Thursday, Oct 1 2020 | Time 23:03 Hrs(IST)
 • ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಉಳಿದೆಡೆ ಇನ್ನಷ್ಟು ಚಟುವಟಿಕೆಗೆ ಅವಕಾಶ ಕಲ್ಪಿಸುವ ಮಾರ್ಗಸೂಚಿ ಬಿಡುಗಡೆ
 • ಬಿಬಿಎಂಪಿ ಕಾಮಗಾರಿ, ಯೋಜನೆಗಳ ವಿವರ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು; ಮಂಜುನಾಥ್‌ ಪ್ರಸಾದ್
 • ‘ಜಲ ಜೀವನ್ ಮಿಷನ್’ ಪರಿಣಾಮಕಾರಿ ಅನುಷ್ಠಾನ ಪ್ರಯತ್ನಗಳ ಮುಂದುವರಿಸುವಂತೆ ಗ್ರಾಮಪಂಚಾಯಿತಿಗಳಿಗೆ ಪ್ರಧಾನಿ ಕರೆ
 • ಒಂದು ವಾರ ವಿಶ್ರಾಂತಿಯ ಸಂಪೂರ್ಣ ಲಾಭ ಪಡೆದಿದ್ದೇವೆ: ಸಿಎಸ್‌ಕೆ ಕೋಚ್‌ ಫ್ಲೆಮಿಂಗ್
 • ರೋಹಿತ್ ಅರ್ಧಶತಕದ ಮಿಂಚು, ಮುಂಬಯಿ ಸವಾಲಿನ ಮೊತ್ತ
 • ರಾಹುಲ್, ಪ್ರಿಯಾಂಕಾ ಮೇಲಿನ ದೌರ್ಜನ್ಯ ವಿರೋಧಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ; ನಾಯಕರ ಬಂಧನ
 • ರಾಹುಲ್ ಗಾಂಧಿ, ಪ್ರಿಯಾಂಕಾ ಬಂಧನಕ್ಕೆ ಸಿದ್ದರಾಮಯ್ಯ ಕಿಡಿ
 • ರಾಜ್ಯದಲ್ಲಿ 10,070 ಕೊರೋನಾ ಸೋಂಕು ಪತ್ತೆ: ಒಂದೇ ದಿನ 96,588 ದಾಖಲೆಯ ಸೋಂಕು ಪತ್ತೆ ಪರೀಕ್ಷೆ
 • ವಿಧಾನ ಪರಿಷತ್ ನ 4 ಸ್ಥಾನಗಳಿಗೆ ಚುನಾವಣೆಗೆ ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಆರಂಭ
 • ಭಾರತೀಯ ತೈಲ ನಿಗಮದಿಂದ ಪೆಟ್ರೋಲಿಯಂ ಉತ್ಪನ್ನಗಳ ಚಿಲ್ಲರೆ ಮಾರಾಟ ದರ ಇಳಿಕೆ
 • ರಾಜ್ಯದಲ್ಲಿ ಮುಂದುವರಿದ ಕೋವಿಡ್‌ ಪ್ರಕರಣಗಳ ಏರಿಕೆ; 1 10 ಲಕ್ಷ ತಲುಪಿದ ಸಕ್ರಿಯ ಪ್ರಕರಣಗಳು
 • ರಾಹುಲ್, ಪ್ರಿಯಾಂಕಾ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿದ ಜೆಡಿಎಸ್
 • ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಗಳ ಹೆಸರು ಅಖೈರು
 • ಮೀಸಲು ಅರಣ್ಯದಲ್ಲಿ ಕಡವೆ ಬೇಟೆ; ಆರೋಪಿಗಳು ಅರಣ್ಯ ಇಲಾಖೆ ಬಲೆಗೆ
 • ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಮೊದಲ ಬಾರಿಗೆ ಚಿಟ್ಟೆ ಪ್ರಬೇಧಗಳ ಸಮೀಕ್ಷೆ
Entertainment Share

ನಿರ್ಮಾಪಕರಲ್ಲಿ ಒಗ್ಗಟ್ಟಿಲ್ಲ, ಉತ್ತಮ ಚಿತ್ರಗಳಿಗೆ ಉಳಿಗಾಲವಿಲ್ಲ; ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರು ಯಾರೂ ಇಲ್ಲ

ನಿರ್ಮಾಪಕರಲ್ಲಿ ಒಗ್ಗಟ್ಟಿಲ್ಲ, ಉತ್ತಮ ಚಿತ್ರಗಳಿಗೆ ಉಳಿಗಾಲವಿಲ್ಲ; ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರು ಯಾರೂ ಇಲ್ಲ
ನಿರ್ಮಾಪಕರಲ್ಲಿ ಒಗ್ಗಟ್ಟಿಲ್ಲ, ಉತ್ತಮ ಚಿತ್ರಗಳಿಗೆ ಉಳಿಗಾಲವಿಲ್ಲ; ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರು ಯಾರೂ ಇಲ್ಲ

-ವಿಶೇಷ ವರದಿ: ಎಸ್ ಆಶಾ ಕಶ್ಯಪ್ಬೆಂಗಳೂರು, ಫೆ 13 (ಯುಎನ್‍ಐ) ಚಲನಚಿತ್ರಗಳನ್ನು ವೀಕ್ಷಿಸಲು ವಾರಾಂತ್ಯ ಅಥವಾ ಸೂಕ್ತ, ಸಮಯ, ದಿನಾಂಕ ನಿರ್ಧರಿಸುವ ಕಾಲವೊಂದಿತ್ತು ಆದರೀಗ ಏನಾಗಿದೆ? ಚಿತ್ರಮಂದಿರದತ್ತ ಬರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಜನಪ್ರಿಯ ನಟರ ಚಿತ್ರಗಳೂ ಸಹ 25 ದಿನ ಪ್ರದರ್ಶನ ಕಂಡರೆ ಹೆಚ್ಚು ಎನ್ನುವಂತಾಗಿದೆದಶಕಗಳು ಕಳೆದಂತೆ ಕನ್ನಡ ಚಿತ್ರರಂಗ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುತೇಕ ಕನ್ನಡ ಚಿತ್ರಗಳು ಹೆಸರು ಮಾಡುತ್ತಿವೆ ಇಷ್ಟಾದರೂ ಚಿತ್ರ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಲಭ್ಯವಿಲ್ಲಕಥೆ, ಚಿತ್ರಕಥೆ, ಸಂಭಾಷನೆ, ಮೇಕಿಂಗ್, ಸೂಕ್ತ ನಟ, ನಟಿಯರು ಎಲ್ಲವೂ ಇದ್ದ ಚಿತ್ರಗಳು ಒಂದು ವಾರಕ್ಕೇ ಥಿಯೇಟರ್ ನಿಂದ ಮಾಯವಾಗುತ್ತಿವೆ ಅಥವಾ ಎತ್ತಂಗಡಿಯಾಗುತ್ತಿವೆ ಈ ಕುರಿತು ‘ಜಂಟಲ್ ಮ್ಯಾನ್’ ಸುದ್ದಿಗೋಷ್ಠಿಯಲ್ಲಿ ಒಂದಷ್ಟು ಕಥೆ, ವ್ಯಥೆಯನ್ನು ಹಂಚಿಕೊಂಡ ನಿರ್ಮಾಪಕ, ನಿರ್ದೇಶಕ ಗುರುದೇಶಪಾಂಡೆ, “ನಿರ್ಮಾಪಕರುಗಳೇ ಇದರ ಬಗ್ಗೆ ಚಿಂತಿಸಿ, ಸರಿಯಾದ ನಿರ್ಧಾರಕ್ಕೆ ಬರಬೇಕು ಅಲ್ಲಿಯವರೆಗೂ ಇದಕ್ಕೆ ಪರಿಹಾರವಿಲ್ಲ” ಎಂದರು

ಈ ವಾರ 13 ಚಿತ್ರಗಳು ರಿಲೀಸ್‍!

‘ಮದುವೆ ಮಾಡ್ರಿ ಸರಿ ಹೋಗ್ತಾನೆ’, ‘ಪ್ರೀತಿ ಎಂದರೇನು’, ‘ನವರತ್ನ’, ‘ಸಾಗುತ ದೂರ ದೂರ’, ‘ಡೆಮೋ ಪೀಸ್’, ‘ಗಿಫ್ಟ್ ಬಾಕ್ಸ್’, ‘ಬೆಂಕಿಯಲ್ಲಿ ಅರಳಿದ ಹೂವು’, ‘ಗಡ್ಡಪ್ಪನ ಸರ್ಕಲ್’, ‘ಸಾವು’, ‘ಲೈಟ್ ಆಗಿ ಲವ್ ಆಗಿದೆ’, ‘ತುಂಡ್ ಹೈಕಳ ಸಹವಾಸ’ ಪ್ರೇಮಸ್ವರ, ಎನ್ನ(ತುಳು) ಸೇರಿದಂತೆ 13 ಚಿತ್ರಗಳು ತೆರೆಗೆ ಬರಲಿವೆಹೀಗಾಗಿ ಕಳೆದ ವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಲವ್ ಮಾಕ್ ಟೇಲ್’, ‘ಜಂಟಲ್ ಮ್ಯಾನ್’, ‘ನಾನು ಮತ್ತು ಗುಂಡ’ ನ ಸ್ಥಿತಿ ಏನಾದೀತೋ ಗೊತ್ತಿಲ್ಲ ಈ ಕುರಿತು ಪ್ರಸ್ತಾಪಿಸಿದ ಗುರುದೇಶ್ ಪಾಂಡೆ, “ಪ್ರತಿ ವಾರ 10 ರಿಂದ 13 ಚಿತ್ರಗಳು ತೆರೆಗೆ ಬರುವುದಾದರೆ ಉತ್ತಮವಾಗಿ ಓಡುತ್ತಿರುವ ಚಿತ್ರಗಳ ಪಾಡೇನು? ಇದಕ್ಕೆಲ್ಲ ನಿರ್ಮಾಪಕರೇ ಕಾರಣ ಎಷ್ಟು ದುಡ್ಡಾದರೂ ಪರವಾಗಿಲ್ಲ ಎಂದು ಸಿಂಗಲ್ ಥಿಯೇಟರ್ ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಾರೆ, ಥಿಯೇಟರ್ ಬಾಡಿಗೆಯನ್ನೂ ಮುಂಚಿತವಾಗಿಯೇ ನೀಡುತ್ತಾರೆ ಇನ್ನು, ಬುಕ್ ಮೈ ಶೋ ಅನ್ನು ಕೂಡ ನಂಬುವಂತಿಲ್ಲ. .. . ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಇದ್ದರೂ ರೇಟಿಂಗ್ ಕಡಿಮೆ ಹಾಕುತ್ತಾರೆ, ಖಾಲಿ ಹೊಡೆಯುತ್ತಿದ್ದರೂ ರೇಟಿಂಗ್ 99 ಪರ್ಸೆಂಟ ಹಾಕಿರುತ್ತಾರೆ ಇದನ್ನೆಲ್ಲ ಕೇಳೋರು ಯಾರು? ಎಂದು ಅಲವತ್ತುಕೊಂಡರು

ದರ್ಶನ್ ಹೇಳಿದ್ದು ಸರಿಯಾಗಿಯೇ ಇದೆ

ರಾಜ್ಯದಲ್ಲಿ ತಮಿಳು, ತೆಲುಗು, ಹಿಂದಿ ಸೇರಿದಂತೆ ಪರಭಾಷಾ ಚಿತ್ರಗಳು ಯಶಸ್ವಿಯಾಗಿ ಓಡುತ್ತಿರುವಾಗ, ಕನ್ನಡ ಚಿತ್ರಮಂದಿರಗಳೇಕ್ ಖಾಲಿ ಹೊಡೆಯುತ್ತವೆ ಇದನ್ನು ಮನಗಂಡು, ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಅಂಡು ಬಗ್ಗಿಸಿ ಕನ್ನಡ ಚಿತ್ರ ನೋಡಿ’ ಎಂದಿದ್ದರು ಇದರಲ್ಲಿ ತಪ್ಪೇನೂ ಇಲ್ಲ ಎಲ್ಲರೂ ಸೇರಿಕೊಂಡು ಕನ್ನಡ ಚಿತ್ರರಂಗವನ್ನು ಉಳಿಸಬೇಕಿದೆ ಎಂದು ಗುರುದೇಶಪಾಂಡೆ ಅಭಿಪ್ರಾಯಪಟ್ಟರುಆದರ, ನಿರ್ಮಾಪಕರು ನಿರ್ದೇ‍ಶಕರಲ್ಲಿಯೇ ಹೊಂದಾಣಿಕೆ ಇಲ್ಲದಿರುವಾಗ, ಚಲನಚಿತ್ರ ವಾಣಿಜ್ಯ ಮಂಡಳಿ ಏನೂ ಮಾಡಲಾಗದಂತಹ ಪರಿಸ್ಥಿತಿಯಲ್ಲಿರುವಾಗ, ಚಿತ್ರಮಂದಿರಗಳ ಕೊರತೆಯೊಂದಿಗೆ ವಾರಕ್ಕೆ 10 ರಿಂದ 12 ಚಿತ್ರ ಬಿಡುಗಡೆ ಮಾಡುತ್ತಿರುವ ಸಂದರ್ಭದಲ್ಲಿ ಯಾರು ಏನು ಮಾಡಲು ಸಾಧ್ಯ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರು ಯಾರು, ನಮ್ಮನ್ನು ಉಳಿಸೋರು ಯಾರು ಎಂಬ ಪ್ರಶ್ನೆ ಮತ್ತೆ ಕಾಡುತ್ತದೆ ಅಷ್ಟೆ.ಯುಎನ್‍ಐ ಎಸ್‍ಎ ವಿಎನ್ 1610

More News

ನಿರ್ಮಾಪಕ ಎಸ್‍‍ ಕೆ ಕೃಷ್ಣಕಾಂತ್ ವಿಧಿವಶ

01 Oct 2020 | 2:34 PM

 Sharesee more..

‘ಗಾಂಧಿ ಮತ್ತು ನೋಟು' ಚಿತ್ರೀಕರಣ ಪೂರ್ಣ

01 Oct 2020 | 11:28 AM

 Sharesee more..

ಸಲ್ಮಾನ್ ಖಾನ್ ರ ರಾಧೆ ಚಿತ್ರದ ಚಿತ್ರಿಕರಣ ಆರಂಭ

30 Sep 2020 | 5:23 PM

 Sharesee more..