರಂಗನಾಯಕ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಹತ್ತು ವರ್ಷಗಳ ನಂತರ ಒಂದಾಗಿ ಸಿನಿಮಾ ಮಾಡುತ್ತಿರುವ ಖುಷಿ ಅವರಿಬ್ಬರ ಮೊಗದಲ್ಲಿ ಎದ್ದು ಕಾಣುತ್ತಿತ್ತು
ನನ್ನನ್ನು ಹಾಳು ಮಾಡಿದ್ದೇ ಸುನಿಲ್ ಕುಮಾರ್ ದೇಸಾಯಿ ಅವರ ಚಿತ್ರಗಳನ್ನು ನೋಡಿ ನೋಡಿ, ಸಿನಿಮಾ ಗೀಳು ಅಂಟಿಸಿಕೊಂಡೆ ಈ ಮಾತುಗಳೇ ಅವರಿಗೆ ನೀಡುವ ಗುರುಕಾಣಿಕೆ ಎಂದು ಸಮಾರಂಭಕ್ಕೆ ಆಗಮಿಸಿದ್ದ ಸುನಿಲ್ ಕುಮಾರ್ ದೇಸಾಯಿ ಅವರಿಗೆ ಗುರುಪ್ರಸಾದ್ ತಿಳಿಸಿದರು
ಇದೇ ವೇಳೆ ಜಗ್ಗೇಶ್, ಸುನಿಲ್ ಕುಮಾರ್ ದೇಸಾಯಿ ಅವರು ನನ್ನ ಅಕೌಂಟ್ ಚುಕ್ತಾ ಮಾಡಿಲ್ಲ ಬಾಕಿಯಿದೆ ಎಂದಾಗ, ಖಂಡಿತಾ ಲೆಕ್ಕ ಚುಕ್ತಾ ಆಗುತ್ತೆ ಇಬ್ಬರೂ ಒಟ್ಟಿಗೆ ಒಂದು ಸಿನಿಮಾ ಮಾಡೋಣ ಎಂದು ಸಮಾರಂಭದಲ್ಲಿಯೇ ಸುನಿಲ್ ಕುಮಾರ್ ದೇಸಾಯಿ ಜಗ್ಗೇಶ್ ಗೆ ಮಾತು ಕೊಟ್ಟರು
ನಿರ್ಮಾಪಕ ದೇವೇಂದ್ರ ರೆಡ್ಡಿ ಬೆಂಬಲದೊಡನೆ ಡಾಟರ್ ಆಫ್ ಪಾರ್ವತಮ್ಮ ಮತ್ತು ಸದ್ಯದಲ್ಲೇ ತೆರೆ ಕಾಣಲಿರುವ ಇನ್ಸ್ ಪೆಕ್ಟರ್ ವಿಕ್ರಂ ನಿರ್ಮಿಸಿರುವ ವಿಖ್ಯಾತ್ ’ರಂಗನಾಯಕ ನಿಗೆ ಬಂಡವಾಳ ಹೂಡಿದ್ದು, ಸ್ವತಂತ್ರ ನಿರ್ಮಾಪಕರಾಗಿದ್ದಾರೆ. ಆದರೆ ದೇವೇಂದ್ರ ರೆಡ್ಡಿಯವರ ನೈತಿಕ ಬೆಂಬಲ ಅವರ ಬೆನ್ನಿಗಿದೆಯಂತೆ
ಗುರುಪ್ರಸಾದ ಅರ್ಧಂಬರ್ಧ ಪಳಗಿರುವ ಆನೆ: ಜಗ್ಗೇಶ್
ನಿರ್ದೇಶಕ ಗುರುಪ್ರಸಾದ್ ಅವರನ್ನು ಅರ್ಧಂಬರ್ಧ ಪಳಗಿರುವ ಆನೆ
ದೇವಸ್ಥಾನದಲ್ಲಿ ಬಿಟ್ಟರೆ ಗಲಾಟೆ ಮಾಡುತ್ತೆ ಅಂತ ನಟ ಜಗ್ಗೇಶ್ ಛೇಡಿಸಿದರು
ಮಠ ನನ್ನ ೧೦೦ನೇ ಚಿತ್ರ ಕೆಲವರು ಜಗ್ಗೇಶ್ ಕಾವಿ ತೊಟ್ಟು ಮಠ ಸೇರ್ತಾರೆ ಎಂದು ವ್ಯಂಗ್ಯವಾಡಿದರು. ಆದರೆ ನನ್ನ ಅಭಿನಯದ ಅತಿಹೆಚ್ಚು ಗಳಿಕೆಯ ಚಿತ್ರ ಮಠ. ೧ ಕೋಟಿ ೮ ಲಕ್ಷ ರೂ ಗಳಿಸಿತ್ತು ಗುರುಪ್ರಸಾದ್ ಅವರಲ್ಲಿ ಏನನ್ನಾದರೂ ಸಾಧಿಸುವ ಛಲವಿದೆ
ಪ್ರತಿಯೊಬ್ಬ ಮನುಷ್ಯನಿಗೂ ಟೈಮ್ ಬರುತ್ತೆ. ಗುರೂಗೇ ಮುಂದೆ ಒಳ್ಳೆಯದಾಗುತ್ತೆ. ಮನ ಬಿಚ್ಚಿ ಮಾತಾಡಿ ನಮ್ಮಿಬ್ಬರ ನಡುವಿನ ಎಲ್ಲ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡಿದ್ದೇವೆ ಕಲಾವಿದನಿಗೆ ಸಿಗುವ ಚಪ್ಪಾಳೆ ನಿರ್ದೇಶಕ ನಿಂದ ಸಿಗುವ ಗೌರವ. ಹೀಗಾಗಿ ನಿರ್ದೇಶಕರನ್ನು ಗೌರವಿಸಬೇಕು ಎಂದು ಜಗ್ಗೇಶ್ ಹೇಳಿದರು.
ಯುಎನ್‌ಐ ಎಸ್‌ಎ ವಿಎನ್ ೧೮೨೦
More News

ಜೊತೆಯಾಗುತ್ತಾರಾ ಶಾರುಖ್, ರಣಬೀರ್ !

18 Jan 2020 | 5:20 PM

 Sharesee more..

ಸೈಫ್ ಗೆ ವಯಸ್ಸಿಗೆ ತಕ್ಕ ಪಾತ್ರಮಾಡುವಾಸೆ

18 Jan 2020 | 5:18 PM

 Sharesee more..

‘ಲವ್‍ ಮಾಕ್‍ಟೇಲ್‍’ ತಂಡಕ್ಕೆ ಕಿಚ್ಚನ ಹಾರೈಕೆ

18 Jan 2020 | 12:51 PM

 Sharesee more..