Wednesday, Dec 2 2020 | Time 07:49 Hrs(IST)
National Share

ನ 23 ರಂದು ಪ್ರಧಾನಿಯಿಂದ ಸಂಸದರ ಬಹುಮಹಡಿ ಫ್ಲ್ಯಾಟ್‌ಗಳ ಉದ್ಘಾಟನೆ

ನವದೆಹಲಿ, ನ 21 (ಯುಎನ್‍ಐ)- ಸಂಸತ್ ಸದಸ್ಯರಿಗೆ ನಿರ್ಮಿಸಲಾಗಿರುವ ಬಹುಮಹಡಿ ಫ್ಲ್ಯಾಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ನ 23 ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಹ ಉಪಸ್ಥಿತರಿರಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಶನಿವಾರ ಇಲ್ಲಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಫ್ಲ್ಯಾಟ್‌ಗಳು ನವದೆಹಲಿಯ ಡಾ ಬಿ ಡಿ ಮಾರ್ಗದಲ್ಲಿವೆ. 76 ಫ್ಲ್ಯಾಟ್‌ಗಳನ್ನು ನಿರ್ಮಿಸಲು 80 ವರ್ಷಗಳಿಗೂ ಹಳೆಯದಾದ ಎಂಟು ಬಂಗಲೆಗಳನ್ನು ಪುನರಾಭಿವೃದ್ಧಿ ಮಾಡಲಾಗಿದೆ.
ಫ್ಲ್ಯಾಟ್‌ಗಳ ನಿರ್ಮಾಣ ಮಂಜೂರಾದ ವೆಚ್ಚಕ್ಕಿಂತ ಸುಮಾರು ಶೇ 14ರಷ್ಟು ಉಳಿತಾಯದೊಂದಿಗೆ ಪೂರ್ಣಗೊಂಡಿವೆ. ಕೋವಿಡ್ -19 ಹೊರತಾಗಿಯೂ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕಾಮಗಾರಿಗಳು ಪೂರ್ಣಗೊಂಡಿವೆ.
ಈ ಯೋಜನೆಯ ಕಾಮಗಾರಿಗಳಲ್ಲಿ ಅನೇಕ ಪರಿಸರ ಸ್ನೇಹಿ ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಹಾರುವ ಬೂದಿಯಿಂದ, ಕಟ್ಟಡ ನಿರ್ಮಾಣ ತ್ಯಾಜ್ಯದಿಂದ ತಯಾರಿಸಿದ ಇಟ್ಟಿಗೆಗಳು, ಉಷ್ಣ ನಿರೋಧಕ ಮತ್ತು ಇಂಧನ ದಕ್ಷತೆಗಾಗಿ ವಿನ್ಯಾಸಗೊಳಿಸಿರುವ ಕಿಟಕಿಗಳು, ಇಂಧನ ದಕ್ಷತೆಯ ಎಲ್ಇಡಿ ದೀಪಗಳು, ಬೆಳಕಿನ ನಿಯಂತ್ರಣಕ್ಕಾಗಿ ಆಕ್ಯುಪೆನ್ಸಿ ಆಧಾರಿತ ಸಂವೇದಕಗಳು, ವಿಆರ್ ವಿ ಯೊಂದಿಗೆ ಹವಾನಿಯಂತ್ರಕಗಳು ಸೇರಿದಂತೆ ಹಲವಾರು ಹಸಿರು ಕಟ್ಟಡ ಉಪಕ್ರಮಗಳನ್ನು ಫ್ಲಾಟ್‍ಗಳಲ್ಲಿ ಅಳವಡಿಸಲಾಗಿದೆ. ಕಡಿಮೆ ವಿದ್ಯುತ್ ಬಳಕೆಗಾಗಿ ವಿಶೇಷ ವ್ಯವಸ್ಥೆ, ಮಳೆನೀರು ಕೊಯ್ಲು ವ್ಯವಸ್ಥೆ ಮತ್ತು ಮೇಲ್ಛಾವಣಿಯಲ್ಲಿ ಸೌರ ಸ್ಥಾವರಗಳನ್ನೂ ಅಳವಡಿಸಲಾಗಿದೆ.
ಯುಎನ್‍ಐ ಎಸ್ಎಲ್ಎಸ್ 2109
More News
ಐಸಿಐಸಿಐ ಬ್ಯಾಂಕ್ ಸಿಇಒ ಹುದ್ದೆಯಿಂದ ವಜಾ ವಿರುದ್ಧ ಚಂದಾ ಕೊಚ್ಚರ್ ಸಲ್ಲಿಸಿದ್ದ ಮನವಿ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ತಿರಸ್ಕೃತ

ಐಸಿಐಸಿಐ ಬ್ಯಾಂಕ್ ಸಿಇಒ ಹುದ್ದೆಯಿಂದ ವಜಾ ವಿರುದ್ಧ ಚಂದಾ ಕೊಚ್ಚರ್ ಸಲ್ಲಿಸಿದ್ದ ಮನವಿ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ತಿರಸ್ಕೃತ

01 Dec 2020 | 8:29 PM

ನವದೆಹಲಿ, ಡಿ 1 (ಯುಎನ್‌ಐ) ತಮ್ಮನ್ನು ಹುದ್ದೆಯಿಂದ ವಜಾಗೊಳಿಸಿದ ಐಸಿಐಸಿಐ ಬ್ಯಾಂಕ್‍ ಕ್ರಮದ ವಿರುದ್ಧ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ಚಂದಾ ಕೊಚ್ಚರ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿರುವ ವಿಷಯದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

 Sharesee more..
‘ಜೀವನ ಪರ್ಯಂತ ಸೇವೆ’ ಬಿಎಸ್‌ಎಫ್ ಧ್ಯೇಯವಾಕ್ಯ: ಅಮಿತ್ ಶಾ

‘ಜೀವನ ಪರ್ಯಂತ ಸೇವೆ’ ಬಿಎಸ್‌ಎಫ್ ಧ್ಯೇಯವಾಕ್ಯ: ಅಮಿತ್ ಶಾ

01 Dec 2020 | 5:48 PM

ನವದೆಹಲಿ, ಡಿ01 (ಯುಎನ್‌ಐ) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಭದ್ರತಾ ಪಡೆಯ 56 ನೇ ಸಂಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ.

 Sharesee more..